ಛತ್ರಪತಿ ಸಂಭಾಜಿ ಮಹಾರಾಜರ ಬಲಿದಾನ ದಿನದ (ಮಾರ್ಚ್ ೩೦) ನಿಮಿತ್ತ…
‘ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಪರಾಕ್ರಮ, ತ್ಯಾಗ ಹಾಗೂ ಬಲಿದಾನದ ತೇಜಸ್ವಿ ಉದಾಹರಣೆಯಾಗಿದೆ. ಇತ್ತೀಚೆಗೆ ‘ಛಾವಾ’ (ಸಿಂಹದ ಮರಿ) ಚಲನಚಿತ್ರದಲ್ಲಿ ಅವರ ಜೀವನದ ಪ್ರಸಂಗಗಳನ್ನು ಜೀವಂತವಾಗಿ ಚಿತ್ರಿಸ ಲಾಗಿದೆ. ಔರಂಗಜೇಬನ ಅಮಾನವೀಯ ಹಿಂಸೆಯಿಂದಲೂ ಎದೆಗುಂದದ ಛತ್ರಪತಿ ಸಂಭಾಜಿ ಮಹಾರಾಜರ ಬಲಿದಾನವನ್ನು ನೋಡಿ ಸಂಪೂರ್ಣ ದೇಶಾದ್ಯಂತದ ಜನರ ಹೃದಯ ಕಂಪಿಸಿತು; ಆದರೆ ಈ ಚಲನಚಿತ್ರವನ್ನು ನೋಡಿದ ನಂತರ ನಾವು ನಮಗೇ ಒಂದು ಪ್ರಶ್ನೆ ಕೇಳಬೇಕು, ‘ಇನ್ನು ಮುಂದೆ ಏನು ?’
೧. ನಿನ್ನೆಯ ಛಾವಾ – ಛತ್ರಪತಿ ಸಂಭಾಜಿ ಮಹಾರಾಜರು : ಶೌರ್ಯ, ವಿದ್ವತ್ತು, ಸ್ವಾಭಿಮಾನ ಹಾಗೂ ಧರ್ಮನಿಷ್ಠೆಯ ಸಂಕೇತ !
ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯ ಸ್ಥಾಪಿಸಿದರು, ಆದರೆ ಛತ್ರಪತಿ ಸಂಭಾಜಿ ಮಹಾರಾಜರು ಅದನ್ನು ರಕ್ಷಿಸುವ ಕಾರ್ಯ ಮಾಡಿದರು. ಕೇವಲ ೧೧ ವರ್ಷಗಳ ಆಡಳಿತಾವಧಿಯಲ್ಲಿ ಅವರು ಸ್ವರಾಜ್ಯದ ಮೇಲೆ ಬಂದಿರುವ ಅಸಂಖ್ಯಾತ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿದರು. ಅವರು ಮೊಗಲರೊಂದಿಗೆ ಹಾಗೂ ಪೋರ್ಚ್ಯುಗೀಸರು ಮತ್ತು ಆಂಗ್ಲರೊಂದಿಗೂ ಪ್ರಭಾವಪೂರ್ಣ ಹೋರಾಟ ಮಾಡಿದರು. ಔರಂಗಜೇಬ ಅವರನ್ನು ಬಂಧಿಸಿ ಇಸ್ಲಾಮ್ ಸ್ವೀಕರಿಸಬೇಕೆಂದು ಹಿಂಸೆ ನೀಡಿದನು; ಆದರೆ ಛತ್ರಪತಿ ಸಂಭಾಜಿ ಮಹಾರಾಜರು ತಮ್ಮ ಧರ್ಮ ಮತ್ತು ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಅತ್ಯಂತ ಅಮಾನವೀಯ ಹಿಂಸೆಯನ್ನು ಸಹಿಸಿಕೊಂಡರು ಹಾಗೂ ಕೊನೆಗೆ ಬಲಿದಾನ ಮಾಡಿದರು. ಆದ್ದರಿಂದ ಅವರಿಗೆ ‘ಧರ್ಮವೀರ’ ಎಂಬ ಬಿರುದನ್ನು ನೀಡಲಾಗುತ್ತದೆ.
ಛತ್ರಪತಿ ಸಂಭಾಜಿ ಮಹಾರಾಜರು ಒಬ್ಬ ಯೋಧ, ಉತ್ತಮ ಕವಿ, ವಿದ್ವಾಂಸ, ಸಂಘಟಕ ಹಾಗೂ ಕುಶಲ ಆಡಳಿತ ಗಾರರಾಗಿದ್ದರು. ಅವರಿಗೆ ಸಂಸ್ಕೃತ, ಮರಾಠಿ, ಪಾರ್ಸಿ, ಕನ್ನಡ ಮೊದಲಾದ ಭಾಷೆಗಳು ತಿಳಿದಿತ್ತು. ಅವರು ‘ಬುಧಭೂಷಣ’ ಹೆಸರಿನ ಸಂಸ್ಕೃತ ಗ್ರಂಥ ಬರೆದರು. ಅತ್ಯಂತ ಪ್ರತಿಕೂಲ ಪರಿಸ್ಥಿತಿ ಯಲ್ಲಿಯೂ ಅವರು ಸ್ವರಾಜ್ಯವನ್ನು ಸುರಕ್ಷಿತವಾಗಿಟ್ಟರು ಹಾಗೂ ಹಿಂದವೀ ಸ್ವರಾಜ್ಯದ ಪತಾಕೆಯನ್ನು ಆಕಾಶದೆತ್ತರ ಹಾರಿಸಿದರು.
೨. ಇಂದಿನ ಛಾವಾ – ಇಂದಿನ ಯುವಕರು : ಸಂಸ್ಕಾರ, ತ್ಯಾಗ, ನೈತಿಕತೆ ಹಾಗೂ ಧರ್ಮನಿಷ್ಠೆಯ ಅವಶ್ಯಕತೆಯಿದೆ !
ಇಂದಿನ ಯುವ ಪೀಳಿಗೆಯಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಗುಣ ಎಷ್ಟು ಪ್ರಮಾಣದಲ್ಲಿದೆ ? ಅವರ ಜಯಂತಿ ಯನ್ನು ದೊಡ್ಡ ಉತ್ಸಾಹದಲ್ಲಿ ಆಚರಿಸಲಾಗುತ್ತದೆ; ಆದರೆ ಅವರ ವಿಚಾರಗಳ ಅನುಕರಣೆ ಮಾಡುವವರು ಎಷ್ಟು ಜನರಿದ್ದಾರೆ ?
ಅ. ದೇಶದ ವಿಕಾಸದಲ್ಲಿ ಯುವಕರ ಸಹಭಾಗ ಕಾಣಿಸುತ್ತದೆ; ಆದರೆ ಅವರಲ್ಲಿ ರಾಷ್ಟ್ರಾಭಿಮಾನ ಹಾಗೂ ಧರ್ಮಾಭಿಮಾನ ಕಾಣಿಸುವುದಿಲ್ಲ.
ಆ. ಇಂದು ಸಮಾಜದಲ್ಲಿ ಅನ್ಯಾಯ, ಭ್ರಷ್ಟಾಚಾರ ಹಾಗೂ ಅಧರ್ಮ ಹೆಚ್ಚುತ್ತಿದ್ದು ಅದರ ವಿರುದ್ಧ ನಿಲ್ಲುವವರು ಕಡಿಮೆಯಿದ್ದಾರೆ.
ಇ. ‘ಧರ್ಮರಕ್ಷಣೆ ಮಾಡುವುದು ಕೂಡ ಅಷ್ಟೇ ಆವಶ್ಯಕವಾಗಿದೆ’, ಎಂಬುದನ್ನು ಗಮನಿಸುವವವರು ಎಷ್ಟು ಜನರಿದ್ದಾರೆ ?
ಛತ್ರಪತಿ ಸಂಭಾಜಿ ಮಹಾರಾಜರು ಅನೇಕ ಸಂಕಷ್ಟವನ್ನು ಎದುರಿಸಿ ಧರ್ಮ ಮತ್ತು ಸ್ವರಾಜ್ಯವನ್ನು ಉಳಿಸಿದರು. ಹೀಗಿರುವಾಗ ಇಂದಿನ ಯುವಕರು ಸ್ವಧರ್ಮಕ್ಕಾಗುವ ಹಾನಿಯನ್ನು ನೋಡಿ ಏಕೆ ಸುಮ್ಮನಿರುತ್ತಾರೆ ? ಇತಿಹಾಸವನ್ನು ಕೇಳಿಸಿಕೊಳ್ಳುವುದು ಮಾತ್ರವೇ ಅಥವಾ ಅದರ ಆದರ್ಶವನ್ನಿಟ್ಟುಕೊಂಡು ಮುಂದೆ ಹೋಗಬೇಕೇ ?
ಇಂದಿನ ಯುವಕರು ನಿಜವಾಗಿಯೂ ಛಾವಾಗಳಾಗಬಹುದೇ ? ಅದಕ್ಕಾಗಿ ಅವರು ತ್ಯಾಗ, ಪರಿಶ್ರಮ ಮತ್ತು ಧರ್ಮಾಭಿಮಾನ ಈ ತತ್ತ್ವಗಳನ್ನು ಸ್ವೀಕರಿಸಬೇಕಾಗುತ್ತದೆ. ಸಂಸ್ಕಾರ, ನೈತಿಕತೆ ಹಾಗೂ ಧರ್ಮನಿಷ್ಠೆಯ ಮೂಲಕ ಸಕ್ಷಮ ರಾಷ್ಟ್ರ ನಿರ್ಮಾಣವಾಗಬಹುದು !
ಛತ್ರಪತಿ ಸಂಭಾಜಿ ಮಹಾರಾಜರು ಹಿಂದೂ ಧರ್ಮದ ರಕ್ಷಣೆಗಾಗಿ ಪ್ರಾಣವನ್ನು ತ್ಯಜಿಸಿದರು; ಆದರೆ ಧರ್ಮ ಹಾಗೂ ಸಂಸ್ಕೃತಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿಲ್ಲ. ಇಂದಿನ ಪೀಳಿಗೆಯೂ ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯನ್ನು ರಕ್ಷಿಸಬೇಕಾಗಿದೆ. ಧರ್ಮ, ಅಂದರೆ ಪೂಜೆಯಲ್ಲ, ಅದರಲ್ಲಿ ಸಂಸ್ಕಾರ, ನೈತಿಕತೆ, ಧರ್ಮವ್ಯವಸ್ಥೆ ಹಾಗೂ ತಮ್ಮ ಕುಟುಂಬವ್ಯವಸ್ಥೆಯ ಜತನವೂ ಕೂಡ ಅಷ್ಟೆ ಮಹತ್ವದ್ದಾಗಿದೆ.
೩. ನಾಳೆಯ ಛಾವಾ : ಮುಂದಿನ ಪೀಳಿಗೆಗೆ ಪ್ರೇರಣೆ, ಸಂಸ್ಕಾರ ಮಾಡುವ ಹಾಗೂ ಧರ್ಮರಕ್ಷಕರು !
ಒಂದು ವೇಳೆ ಇಂದು ನಾವು ಛತ್ರಪತಿ ಸಂಭಾಜಿ ಮಹಾರಾಜರ ವಿಚಾರವನ್ನು ಮನವರಿಕೆ ಮಾಡಿದರೆ, ನಾಳೆಯ ಪೀಳಿಗೆ ತನ್ನಿಂತಾನೇ ಸಕ್ಷಮವಾಗುವುದು.
ನಾಳೆಯ ಛಾವಾಗಳೆಂದರೆ ಪೀಳಿಗೆ ಸತ್ಯ, ಧೈರ್ಯ, ನ್ಯಾಯ ಹಾಗೂ ಧರ್ಮರಕ್ಷಣೆಗಾಗಿ ಹೋರಾಡುವ ಪೀಳಿಗೆ !
ಈ ಹಿಂದೆ ಮನೆಯಿಂದ ನಮ್ರತೆ, ಸತ್ಯಪ್ರಿಯತೆ, ಧರ್ಮನಿಷ್ಠೆ ಹಾಗೂ ಕರ್ತವ್ಯಪರಾಯಣಗಳ ಸಂಸ್ಕಾರ ನೀಡಲಾಗುತ್ತಿತ್ತು. ಇಂದು ಈ ಸಂಸ್ಕಾರಗಳಿಲ್ಲ, ಆದ್ದರಿಂದ ನಾಳೆಯ ಪೀಳಿಗೆ ಯೋಗ್ಯ ದಿಕ್ಕಿನಲ್ಲಿ ಹೋಗುವ ಅವಶ್ಯಕತೆಯಿದೆ. ಛತ್ರಪತಿ ಸಂಭಾಜಿ ಮಹಾರಾಜರು ಯೋಧರಷ್ಟೇ ಅಲ್ಲ, ಅವರು ಸಂಸ್ಕಾರವಂತ ರಾಜರಾಗಿದ್ದರು; ಆದ್ದರಿಂದ ನಾಳೆಯ ಛಾವಾಗಳಲ್ಲಿಯೂ ಸಂಸ್ಕಾರ ಮತ್ತು ಧರ್ಮಸಂರಕ್ಷಣೆಯ ಸಾಮರ್ಥ್ಯ ಇರಲೇಬೇಕು.
ಯಾವ ಯುವಕನು ಕುಟುಂಬ, ಸಮಾಜ, ಧರ್ಮ ಹಾಗೂ ರಾಷ್ಟ್ರದ ಹೊಣೆಗಾರಿಕೆಯೊಂದಿಗೆ ಕಾರ್ಯ ಮಾಡುವನೋ, ಉತ್ತಮವಾದ ಸಂಸ್ಕಾರವನ್ನು ಅಂಗೀಕರಿಸುವನೋ, ಮತ್ತು ತನ್ನ ಧರ್ಮಸಂಸ್ಕೃತಿಯ ರಕ್ಷಣೆ ಮಾಡುವನೋ, ಅವನೇ ನಿಜವಾದ ಛಾವಾ ಆಗುವನು ! – ಶ್ರೀ. ಅಮೋಲ ಬಧಾಲೆ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೦.೨.೨೦೨೫)
೪. ಸಾರಾಂಶ : ಇತಿಹಾಸವಲ್ಲ, ಅದು ಪ್ರೇರಣೆಯಾಗಿದೆ !
ಛತ್ರಪತಿ ಸಂಭಾಜಿ ಮಹಾರಾಜರ ವಿಚಾರವನ್ನು ಜೀವನದಲ್ಲಿ ಅಳವಡಿಸಿ ತಮ್ಮಲ್ಲಿ ಛಾವಾದ ಗುಣಗಳನ್ನು ತಂದು ಸಂಸ್ಕಾರ, ಧರ್ಮಸಂರಕ್ಷಣೆ ಹಾಗೂ ಪರಾಕ್ರಮಕ್ಕಾಗಿ ಹೊಸ ಸಾಮರ್ಥ್ಯ ನಿರ್ಮಿಸುವುದು ಇಂದಿನ ಯುವಕರ ಕರ್ತವ್ಯವಾಗಿದೆ !
ನಿಜವಾದ ಅರ್ಥದಲ್ಲಿ ಛಾವಾ ನಿರ್ಮಿಸುವ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಲ್ಲಿ ಪಾಲ್ಗೊಳ್ಳಿರಿ !ಹಿಂದೂ ಜನಜಾಗೃತಿ ಸಮಿತಿಯು ಹಿಂದೂಗಳಲ್ಲಿ ಧರ್ಮಜಾಗೃತಿ, ಸಂಸ್ಕಾರ ನಿರ್ಮಿಸುವ ಹಾಗೂ ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ಕಾರ್ಯ ಮಾಡುವ ಸಂಘಟನೆಯಾಗಿದೆ. ಧರ್ಮಶಿಕ್ಷಣ : ಹಿಂದೂ ಧರ್ಮದ ನಿಜವಾದ ಜ್ಞಾನ ಹಾಗೂ ಸುಸಂಸ್ಕಾರದ ಪ್ರಚಾರ. ಸಂಸ್ಕಾರ ನಿರ್ಮಾಣ : ಯುವ ಪೀಳಿಗೆಯಲ್ಲಿ ನೈತಿಕತೆ ಹಾಗೂ ರಾಷ್ಟ್ರನಿಷ್ಠೆಯ ಮೌಲ್ಯವನ್ನು ಬಿಂಬಿಸುವುದು. ಧರ್ಮರಕ್ಷಣೆ : ಮಂದಿರ, ಸಂಸ್ಕೃತಿ ಹಾಗೂ ಧರ್ಮದ ಗೌರವವನ್ನು ಕಾಪಾಡಲು ಪ್ರಯತ್ನ. ಸ್ವರಕ್ಷಣಾ ತರಬೇತಿ : ಆತ್ಮರಕ್ಷಣೆ / ಸಮಾಜದ ಭದ್ರತೆಗಾಗಿ. ಸಾಧನೆ ಮತ್ತು ಆತ್ಮವಿಕಾಸ : ಧರ್ಮರಕ್ಷಣೆ ಮತ್ತು ತನ್ನ ಆಧ್ಯಾತ್ಮಿಕ ಉನ್ನತಿಗಾಗಿ ಸಮಾಜಕ್ಕೆ ಸಾಧನೆ ಕಲಿಸುವುದು. ಸಂಪರ್ಕ : ೯೩೪೩೦೧೭೦೦೧ ನಿಮಗೆ ರಾಷ್ಟ್ರ ಮತ್ತು ಧರ್ಮ ಸೇವೆಯ ಕಾರ್ಯ ಮಾಡಲಿಕ್ಕಿದ್ದರೆ ಹಾಗೂ ತನ್ನ ಆಧ್ಯಾತ್ಮಿಕ ಉನ್ನತಿ ಮಾಡಲಿಕ್ಕಿದ್ದರೆ, ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಲ್ಲಿ ಪಾಲ್ಗೊಳ್ಳಿರಿ ಹಾಗೂ ನಿಜವಾದ ಅರ್ಥದಲ್ಲಿ ‘ಛಾವಾ’ ಆಗಿರಿ ! |