ದೆಹಲಿಯ ೪೦ ಹಳ್ಳಿಗಳ ಇಸ್ಲಾಮಿ ಹೆಸರುಗಳನ್ನು ಬದಲಾಯಿಸುವ ಶಿಫಾರಸ್ಸು ಆಮ್ ಆದ್ಮಿ ಸರಕಾರಕ್ಕೆ ನೀಡುವೆವು – ಭಾಜಪ

ದೆಹಲಿಯ ೪೦ ಹಳ್ಳಿಗಳ ಹೆಸರು ಇಸ್ಲಾಮಿ ಆಗಿದೆ. ಅವನ್ನು ಬದಲಾಯಿಸಲು ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂಬ ಮಾಹಿತಿ ದೆಹಲಿಯ ಭಾಜಪದ ಪ್ರದೇಶಾಧ್ಯಕ್ಷ ಆದೇಶ ಗುಪ್ತಾ ಅವರು ನೀಡಿದರು. ಅವರು ಅಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಪಲಕ್ಕಡ (ಕೇರಳ)ದಲ್ಲಿ ಸಂಘ ಸ್ವಯಂಸೇವಕನ ಹತ್ಯೆಗೆ ಸಂಬಂಧಿಸಿದಂತೆ ಪಿಎಫಐ ಮತ್ತು ಎಸಡಿಪಿಐಯ ೪ ಕಾರ್ಯಕರ್ತರ ಬಂಧನ

ಇಲ್ಲಿ ಏಪ್ರಿಲ ೧೬ ರಂದು ರಾಷ್ಟ್ರೀಯ ಸ್ವಯಂ ಸಂಘದ ಸ್ವಯಂಸೇವಕ ಶ್ರೀನಿವಾಸನರವರ ಹತ್ಯೆಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫಐ) ಮತ್ತು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ ಇಂಡಿಯಾ(ಎಸಡಿಪಿಐ)ನ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯಲ್ಲಿ ಭಾಜಪದ ಮುಖಂಡನ ಮೇಲೆ ಗುಂಡು ಹಾರಿಸಿ ಕೊಲೆ

ರಾಜಧಾನಿ ದೆಹಲಿಯ ಮಯೂರ ವಿಹಾರ ಪರಿಸರದಲ್ಲಿ ಭಾಜಪದ ಜಿಲ್ಲಾ ಸಚಿವರಾದ ಜೀತೂ ಚೌಧರಿಯವರನ್ನು ಗುಂಡಾಗಳು ಗುಂಡಿಕ್ಕಿ ಕೊಲೆ ಮಾಡಿದುರ. ಜೀತೂ ಚೌಧರಿಯವರು ಮಯೂರ ವಿಹಾರದಲ್ಲಿರುವ ತಮ್ಮ ಮನೆಯಿಂದ ಹೊರಗೆ ಬಂದ ತಕ್ಷಣ ಗುಂಡಾಗಳು ಅವರ ಮೇಲೆ ಗುಂಡು ಹಾರಿಸಿದರು.

ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಧಾರ್ಮಿಕ ಸಹೋದರರಿಂದಲೇ ಏಟು ತಿಂದ ಮುಸ್ಲಿಂ ಯುವಕ

ಇಲ್ಲಿನ ಬಂಕಟ್ಟಾ ಗ್ರಾಮದಲ್ಲಿ ಬಿಜೆಪಿಯನ್ನು ಬೆಂಬಲಿಸಿದ ನಂತರ ಮೊಹಮ್ಮದ ಲುಕ್ಮಾನ ಎಂಬ ಮುಸ್ಲಿಂ ಯುವಕನನ್ನು ಆತನ ಧಾರ್ಮಿಕ ಸಹೋದರರು ಮಸೀದಿಯಲ್ಲಿ ಪ್ರಾರ್ಥನೆ ಮಾಡದಂತೆ ತಡೆದಿದ್ದಾರೆ.

೪ ರಾಜ್ಯಗಳ ೪ ವಿಧಾನಸಭೆ ಮತ್ತು ೧ ಲೋಕಸಭೆ ಉಪಚುನಾವಣೆಯಲ್ಲಿ ಭಾಜಪ ವಿರೋಧಿಗಳಿಗೆ ಯಶಸ್ಸು

ಬಿಹಾರ, ಬಂಗಾಳ, ಛತ್ತಿಸಗಢ ಮತ್ತು ಮಹಾರಾಷ್ಟ್ರದಲ್ಲಿ ನಡೆದ ೪ ವಿಧಾನಸಭಾ ಕ್ಷೇತ್ರಗಳು ಮತ್ತು ೧ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾಜಪಾವು ಯಾವುದೇ ಸ್ಥಾನವನ್ನು ಗೆದ್ದಿಲ್ಲ. ಮಹಾರಾಷ್ಟ್ರದ ಉತ್ತರ ಕೋಲ್ಲಾಪುರದಲ್ಲಿ ಕಾಂಗ್ರೆಸ ಅಭ್ಯರ್ಥಿ ಜಯಶ್ರೀ ಜಾಧವ, ಬಿಹಾರದ ಬೋಚಹಾ ಕ್ಷೇತ್ರದಿಂದ ರಾಷ್ಟ್ರೀಯ ಜನತಾದಳದ ಅಭ್ಯರ್ಥಿ ಮತ್ತು ಛತ್ತೀಸಗಢದಿಂದ ಕಾಂಗ್ರೆಸ ಆಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪ ಬೆಂಬಲಿಗ ಪಕ್ಷೇತರ ಸರಪಂಚನ ಹತ್ಯೆ

ಬಾರಾಮುಲ್ಲಾದ ಮಂಜುರ ಅಹಮದ ಬಾಂಗರು, ಭಾಜಪ ಬೆಂಬಲಿಗ ಪಕ್ಷೇತರ ಸರಪಂಚನನ್ನು ಏಪ್ರಿಲ ೧೫ರಂದು ಸಂಜೆ ಜಿಹಾದಿ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಬಂಗಾರು ಮನೆಯಿಂದ ಹೊರಬರುವುದನ್ನೇ ಕಾಯುತ್ತಿದ್ದ ಉಗ್ರರು ಅವರು ಹೊರ ಬರುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ.

ಭೋಪಾಲ್‌ನಲ್ಲಿ ಮದರಸಾದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ! – ಭಾಜಪ ಶಾಸಕ ರಾಮೇಶ್ವರ ಶರ್ಮಾ ಆಗ್ರಹ

ಸರಕಾರಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈಗ ಮದರಸಾಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ‘ಮೌಲ್ವಿ ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿದ್ದಾರೆ ಮತ್ತು ಅವರು ಏನು ಕಲಿಯುತ್ತಿದ್ದಾರೆ’ ಎಂಬುದನ್ನು ಎಲ್ಲರೂ ತಿಳಿಯಬೇಕು, ಎಂದು ಇಲ್ಲಿಯ ಭಾಜಪ ಶಾಸಕ ರಾಮೇಶ್ವರ ಶರ್ಮಾ ಆಗ್ರಹಿಸಿದ್ದಾರೆ.

ಹಿಂದುತ್ವನಿಷ್ಠರ ವಿರೋಧದ ನಂತರವೂ, ಬೇಲೂರಿನಲ್ಲಿ ದೇವಾಲಯದ ರಥೋತ್ಸವವು ಕುರಾನ್ ಪಠಣದೊಂದಿಗೆ ಪ್ರಾರಂಭ !

ಪ್ರಸಿದ್ಧ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಎಪ್ರಿಲ್ ೧೧ ರಂದು ರಥೋತ್ಸವದ ಆರಂಭವನ್ನು ಕುರಾನ್ ಪಠಣ ಎಂದು ಕರೆಯಲ್ಪಡುವ ಐತಿಹಾಸಿಕ ಸಂಪ್ರದಾಯದಿಂದ ಪ್ರಾರಂಭಿಸಲಾಯಿತು. ಈ ಸಂಪ್ರದಾಯವನ್ನು ಹಿಂದುತ್ವನಿಷ್ಠರು ಕಾನೂನಾತ್ಮಕವಾಗಿ ವಿರೋಧಿಸಿದ್ದರು.

ಗೋವಾದಲ್ಲಿ ಪೋರ್ಚುಗೀಸರು ನಾಶ ಮಾಡಿದ ಹಿಂದು ದೇವಾಲಯಗಳನ್ನು ಶೋಧನೆಯ ಪ್ರಕ್ರಿಯೆ ಪ್ರಾರಂಭ

ಹಳೆಗೂಡಿಕೆ ಹಾಗೂ ಪುರಾತತ್ವ ನಿರ್ದೇಶನಾಲಯವು ಪೊರ್ಚುಗೀಸರು ಗೋವಾದಲ್ಲಿ ತಮ್ಮ ಕ್ರೂರ ಅಧಿಕಾರಾವಧಿಯಲ್ಲಿ ನಾಶ ಮಾಡಿದ ಹಿಂದೂಗಳ ದೇವಾಲಯಗಳನ್ನು ಶೋಧನೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಫೇಸ್‌ಬುಕ್‌ನಲ್ಲಿ ‘ಜೈ ಶ್ರೀರಾಮ್’ ಎಂದು ಬರೆದಿದ್ದಕ್ಕಾಗಿ ಭೋಪಾಲ್‌ನಲ್ಲಿ ಭಾಜಪ ಬೆಂಬಲಿಗ ಮುಸ್ಲಿಂನನ್ನು ಆತನ ಧರ್ಮಬಾಂಧವರಿಂದ ಥಳಿತ

ಒಂದೆಡೆ, ಹಿಂದೂಗಳಿಗೆ ಸರ್ವಧರ್ಮ ಸಮನ್ವಯದ ಡೋಸ್ ನೀಡುತ್ತಾರೆ, ಮತ್ತೊಂದೆಡೆ, ಮತಾಂಧರು ಮಾತ್ರ ಹಿಂದೂಗಳನ್ನು ಮತ್ತು ಅವರನ್ನು ಬೆಂಬಲಿಸುವ ಧರ್ಮಬಾಂಧವರ ಮೇಲೆ ದಾಳಿ ಮಾಡುತ್ತಾರೆ ! ಇದು ಜಾತ್ಯತೀತರಿಗೆ ಕಾಣಿಸುವುದಿಲ್ಲವೇ ?