ವಿಶೇಷ ಲೇಖನ ಮಾಲೆ
ಡಾ. ಎಸ್.ಆರ್. ಲೀಲಾ ಅವರು ಇವರು ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯರು ಮತ್ತು ಸಂಸ್ಕೃತ ವಿದುಷಿ, ಕನ್ನಡದ ಖ್ಯಾತ ಲೇಖಕಿ, ಅಂಕಣಕಾರರು ಮತ್ತು ಶಿಕ್ಷಣ ತಜ್ಞೆ, ಸಂಸ್ಕೃತ ನಾಟಕ ಹಾಗೂ ಚಲನಚಿತ್ರ ನಿರ್ದೇಶಕಿ, “ಲೀಲಾ ಜಾಲ” ಹೆಸರಿನ ಯೂಟ್ಯೂಬ್ ಚಾಲಕರು ಹೀಗೆ ಹಲವಾರು ಆಯಾಮಗಳಲ್ಲಿ ತಮ್ಮನ್ನು ಸಕ್ರಿಯಗೊಳಿಸಿಕೊಂಡಿದ್ದಾರೆ. ಅವರು ತಮ್ಮ ಸಾಹಿತ್ಯ, ಉಪನ್ಯಾಸ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಭಾರತೀಯ ಸಂಸ್ಕೃತಿ, ಹಿಂದೂ ಧರ್ಮ ಹಾಗೂ ಮಂದಿರಗಳ ರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯಗಳಿಗೆ ಪ್ರೇರಕರಾಗಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರು ಸ್ಥಾಪಿಸಿದ ಹಿಂದವಿ ಸ್ವರಾಜ್ಯಕ್ಕಾಗಿ ಸೈನಿಕರು ಮತ್ತು ಅಶ್ವಾರೂಢ ಸೈನಿಕರು ಮಾಡಿದ ತ್ಯಾಗ ಎಷ್ಟು ಶ್ರೇಷ್ಠವೋ, ಅದೇ ರೀತಿ ಇಂದಿಗೂ ಅನೇಕ ಹಿಂದುತ್ವನಿಷ್ಠ ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಹಿಂದೂ ಧರ್ಮ ಮತ್ತು ರಾಷ್ಟ್ರಗಳ ರಕ್ಷಣೆಗಾಗಿ ‘ಅಶ್ವಾರೂಢ ಸೈನಿಕ’ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾತ್ಯತೀತ ಸರಕಾರ, ಆಡಳಿತ ಮತ್ತು ಪೊಲೀಸರಿಂದ ಎದುರಾಗುವ ತೊಂದರೆಗಳನ್ನು ಸಹಿಸಿಕೊಂಡು ನಿಸ್ವಾರ್ಥ ಭಾವದಿಂದ ಅವರು ಕೇವಲ ರಾಷ್ಟ್ರ-ಧರ್ಮ ರಕ್ಷಣೆಗಾಗಿ ಹಗಲಿರುಳು ಹೋರಾಡುತ್ತಿದ್ದಾರೆ.
1. ಜೀವನ ಮತ್ತು ಶಿಕ್ಷಣ
ಡಾ. ಎಸ್ ಆರ್ ಲೀಲಾ ಅವರು ೧೯೫೦ ರ ಜನವರಿ ೧೭ರಂದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಸಂಪಂಗೆರೆ ಗ್ರಾಮದಲ್ಲಿ ಜನಿಸಿದರು. ಅವರು ಸಂಸ್ಕೃತದಲ್ಲಿ ಎಂ.ಎ., ಎಂ.ಫಿಲ್., ಪಿ.ಹೆಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಎನ್.ಎಮ್.ಕೆ.ಆರ್.ವಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿಯಾಗಿ, ಸಂಸ್ಕೃತ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತರಾಗಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಈಅಫ್ಖ, ಆಖಖಿ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
2. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ

ಅ. ಡಾ. ಎಸ್ ಆರ್ ಲೀಲಾ ಅವರು ಸಂಸ್ಕೃತ ಮತ್ತು ಕನ್ನಡ ಸಾಹಿತ್ಯದ ಮೂಲಕ ಭಾರತೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ಅವರು ಅವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಲವಾರು ಉತ್ಕೃಷ್ಟವಾದ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಲೇಖನಿಯಿಂದ ಮೂಡಿದ ಹಿಂದೂ ಧರ್ಮದ ಮೌಲ್ಯಯುತ ತತ್ತ್ವ, ಸಂಸ್ಕೃತಿ ಮತ್ತು ಪರಂಪರೆಯ ಹರವು ಓದುಗರ ಮನಸ್ಸನ್ನು ಉಲ್ಲಸಿತಗೊಳಿಸಿದೆ. ದೇಶ-ವಿದೇಶಗಳಲ್ಲಿ ನಡೆದ ಹಲವಾರು ಸಂಸ್ಕೃತ ಸಮ್ಮೇಳನಗಳಲ್ಲಿ ಭಾರತೀಯ ಪರಂಪರೆ, ಇತಿಹಾಸ ಕುರಿತಂತೆ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಆ. ವೀರ ಸಾವರ್ಕರ್ ಸಂಘದ ಟ್ರಸ್ಟಿಯಾಗಿ ಸಾವರ್ಕರ್ ಸಾಹಿತ್ಯವನ್ನು ಹತ್ತು ಸಂಪುಟಗಳಲ್ಲಿ ಹೊರ ತರುವ ಬೃಹತ್ ಕಾರ್ಯದ ಭಾಗವಾಗಿದ್ದಾರೆ. ಹಾಗೂ ವೀರ ಸಾವರ್ಕರ್ ಅವರ ಪ್ರಸಿದ್ಧ ಕೃತಿ ‘ಭಾರತೀಯ ಇತಿಹಾಸದಲ್ಲಿನ ಏಳು ಸುವರ್ಣ ಪುಟಗಳು”, “ಹಿಂದುಪದಪಾದಶಾಹಿ” ಎಂಬ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಗ್ರಂಥಗಳಲ್ಲಿರುವಂತೆ ಕಾಲಕಾಲಕ್ಕೆ ಹಿಂದೂ ರಾಜರುಗಳು ಶೌರ್ಯವನ್ನು ಮೆರೆದಿದ್ದಾರೆಯೇ ಹೊರತು ರಣಹೇಡಿಯಂತೆ ಹಿಂದೆ ಸರಿದಿಲ್ಲ ಎಂಬ ಸತ್ಯವನ್ನು ಅನಾವರಣಗೊಳಿಸುವ ಮೂಲಕ ತಮ್ಮ ಪೂರ್ವಜರ ಕುರಿತು ಭಾರತೀಯರಲ್ಲಿ ಹೆಮ್ಮೆ ಮೂಡಿಸುವಲ್ಲಿ ಅನುವಾದ ಕಾರ್ಯ ಮಹತ್ವದ್ದಾಗಿದೆ. ರಾಷ್ಟ್ರಪ್ರೇಮದ ಬೆಳಕನ್ನು ಹಿಂದೂ ಸಮಾಜದಲ್ಲಿ ಹೊತ್ತಿಸಲು ಇವು ಮಹತ್ವಪೂರ್ಣ ಐತಿಹಾಸಿಕ ಕೃತಿಗಳಾಗಿವೆ.
ಇ. ಪ್ರಸಕ್ತ ಅತ್ಯಂತ ಪ್ರಸ್ತುತವಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಇಂಗ್ಲಿಷ್ ಕೃತಿ “ಥಾಟ್ಸ್ ಆನ್ ಪಾಕಿಸ್ತಾನ” ಎಂಬ ಗ್ರಂಥದನ್ನು “ಹಿಂದೂಗಳಿಗೆ ಹಿಂದುಸ್ತಾನ ಮುಸಲ್ಮಾನರಿಗೆ ಪಾಕಿಸ್ತಾನ ಎಂದಿದ್ದು ಏಕೆ?” ಎಂಬ ಶೀರ್ಷಿಕೆಯ ಗ್ರಂಥವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಇದು ಭಾರತದ ಇತಿಹಾಸದ ಕಪ್ಪು ಚುಕ್ಕೆಯಾದ ಭಾರತ ವಿಭಜನೆಯ ದುರಂತದ ಘಟನೆಯ ಸಂದರ್ಭದಲ್ಲಿ “ಜನಸಮುದಾಯ ವಿನಿಮಯ”ದ ಪ್ರಸ್ತಾವವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮುಂದಿಟ್ಟಿದ್ದರು. ಅಂದರೆ ಮುಸಲ್ಮಾನರಿಗಾಗಿ ಪ್ರತ್ಯೇಕ ಭೂಭಾಗವನ್ನೇ ಪಾಕಿಸ್ತಾನದ ಹೆಸರಿನಲ್ಲಿ ಕೊಡುತ್ತಿದ್ದೇವೆ. ಹಾಗಾಗಿ ಇಲ್ಲಿರುವ ಎಲ್ಲ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ, ಅಲ್ಲಿರುವ ಎಲ್ಲ ಹಿಂದೂಗಳು ಭಾರತಕ್ಕೆ ಬರಲಿ. ಅವರೊಂದಿಗೆ ಬಾಳಲು ಹಿಂದೂಗಳಿಗೆ ಸಾಧ್ಯವಿಲ್ಲ, ಅವರ ಮನೋಧರ್ಮವೇ ಬೇರೆ, ಹಿಂದೂಗಳದ್ದೇ ಬೇರೆ! ಎಂಬುದನ್ನು ಹಲವಾರು ಉದಾಹರಣೆಗಳನ್ನು ನೀಡುವ ಮೂಲಕ ಬಾಬಾ ಸಾಹೇಬರು ದೃಢೀಕರಿಸಿದ್ದಾರೆ. ದೂರದೃಷ್ಟಿಯುಳ್ಳ ಬಾಬಾರನ್ನು ಭಾರತೀಯರು ವಂದಿಸಬೇಕು ಎನ್ನುತ್ತಾರೆ ಡಾ. ಎಸ್. ಆರ್. ಲೀಲಾ.
3. ಸಂಸ್ಕೃತ ಭಾಷೆಯಲ್ಲಿ ಸಿನೆಮಾ, ನಾಟಕಗಳ ರಚನೆ
ಸಂಸ್ಕೃತ ಭಾಷೆಯಲ್ಲಿ ಸಿನೆಮಾ, ನಾಟಕಗಳ ರಚನೆ, ನಿರ್ಮಾಣ ಮತ್ತು ನಿರ್ದೇಶನವನ್ನು ಮಾಡಿದ್ದಾರೆ. ವೈಜ್ಞಾನಿಕ ಹಿನ್ನೆಲೆಯ ಆಧಾರವಾಗಿ ವರ್ಣಮಾಲೆಗಳನ್ನು ವರ್ಗೀಕರಿಸಿದ ಮಹರ್ಷಿ ಪಾಣಿನಿಯನ್ನು ಪ್ರಪ್ರಥಮ ಬಾರಿಗೆ ತೆರೆಯ ಮೇಲೆ ತಂದ ಹೆಗ್ಗಳಿಕೆ ಇವರ ಪಾಲಿಗಿದೆ. ಪ್ರಸಕ್ತ ಕಮಲ ಪುಷ್ಪದ ಮಹತ್ವ ಸಾರುವ ‘ಪದ್ಮ ಗಂಧಿ’ ಎಂಬ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಇಷ್ಟರಲ್ಲೇ ತೆರೆ ಕಾಣಲಿದೆ.
4. ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳು
ಡಾ. ಎಸ್ ಆರ್ ಲೀಲಾ ಅವರು ಹಿಂದೂಧರ್ಮದ ತಳಸ್ಪರ್ಶಿ ಅಧ್ಯಯನಕ್ಕೆ ಮತ್ತು ಅದರ ಉಳಿವಿಗಾಗಿ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಭಾಗವಹಿಸಿ, ಸಾಮ್ಯವಾದಿಗಳ ವೈಚಾರಿಕ ಆಕ್ರಮಣಗಳ ವಿರುದ್ಧ ಪ್ರಭಾವಿಯಾಗಿ ವಿಷಯ ಮಂಡನೆ ಮಾಡಿದ್ದಾರೆ. ಹಲವು ಪ್ರತಿಷ್ಠಿತ ವೇದಿಕೆಗಳ ಮೂಲಕ ‘ಸನಾತನ ಧರ್ಮ ರಕ್ಷಣೆ’ ವಿಷಯದ ಬಗ್ಗೆ ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ.
5. ಸಾಮಾಜಿಕ ಜಾಲತಾಣಗಳ ಮೂಲಕ ಧರ್ಮ ಜಾಗೃತಿ
ಸಾಮಾಜಿಕ ಜಾಲತಾಣಗಳ ಮೂಲಕ ಧರ್ಮ ಜಾಗೃತಿ ಮೂಡಿಸುವ ವಿರಳರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರಭಾವಶಾಲಿ ವಕ್ತಾರರಾಗಿದ್ದು, “ಲೀಲಾ ಜಾಲ” ಎಂಬ ಕನ್ನಡ ಯೂಟ್ಯೂಬ್ ಚಾನೆಲ್ ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೊಂದು ಮಹತ್ವಪೂರ್ಣ ಯುಟ್ಯೂಬ್ ಚಾನೆಲ್ ಆಗಿದೆ. ಹಲವು ಸಾವಿರ ಜನರು ಇದರ ಸದಸ್ಯರಾಗಿದ್ದಾರೆ. ವಿಶೇಷವಾಗಿ ಹಿಂದೂ ವಿರೋಧಿ ಘಟನೆಗಳ ಬಗ್ಗೆ ನಿರಂತರವಾಗಿ ಜಾಗೃತಿಯನ್ನು ಮೂಡಿಸುವ ಕೈಂಕರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.
6. ರಾಜಕೀಯ ಜೀವನ
ಡಾ. ಲೀಲಾ ಅವರು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯೆಯಾಗಿದ್ದು ತಮ್ಮ ರಾಜಕೀಯ ಜೀವನದಲ್ಲೂ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಅವಶ್ಯಕವಾದ ಶಾಲಾ ಕಟ್ಟಡ, ಬೀದಿ ದೀಪ, ರಸ್ತೆಗಳ ನಿರ್ಮಾಣದಂಥ ಮೂಲಭೂತ ಅವಶ್ಯಕತೆಗಳಿಗೆ ಒತ್ತು ನೀಡಿರುತ್ತಾರೆ.
7. ಡಾ. ಎಸ್ ಆರ್ ಲೀಲಾ ಇವರಿಗೆ ಆರ್ಯಭಟ, ಮುಂತಾದ ಅನೇಕ ಪ್ರಶಸ್ತಿಗಳು ಲಭಿಸಿವೆ
ಡಾ. ಎಸ್ ಆರ್ ಲೀಲಾ ಇವರಿಗೆ ಆರ್ಯಭಟ, ಮುಂತಾದ ಅನೇಕ ಪ್ರಶಸ್ತಿಗಳು ಲಭಿಸಿವೆ. ಇವರು ತಮ್ಮ ಹುಟ್ಟೂರಾದ ಸಂಪಂಗೆರೆಯಲ್ಲಿ ಶಾಸಕರ ಅಭಿವೃದ್ಧಿ ನಿಧಿ ಮತ್ತು ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಯನ್ನು ಕಟ್ಟಿಸಿದ್ದಾರೆ. ತಮ್ಮ ಸಂಸ್ಥೆಯಿಂದ ಎಲೆ ಮರೆ ಕಾಯಿಯಂತಿದ್ದ ಕೆಲವರಿಗೆ ತಮ್ಮ ತಾಯಿಯ ಹೆಸರಿನಲ್ಲಿ “ಚೂಡಾಮಣಿ” ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ.
ಸನಾತನ ಸಂಸ್ಥೆಯ ಬಗ್ಗೆ ಗೌರವೋದ್ಗಾರ :
ಹಿಂದು ಧರ್ಮದ ಒಳಿತಿಗೆ, ಸಂರಕ್ಷಣೆಗೆ ಸನಾತನವು ತನ್ನ ಕೊಡುಗೆ ನೀಡುತ್ತಿದೆ !
ಅತ್ಯದ್ಭುತ ಕಾರ್ಯ ಮಾಡುವ ಸನಾತನ ಸಂಸ್ಥೆಗೆ ಧನ್ಯವಾದಗಳು. ಅವರು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಅಂದ ಹಾಗೆ ಏನಿದು ಸನಾತನ ಸಂಸ್ಥೆ ? ಸನಾತನ ಎಂದರೆ ಶಾಶ್ವತವಾದುದು. ಆದ್ದರಿಂದ ಅವರು ಈ ಧರ್ಮದ ಶಾಶ್ವತ ಪ್ರಕೃತಿಯ ಜೋಪಾಸನೆಗಾಗಿ ಶಾಶ್ವತ ಸ್ವರೂಪದ ಕಾರ್ಯ ಮಾಡುತ್ತಿದ್ದಾರೆ. ಸನಾತನ ಧರ್ಮವು ಈ ದೇಶದ ಅಂದರೆ ಭಾರತದ, ಹಿಂದೂಸ್ಥಾನದ ಧರ್ಮವಾಗಿದೆ. ಆದರೆ ಸನಾತನ ಧರ್ಮವನ್ನು ಗೌರವಿಸುವವರ ಸಂಖ್ಯೆ ಬಹಳ ಕಡಿಮೆ. ಸನಾತನ ಧರ್ಮವನ್ನು ಅನುಸರಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಕೊಂಡರೂ ನಿಜವಾಗಿ ಈ ಧರ್ಮವನ್ನು ಅರ್ಥಮಾಡಿಕೊಳ್ಳುವ, ಮೆಚ್ಚುವ ಮತ್ತು ಪೂಜಿಸುವ ಜನರು ಬಹಳ ಕಡಿಮೆ. ಆದುದರಿಂದ ಸನಾತನ ಧರ್ಮದ ರಕ್ಷಣೆಗಾಗಿ ಮತ್ತು ಉನ್ನತಿಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವರನ್ನು, ಸನಾತನ ಧರ್ಮದ ಉನ್ನತಿಗಾಗಿ ಶ್ರಮಿಸುವವರನ್ನು ಅಭಿನಂದಿಸಲೇ ಬೇಕು, ಆ ಎಲ್ಲಾ ಸನಾತನಿಗಳಿಗೆ ಕೃತಜ್ಞತೆ ಯನ್ನು ಸಲ್ಲಿಸಲೇಬೇಕು. ಇಂದು ನಾವೆಲ್ಲ ನೋಡುತ್ತಿರುವ ಹಾಗೆ ಸನಾತನ ಧರ್ಮದ ಮೇಲೆ ವಿವಿಧ ದಿಕ್ಕುಗಳಿಂದ ಹಲವಾರು ಜನರು ಹಲವು ರೀತಿಯ ದಾಳಿ ನಡೆಸುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ, ಅದರ ಹೊರತಾಗಿಯೂ ಈ ಸನಾತನ ಸಂಸ್ಥೆಯವರು ಈ ಕಾರ್ಯವನ್ನು ತಮ್ಮದು ಎಂದು ತಿಳಿದು ತಮ್ಮನ್ನು ಸಂಪೂರ್ಣವಾಗಿ ಈ ಕಾರ್ಯ ದೊಂದಿಗೆ ಏಕರೂಪವಾಗಿದ್ದಾರೆ.ವಾಸ್ತವ ವಾಗಿ ಸನಾತನ ಧರ್ಮವು ಬಹಳ ಸುಂದರ ಮನೋಭಾವದ ಧರ್ಮವಾಗಿದೆ. ಇದು ಕೇವಲ ಹಕ್ಕುಗಳ ಬಗ್ಗೆ ಮಾತ್ರವಲ್ಲ, ನಿಮ್ಮ ಕರ್ತವ್ಯಗಳನ್ನು ನೀವು ನಿರ್ವಹಿಸಬೇಕೆಂದು ಬೋಧಿಸುತ್ತದೆ. ಅದನ್ನೇ ಸನಾತನವು ತನ್ನ ಆಚರಣೆಗಳಿಂದ, ತನ್ನ ಪ್ರಕಾಶನಗಳಿಂದ ಮಾಡುತ್ತಿದೆ, ತನ್ನ ಸಾಧಕರಿಂದ ಮಾಡಿಸುತ್ತಿದೆ. ಹಲವರು ತಮ್ಮದೇ ಆದ ರೀತಿ ಸನಾತನದ ಒಳಿತಿಗಾಗಿ, ಸಂರಕ್ಷಣೆ ಗಾಗಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಆದುದರಿಂದ ಸನಾತನ ಧರ್ಮವನ್ನು ಮತ್ತು ಅದಕ್ಕಾಗಿ ಶ್ರಮಿಸುತ್ತಿರುವ ಸನಾತನ ಸಂಸ್ಥೆಯನ್ನು ಅಭಿನಂದಿಸಬೇಕು ಎಂದು ನಾನು ಮನಃಪೂರ್ವಕ ಭಾವಿಸುತ್ತೇನೆ. ಮತ್ತು ಸಂಸ್ಥೆಯ ಮಹತ್ತರ ಕಾರ್ಯವನ್ನು ಬಹಳ ಗೌರವಿಸ ಬೇಕು. ಧನ್ಯವಾದಗಳು !