ಲಾಹೋರ್ (ಪಾಕಿಸ್ತಾನ) – ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಪ್ರಭು ಶ್ರೀರಾಮನ ಪುತ್ರ ‘ಲವ’ನ ಪಾಕಿಸ್ತಾನದಲ್ಲಿರುವ ಸಮಾಧಿಯ ದರ್ಶನ ಪಡೆದರು. ಶುಕ್ಲಾ ಅವರು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ‘ಚಾಂಪಿಯನ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿ’ಯ ಸೆಮಿಫೈನಲ್ ಪಂದ್ಯವನ್ನು ನೋಡಲು ಲಾಹೋರ್‌ಗೆ ಹೋಗಿದ್ದರು. ಆ ಸಮಯದಲ್ಲಿ, ಅವರು ಲಾಹೋರ್‌ನ ಪ್ರಾಚೀನ ಕೋಟೆಯಲ್ಲಿರುವ ‘ಲವ’ನ ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದರು.
ಶುಕ್ಲಾ ಅವರು ಸಮಾಧಿಗೆ ಭೇಟಿ ನೀಡುವಾಗ ತೆಗೆದ ಫೋಟೋಗಳನ್ನು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಶುಕ್ಲಾ ಅವರು, “ಲವ್‌ನ ಹೆಸರಿನಿಂದಲೇ ಈ ನಗರಕ್ಕೆ ‘ಲಾಹೋರ್’ ಎಂಬ ಹೆಸರು ಬಂದಿದೆ. ಈ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ” ಎಂದು ಹೇಳಿದ್ದಾರೆ. ಅವರೊಂದಿಗೆ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಇದ್ದರು. ಪ್ರಭು ಶ್ರೀರಾಮನ ಇನ್ನೊಬ್ಬ ಪುತ್ರ ಕುಶನ ಹೆಸರಿನಲ್ಲಿ ಕಸೂರ್ ನಗರವನ್ನು ಸ್ಥಾಪಿಸಲಾಗಿದೆ. ಪಾಕಿಸ್ತಾನ ಸರಕಾರವು ಈ ವಾಸ್ತವವನ್ನು ಒಪ್ಪಿಕೊಂಡಿದೆ ಎಂದು ಶುಕ್ಲಾ ಹೇಳಿದ್ದಾರೆ.