ಬೆಂಗಳೂರಿನ ಡಾ. ವಿಕ್ರಮ್ ಸಂಪತ್ ಅವರು ಭಾರತದ ಜನಪ್ರಿಯ ಇತಿಹಾಸಕಾರರು ಮತ್ತು ಲೇಖಕರಾಗಿದ್ದಾರೆ. 2021 ರಲ್ಲಿ, ಅವರು ಪ್ರತಿಷ್ಠಿತ ‘ರಾಯಲ್ ಹಿಸ್ಟಾರಿಕಲ್ ಸೊಸೈಟಿ’ಯ ‘ಫೆಲೋ’ ಆಗಿ ಆಯ್ಕೆಯಾದರು. ಈ ಸೊಸೈಟಿಯ ‘ಫೆಲೋ’ ಆಗಿರುವುದು ಇಂಗ್ಲೆಂಡ್‌ನಲ್ಲಿ ಇತಿಹಾಸ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ ಮತ್ತು ಉನ್ನತ ಮಟ್ಟದ ಸಂಶೋಧನೆ ಮಾಡಿದ ವ್ಯಕ್ತಿಗಳಿಗೆ ನೀಡಲಾಗುವ ಗೌರವವಾಗಿದೆ. ಅವರಿಗೆ ಸಾಹಿತ್ಯ ಅಕಾಡೆಮಿಯ ಮೊದಲ ಇಂಗ್ಲಿಷ್ ಯುವ ಪುರಸ್ಕಾರ ಲಭಿಸಿದೆ. ಅವರ ‘ಮೈ ನೇಮ್ ಈಸ್ ಗೌಹರ್ ಜಾನ್: ದಿ ಲೈಫ್ ಅಂಡ್ ಟೈಮ್ಸ್ ಆಫ್ ಎ ಮ್ಯೂಸಿಷಿಯನ್’ ಪುಸ್ತಕವು ನ್ಯೂಯಾರ್ಕ್‌ನ ‘ಎ.ಆರ್.ಎಸ್.ಸಿ. ಇಂಟರ್‌ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ಹಿಸ್ಟಾರಿಕಲ್ ರಿಸರ್ಚ್’ ಪ್ರಶಸ್ತಿಯನ್ನು ಪಡೆದಿದೆ. ಈ ಪುಸ್ತಕವು ಲಿಲೆಟ್ ದುಬೆ ಅವರ ‘ಗೌಹರ್’ ನಾಟಕದಿಂದ ರೂಪಾಂತರಗೊಂಡಿದೆ.
ವಿಶೇಷ ಸರಣಿ
ಛತ್ರಪತಿ ಶಿವಾಜಿ ಮಹಾರಾಜರು ಸ್ಥಾಪಿಸಿದ ಹಿಂದವಿ ಸ್ವರಾಜ್ಯಕ್ಕಾಗಿ ಸೈನಿಕರು ಮತ್ತು ಅಶ್ವಾರೂಢ ಸೈನಿಕರು ಮಾಡಿದ ತ್ಯಾಗ ಎಷ್ಟು ಶ್ರೇಷ್ಠವೋ, ಅದೇ ರೀತಿ ಇಂದಿಗೂ ಅನೇಕ ಹಿಂದುತ್ವನಿಷ್ಠ ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಹಿಂದೂ ಧರ್ಮ ಮತ್ತು ರಾಷ್ಟ್ರಗಳ ರಕ್ಷಣೆಗಾಗಿ ‘ಅಶ್ವಾರೂಢ ಸೈನಿಕ’ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾತ್ಯತೀತ ಸರಕಾರ, ಆಡಳಿತ ಮತ್ತು ಪೊಲೀಸರಿಂದ ಎದುರಾಗುವ ತೊಂದರೆಗಳನ್ನು ಸಹಿಸಿಕೊಂಡು ನಿಸ್ವಾರ್ಥ ಭಾವದಿಂದ ಅವರು ಕೇವಲ ರಾಷ್ಟ್ರ-ಧರ್ಮ ರಕ್ಷಣೆಗಾಗಿ ಹಗಲಿರುಳು ಹೋರಾಡುತ್ತಿದ್ದಾರೆ.
1. ಡಾ. ವಿಕ್ರಮ್ ಸಂಪತ್ ಅವರ ಸಂಶೋಧನೆ, ಅವರು ಸ್ಥಾಪಿಸಿದ ಸಂಸ್ಥೆಗಳು ಮತ್ತು ಇತರ ಮಾಹಿತಿ
2015 ರಲ್ಲಿ ರಾಷ್ಟ್ರಪತಿ ಭವನದ ‘ನಿವಾಸಿ ಲೇಖಕ’ (ರೈಟರ್ ಇನ್ ರೆಸಿಡೆನ್ಸ್) ಯೋಜನೆಯಡಿ ಆಯ್ಕೆಯಾದ 4 ಲೇಖಕರಲ್ಲಿ ಡಾ. ವಿಕ್ರಮ್ ಸಂಪತ್ ಕೂಡ ಒಬ್ಬರು. ಅವರು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದಿಂದ ‘ಇತಿಹಾಸ ಮತ್ತು ಸಂಗೀತ’ ವಿಷಯಗಳಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ನವದೆಹಲಿಯ ‘ನೆಹರು ಮೆಮೋರಿಯಲ್ ಲೈಬ್ರರಿ’ಯಲ್ಲಿ ಹಿರಿಯ ಸಂಶೋಧನಾ ಫೆಲೋ ಆಗಿದ್ದರು. ಇದರೊಂದಿಗೆ, ಅವರು ‘ಆಸ್ಪೆನ್ ಗ್ಲೋಬಲ್ ಲೀಡರ್‌ಶಿಪ್ ನೆಟ್‌ವರ್ಕ್’, ‘ಐಸೆನ್‌ಹೋವರ್ ಗ್ಲೋಬಲ್ ಫೆಲೋ’ ಮತ್ತು ‘ವಿಸ್ಸೆನ್‌ಶಾಫ್ಟ್ಸ್‌ಕೊಲೆಗ್ ಜು ಬರ್ಲಿನ್’ನಲ್ಲಿಯೂ ಫೆಲೋ ಆಗಿದ್ದರು.
ಶಿವನಿಗಾಗಿ ಕಾಯುವಿಕೆ: ವಾರಣಾಸಿಯ ‘ಜ್ಞಾನವಾಪಿ’ಯ ಸತ್ಯ ದರ್ಶನ
2024 ರಲ್ಲಿ ‘ವೇಟಿಂಗ್ ಫಾರ್ ಶಿವ: ಅನ್‌ಅರ್ಥಿಂಗ್ ದಿ ಟ್ರುತ್ ಆಫ್ ಕಾಶಿ’ಸ್ ಜ್ಞಾನವಾಪಿ’ ಎಂಬ ಪುಸ್ತಕ ಪ್ರಕಟವಾಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಪ್ರಧಾನಮಂತ್ರಿ ಸಂಗ್ರಹಾಲಯ ಮತ್ತು ಗ್ರಂಥಾಲಯ ಸಭಾಂಗಣ’ದಲ್ಲಿ ಇದನ್ನು ಬಿಡುಗಡೆ ಮಾಡಿದರು. ಈ ಪುಸ್ತಕವು ಇತಿಹಾಸ, ಧರ್ಮ, ಪುರಾತತ್ವ ಮತ್ತು ಕಾನೂನಿನ ದೃಷ್ಟಿಕೋನದಿಂದ ಹಿಂದೂಗಳು ಮಾಡಿದ ಮರುಸ್ಥಾಪನೆಯ ಪ್ರಯತ್ನಗಳನ್ನು ವಿಶ್ಲೇಷಿಸುತ್ತದೆ. ಡಾ. ಸಂಪತ್ ಅವರು ಶಿವನ ಮೇಲಿನ ಹಿಂದೂಗಳ ಭಕ್ತಿಯನ್ನು ದೇವಾಲಯದಲ್ಲಿ ‘ನಂದಿಯು ಶಿವನ ದರ್ಶನಕ್ಕಾಗಿ ಕಾಯುತ್ತಿದ್ದಾನೆ’ ಎಂಬುದಕ್ಕೆ ಹೋಲಿಸಿದ್ದಾರೆ. ಈ ರೀತಿಯಾಗಿ ಅವರು ಭಾರತದ ವೈಭವಯುತ ಇತಿಹಾಸವನ್ನು ಜನರ ಮುಂದೆ ತಂದರು.
ಪ್ರಸ್ತುತ ಅವರು ಆಸ್ಟ್ರೇಲಿಯಾದ ‘ಮೊನಾಶ್ ವಿಶ್ವವಿದ್ಯಾಲಯ’ದಲ್ಲಿ ‘ಅಡ್ಜಂಟ್ ಸೀನಿಯರ್ ಫೆಲೋ’ ಆಗಿದ್ದಾರೆ. ಅವರು ‘ಆರ್ಕೈವ್ ಆಫ್ ಇಂಡಿಯನ್ ಮ್ಯೂಸಿಕ್’ ಮತ್ತು ‘ಫೌಂಡೇಶನ್ ಫಾರ್ ಇಂಡಿಯನ್ ಹಿಸ್ಟಾರಿಕಲ್ ಅಂಡ್ ಕಲ್ಚರಲ್ ರಿಸರ್ಚ್’ ಎಂಬ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ, ಇವು ಭಾರತೀಯ ಇತಿಹಾಸದ ಹೊಸ ಅಧ್ಯಯನ ಮತ್ತು ಸಂಶೋಧನೆ ಮಾಡುತ್ತವೆ. ಇದರೊಂದಿಗೆ ಅವರು ‘ಅರ್ಥ: ಎ ಕಲ್ಚರ್ ಫೆಸ್ಟ್’ ಎಂಬ ಉತ್ಸವವನ್ನು ಆಯೋಜಿಸಿದ್ದಾರೆ. ಅವರು ‘ಬೆಂಗಳೂರು ಸಾಹಿತ್ಯ ಉತ್ಸವ’ದ ಸಂಸ್ಥಾಪಕರೂ ಆಗಿದ್ದಾರೆ.
2. ಡಾ. ವಿಕ್ರಮ್ ಸಂಪತ್ ಅವರ ಮಹತ್ವದ ಬರಹಗಳು
ಅ. ಡಾ. ವಿಕ್ರಮ್ ಸಂಪತ್ ಅವರ ಪ್ರಮುಖ ಪುಸ್ತಕಗಳು: ‘ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ದಿ ಒಡೆಯರ್ಸ್’, ‘ವಾಯ್ಸ್ ಆಫ್ ದಿ ವೀಣಾ: ಎಸ್. ಬಾಲಚಂದರ್’, ‘ವುಮೆನ್ ಆಫ್ ದಿ ರೆಕಾರ್ಡ್ಸ್’, ‘ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಅಂಡ್ ದಿ ಗ್ರಾಮೋಫೋನ್’. ಅವರ ಎರಡು ಭಾಗಗಳ ‘ಸಾವರ್ಕರ್: ಎಕೋಸ್ ಫ್ರಮ್ ಎ ಫರ್ಗಾಟನ್ ಪಾಸ್ಟ್’ ಮತ್ತು ‘ಸಾವರ್ಕರ್: ಎ ಕಂಟೆಸ್ಟೆಡ್ ಲೆಗಸಿ’, ಹಾಗೂ ಇತ್ತೀಚಿನ ‘ಬ್ರೇವ್‌ಹಾರ್ಟ್ಸ್ ಆಫ್ ಭಾರತ್: ವಿಗ್ನೆಟ್ಸ್ ಫ್ರಮ್ ಇಂಡಿಯನ್ ಹಿಸ್ಟರಿ’ ಮತ್ತು ‘ವೇಟಿಂಗ್ ಫಾರ್ ಶಿವ: ಅನ್‌ಅರ್ಥಿಂಗ್ ದಿ ಟ್ರುತ್ ಆಫ್ ಕಾಶಿ’ಸ್ ಜ್ಞಾನವಾಪಿ’ ದೇಶಾದ್ಯಂತ ಅತಿ ಹೆಚ್ಚು ಮಾರಾಟವಾದ ಪ್ರಸಿದ್ಧ ಪುಸ್ತಕಗಳಾಗಿವೆ.
ಆ. ಗೌಹರ್ ಜಾನ್ ಅವರ ಜೀವನಚರಿತ್ರೆ ಬರೆದ ಮತ್ತು ಭಾರತೀಯ ಸಂಪ್ರದಾಯದ ರಕ್ಷಕರಾದ ಡಾ. ವಿಕ್ರಮ್ ಸಂಪತ್: 2012 ರಲ್ಲಿ ಡಾ. ವಿಕ್ರಮ್ ಸಂಪತ್ ಅವರು ಭಾರತದ ‘ಮೊದಲ ಶಾಸ್ತ್ರೀಯ ಗಾಯಕಿ’ ಮತ್ತು ‘ಗ್ರಾಮೋಫೋನ್ ರೆಕಾರ್ಡಿಂಗ್’ ಮಾಡಿದ ‘ಮೊದಲ ಮಹಿಳಾ ಗಾಯಕಿ’ ಗೌಹರ್ ಜಾನ್ ಅವರ ಜೀವನಚರಿತ್ರೆಯನ್ನು ಪ್ರಕಟಿಸಿದರು.
ಡಾ. ವಿಕ್ರಮ್ ಸಂಪತ್ ಕೇವಲ ಇತಿಹಾಸಕಾರರಲ್ಲ, ಅವರು ಭಾರತೀಯ ಸಂಪ್ರದಾಯದ ರಕ್ಷಕರೂ ಆಗಿದ್ದಾರೆ. ಅವರು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಂಪ್ರದಾಯಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ. ‘ಮೈ ನೇಮ್ ಈಸ್ ಗೌಹರ್ ಜಾನ್!’ ಪುಸ್ತಕದಲ್ಲಿ ಅವರು ಗೌಹರ್ ಜಾನ್ ಅವರ ಜೀವನದೊಂದಿಗೆ ಭಾರತದ ಸಂಗೀತ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ‘ವಾಯ್ಸ್ ಆಫ್ ದಿ ವೀಣಾ: ಎಸ್. ಬಾಲಚಂದರ್ – ಎ ಬಯೋಗ್ರಫಿ’ ಪುಸ್ತಕದ ಮೂಲಕ ಅವರು ಶಾಸ್ತ್ರೀಯ ಸಂಗೀತ ಮತ್ತು ವೀಣಾ ಸಂಪ್ರದಾಯದ ಸಾಂಸ್ಕೃತಿಕ ಗೌರವವನ್ನು ಹೆಚ್ಚಿಸಿದ್ದಾರೆ. ಭಾರತೀಯ ಕಲೆ, ಸಂಗೀತ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಅವರು ಸಾಂಸ್ಕೃತಿಕ ಜಾಗೃತಿ ಮತ್ತು ಅಧ್ಯಯನವನ್ನು ಉತ್ತೇಜಿಸಿದ್ದಾರೆ.
ಇ. ಡಿಜಿಟಲ್ ಸಂಗೀತ ಸಂಗ್ರಹ: ‘ಗೌಹರ್ ಜಾನ್’ ಪುಸ್ತಕದ ಸಂಶೋಧನೆಯ ಸಮಯದಲ್ಲಿ ಡಾ. ಸಂಪತ್ ಅವರು ಪ್ರಾಚೀನ ಗ್ರಾಮೋಫೋನ್ ರೆಕಾರ್ಡ್‌ಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಅವುಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲು ‘ಮಣಿಪಾಲ ವಿಶ್ವವಿದ್ಯಾಲಯ’ದೊಂದಿಗೆ ಸೇರಿ ಒಂದು ಖಾಸಗಿ ಮತ್ತು ಲಾಭಾಂಶರಹಿತ ಸಂಸ್ಥೆಯನ್ನು ಸ್ಥಾಪಿಸಿದರು. ಡಾ. ಸಂಪತ್ ಅವರು ಈ ಸಂಗ್ರಹವನ್ನು 2015 ರಲ್ಲಿ ‘ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್’ ಸಂಸ್ಥೆಗೆ ದಾನ ಮಾಡಿದರು. 2013 ರಿಂದ ಈ ಸಂಗ್ರಹವು ‘ಸೌಂಡ್‌ಕ್ಲೌಡ್’ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲಭ್ಯವಿದೆ. 2021 ರವರೆಗೆ 15,000 ರೆಕಾರ್ಡ್‌ಗಳಲ್ಲಿ 7,000 ರೆಕಾರ್ಡ್‌ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.

3. ರಾಷ್ಟ್ರ ಮತ್ತು ಹಿಂದೂ ಧರ್ಮಕ್ಕಾಗಿ ಕೊಡುಗೆ
ಡಾ. ವಿಕ್ರಮ್ ಸಂಪತ್ ಅವರು ಭಾರತದ ಪ್ರಮುಖ ಇತಿಹಾಸಕಾರರು, ಲೇಖಕರು ಮತ್ತು ಸಂಶೋಧಕರಾಗಿ ದೇಶದ ರಾಷ್ಟ್ರೀಯತೆ ಮತ್ತು ಹಿಂದೂ ಸಂಪ್ರದಾಯಗಳಿಗಾಗಿ ಅನನ್ಯ ಹಾಗೂ ಅಸಾಧಾರಣ ಕೊಡುಗೆ ನೀಡುತ್ತಿದ್ದಾರೆ. ಇತಿಹಾಸವನ್ನು ನಿಷ್ಪಕ್ಷಪಾತವಾಗಿ ಅಧ್ಯಯನ ಮಾಡುವುದು ಮತ್ತು ಹಿಂದೂ ಸಂಸ್ಕೃತಿಯ ನಿಜವಾದ ಚಿತ್ರವನ್ನು ಜನರ ಮುಂದೆ ತರುವುದು, ಹಾಗೂ ಹಿಂದೂ ರಾಜರ ಶೌರ್ಯದ ನಿಜವಾದ ಇತಿಹಾಸವನ್ನು ಹೇಳುವುದು ಅವರ ಪ್ರಮುಖ ಕಾರ್ಯವಾಗಿದೆ.
4. ವೀರ ಸಾವರ್ಕರ್ ಅವರ ಐತಿಹಾಸಿಕ ಮರುಮೌಲ್ಯಮಾಪನ
ವಿಕ್ರಮ್ ಸಂಪತ್ ಅವರು ‘ಸಾವರ್ಕರ್: ಎಕೋಸ್ ಫ್ರಮ್ ಎ ಫರ್ಗಾಟನ್ ಪಾಸ್ಟ್ (1883-1924)’ ಮತ್ತು ‘ಸಾವರ್ಕರ್: ಎ ಕಂಟೆಸ್ಟೆಡ್ ಲೆಗಸಿ (1924-1966)’ ಎಂಬ ಎರಡು ಗ್ರಂಥಗಳನ್ನು ಬರೆದಿದ್ದಾರೆ. ಈ ಗ್ರಂಥಗಳಲ್ಲಿ ವೀರ ಸಾವರ್ಕರ್ ಅವರ ಹಿಂದುತ್ವ, ತತ್ವಶಾಸ್ತ್ರ, ಸ್ವಾತಂತ್ರ್ಯ ಹೋರಾಟ ಮತ್ತು ಸಾಮಾಜಿಕ ಸಮಾನತೆಯ ಮೇಲಿನ ಕಾರ್ಯದ ಆಳವಾದ ಅಧ್ಯಯನವಿದೆ. ‘ಪಾಶ್ಚಿಮಾತ್ಯ ಇತಿಹಾಸಕಾರರು ಸಾವರ್ಕರ್ ಅವರ ‘ಹಿಂದುತ್ವ’ ತತ್ವವನ್ನು ತಪ್ಪಾಗಿ ಅರ್ಥೈಸಿದ್ದಾರೆ’ ಎಂಬ ಅಭಿಪ್ರಾಯವನ್ನು ಮಂಡಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ ಅವರ ಕೊಡುಗೆಯ ನಿಜವಾದ ಅರ್ಥವನ್ನು ಜನರಿಗೆ ತಲುಪಿಸುವ ಮಹಾನ್ ಕಾರ್ಯವನ್ನು ಡಾ. ಸಂಪತ್ ಮಾಡಿದ್ದಾರೆ.
5. ಇತಿಹಾಸದ ನಿಜವಾದ ಅರ್ಥವನ್ನು ತಲುಪಿಸುವ ಕಾರ್ಯ
ಭಾರತದ ಸ್ವಾತಂತ್ರ್ಯದ ನಂತರ, ಕೆಲವು ಕಮ್ಯುನಿಸ್ಟ್ ಸಿದ್ಧಾಂತದ ಇತಿಹಾಸಕಾರರು ದೇಶದ ನಿಜವಾದ ಇತಿಹಾಸವನ್ನು ಬದಲಾಯಿಸಲು ಪ್ರಯತ್ನಿಸಿದರು. ಡಾ. ವಿಕ್ರಮ್ ಸಂಪತ್ ಅವರು ಇತಿಹಾಸದಲ್ಲಿನ ಈ ವಿರೂಪವನ್ನು ಸರಿಪಡಿಸುವ ಮಹಾನ್ ಕಾರ್ಯವನ್ನು ಮಾಡಿದ್ದಾರೆ. ಉದಾಹರಣೆಗೆ, ಟಿಪ್ಪು ಸುಲ್ತಾನನನ್ನು ಕಮ್ಯುನಿಸ್ಟ್ ಸಿದ್ಧಾಂತದ ಇತಿಹಾಸಕಾರರು ‘ಧರ್ಮ ಸಹಿಷ್ಣು, ದೇವಾಲಯಗಳಿಗೆ ಸಹಾಯ ಮಾಡುವ, ಆದರ್ಶ ರಾಜ, ಮೈಸೂರಿನ ಹುಲಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದವನು’ ಎಂದು ವೈಭವೀಕರಿಸಿ ಅವನ ಇತಿಹಾಸವನ್ನು ಬರೆಯಲು ಪ್ರಯತ್ನಿಸಿದರು; ಆದರೆ ಡಾ. ಸಂಪತ್ ಅವರು ಟಿಪ್ಪು ಸುಲ್ತಾನನ ನಿಜವಾದ ಇತಿಹಾಸ, ಅವನು ನಾಶಪಡಿಸಿದ ದೇವಾಲಯಗಳ ಮಾಹಿತಿ, ಹೀಗೆ ನಿಜವಾದ ಇತಿಹಾಸವನ್ನು ಜನರ ಮುಂದೆ ಇಡುವ ಪ್ರಯತ್ನ ಮಾಡಿದ್ದಾರೆ.
‘ಭಾರತದ ಇತಿಹಾಸವನ್ನು ಮೂಢನಂಬಿಕೆಗಳಿಲ್ಲದೆ, ಸತ್ಯದ ಆಧಾರದ ಮೇಲೆ ಮತ್ತು ಭಾರತೀಯ ದೃಷ್ಟಿಕೋನದಿಂದ ನೋಡಬೇಕು’ ಎಂಬ ವಿಚಾರಗಳಿಗೆ ಅವರ ಬರಹಗಳು ಪ್ರೇರಣೆ ನೀಡಿವೆ. ಇದರಿಂದ ಇತಿಹಾಸವನ್ನು ಪಾಶ್ಚಿಮಾತ್ಯ ಅಥವಾ ಕಮ್ಯುನಿಸ್ಟ್ ದೃಷ್ಟಿಕೋನದಿಂದ ನೋಡದೆ, ಭಾರತೀಯ ಸಂಪ್ರದಾಯ ಮತ್ತು ನಿಜವಾದ ಐತಿಹಾಸಿಕ ಮಾಹಿತಿಯನ್ನು ಜನರಿಗೆ ತಲುಪಿಸಲು ಸಹಾಯವಾಗಿದೆ.
ಭಾರತದ ಪರಾಕ್ರಮದ ಶೌರ್ಯದ ಇತಿಹಾಸವನ್ನು ಜಗತ್ತಿನ ಮುಂದೆ ತೆರೆದಿಟ್ಟ ಡಾ. ವಿಕ್ರಮ್ ಸಂಪತ್!

ಡಾ. ವಿಕ್ರಮ್ ಸಂಪತ್ ಅವರು ಭಾರತೀಯ ರಾಷ್ಟ್ರಪ್ರೇಮ, ಹಿಂದುತ್ವ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಪುನರವಲೋಕನಕ್ಕಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. ಸಾವರ್ಕರ್ ಅವರ ಮೇಲಿನ ಅಧ್ಯಯನದಿಂದ ‘ಹಿಂದೂ ರಾಷ್ಟ್ರೀಯತೆ’ಯ ಪರಿಕಲ್ಪನೆಗೆ ಪ್ರೋತ್ಸಾಹ ದೊರೆಯಿತು. ಟಿಪ್ಪು ಸುಲ್ತಾನನ ಮೇಲಿನ ನಿಜವಾದ ಅಧ್ಯಯನದಿಂದ ‘ಇತಿಹಾಸದ ಶುದ್ಧೀಕರಣ’ ಮಾಡುವ ಪ್ರಯತ್ನ ನಡೆಯಿತು. ಸಾಂಸ್ಕೃತಿಕ ಮತ್ತು ಸಂಗೀತ ಸಂಪ್ರದಾಯಗಳ ಮೇಲಿನ ಅಧ್ಯಯನದಿಂದ ‘ಭಾರತೀಯ ಕಲೆಯ ಗೌರವ’ ಹೆಚ್ಚಿಸುವ ಕಾರ್ಯ ನಡೆಯಿತು. ಪಾಶ್ಚಿಮಾತ್ಯ ಮತ್ತು ಕಮ್ಯುನಿಸ್ಟ್ ಸಿದ್ಧಾಂತದ ಇತಿಹಾಸದಲ್ಲಿನ ತಪ್ಪುಗಳ ವಿರುದ್ಧ ಅವರು ಬಲವಾದ ವಾದ ಮತ್ತು ಖಂಡನೆ ಮಾಡಿ ಹಿಂದೂ ಧರ್ಮದ ಸಂರಕ್ಷಣೆಯ ಬಗ್ಗೆ ಚಿಂತನೆ ನಡೆಸಿದರು. ಇದರಿಂದ ಡಾ. ವಿಕ್ರಮ್ ಸಂಪತ್ ಅವರು ರಾಷ್ಟ್ರ ಮತ್ತು ಹಿಂದೂ ಧರ್ಮಕ್ಕಾಗಿ ಅಸಾಧರಣ ಕೊಡುಗೆ ನೀಡಿದ ಮಹತ್ವದ ಇತಿಹಾಸಕಾರರಾಗಿದ್ದಾರೆ.
6. ಪಾಶ್ಚಿಮಾತ್ಯ ಮತ್ತು ಕಮ್ಯುನಿಸ್ಟ್ ಸಿದ್ಧಾಂತದ ಪರಿಕಲ್ಪನೆಗಳ ವಿರುದ್ಧ ಯುಕ್ತಿವಾದ
ಪಾಶ್ಚಿಮಾತ್ಯ ಇತಿಹಾಸಕಾರರು ಭಾರತದ ಇತಿಹಾಸವನ್ನು ತಮ್ಮ ದೃಷ್ಟಿಕೋನದಿಂದ ಮಂಡಿಸಿದ್ದಾರೆ. ಡಾ. ವಿಕ್ರಮ್ ಸಂಪತ್ ಅವರು ಅವರ ಅಸತ್ಯ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ ಮತ್ತು ಭಾರತೀಯ ಸಂಪ್ರದಾಯದ ಪುನರವಲೋಕನವನ್ನು ಅವರು ಒತ್ತಾಯಿಸುತ್ತಾರೆ. ಅವರು ಹೈದರಾಬಾದಿನ ನಿಜಾಮ ಮತ್ತು ಬ್ರಿಟಿಷ್ ಆಡಳಿತದ ಬಗ್ಗೆಯೂ ಆಳವಾದ ಅಧ್ಯಯನ ಮಾಡಿದ್ದಾರೆ, ಇದರಿಂದ ಭಾರತೀಯರ ಶೋಷಣೆ ಮತ್ತು ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಪುನರ್‌ಮೌಲ್ಯಮಾಪನವಾಗಿದೆ. ಇದರಿಂದ ಭಾರತೀಯ ಸಂಪ್ರದಾಯದ ಮಹತ್ವದ ಅಧ್ಯಯನಕ್ಕೆ ಮತ್ತು ನಿಜವಾದ ಐತಿಹಾಸಿಕ ಮಾಹಿತಿಯನ್ನು ಪಡೆಯಲು ಹೊಸ ಆಲೋಚನೆಗಳಿಗೆ ಪ್ರೇರಣೆ ದೊರೆತಿದೆ.
7. ‘ಬೌಲ್’ ಸಮುದಾಯದ ಮೇಲಿನ ಚಿತ್ರಕಥೆ
2022 ರಲ್ಲಿ ಡಾ. ಸಂಪತ್ ಅವರು ಸಂಗೀತಗಾರ ರಿಕಿ ಕೇಜ್ ಮತ್ತು ಸಂಶೋಧಕ ರಾಜೀವ್ ಶರ್ಮಾ ಅವರೊಂದಿಗೆ ಬಂಗಾಳದ ಮರೆತುಹೋದ ‘ಬೌಲ್’ ಸಂಪ್ರದಾಯದ ಆಧಾರದ ಮೇಲೆ ‘ಹೂ ಈಸ್ ಬಾವುಲ್?’ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿದರು. ಇದನ್ನು ಸಾಯಿರಾಮ್ ಸಾಗಿರಾಜು ನಿರ್ದೇಶಿಸಿದ್ದರು.
8. ಭಾರತದ ವೀರ ಯೋಧರು
2022 ರಲ್ಲಿ ಪ್ರಕಟವಾದ ಸಂಪತ್ ಅವರ ‘ಬ್ರೇವ್‌ಹಾರ್ಟ್ಸ್ ಆಫ್ ಭಾರತ್: ವಿಗ್ನೆಟ್ಸ್ ಫ್ರಮ್ ಇಂಡಿಯನ್ ಹಿಸ್ಟರಿ’ ಪುಸ್ತಕದಲ್ಲಿ ಅವರು ವಿದೇಶಿ ಆಕ್ರಮಣಗಳ ವಿರುದ್ಧ ಯಶಸ್ವಿಯಾಗಿ ಹೋರಾಡಿದ 15 ಪುರುಷ ಮತ್ತು ಮಹಿಳಾ ವೀರರ ಶೌರ್ಯದ ಇತಿಹಾಸವನ್ನು ಹೇಳಿದ್ದಾರೆ. ಭಾರತದ ಇತಿಹಾಸದಲ್ಲಿ ಅವರ ಗುರುತನ್ನು ಮರೆಮಾಚಲಾಗಿತ್ತು. ‘ಅಜ್ಞಾತ ಸಂಸ್ಕೃತಿಯ ಯೋಧರು’ ಎಂಬ ಪರಿಕಲ್ಪನೆಯಿಂದ ಆಯ್ಕೆ ಮಾಡಲಾದ 15 ವ್ಯಕ್ತಿಗಳ ಜೀವನಚರಿತ್ರೆಗಳ ಸಂಗ್ರಹ ಇದು. ಈ ಮೂಲಕ ಅವರು ನಿಜವಾದ ಇತಿಹಾಸವನ್ನು ಸಮಾಜದ ಮುಂದೆ ತರುವ ಪ್ರಯತ್ನ ಮಾಡಿದ್ದಾರೆ.