ಹಿಂದುತ್ವನಿಷ್ಠರ ವಿರೋಧದ ನಂತರವೂ, ಬೇಲೂರಿನಲ್ಲಿ ದೇವಾಲಯದ ರಥೋತ್ಸವವು ಕುರಾನ್ ಪಠಣದೊಂದಿಗೆ ಪ್ರಾರಂಭ !

ನೇತೃತ್ವ ವಹಿಸಿದ ರಾಜ್ಯದ ದತ್ತಿ ಇಲಾಖೆ !

ಯಾವುದೇ ಮಸೀದಿ ಅಥವಾ ಚರ್ಚ್‌ನಲ್ಲಿ ಕಾರ್ಯಕ್ರಮವನ್ನು ಹಿಂದೂಗಳ ವೇದಮಂತ್ರದಿಂದ ಪ್ರಾರಂಭಿಸಲಾಯಿತು ಎಂಬ ಸಂಪ್ರದಾಯವನ್ನು ನೀವು ಎಂದಾದರೂ ಕೇಳಿದ್ದೀರಾ ? ಹಿಂದೂಗಳು ಮಾತ್ರ ಇಂತಹ ಆಘಾತಕಾರಿ ಸಂಪ್ರದಾಯಗಳನ್ನು ಹಮ್ಮಿಕೊಳ್ಳುತ್ತದೆ ಮತ್ತು ತಮ್ಮನ್ನು ತಾವು ‘ಸೆಕ್ಯುಲರ್’ ಎಂದು ಕರೆಯುವ ಅದೃಷ್ಟವಂತರು ಎಂದು ತಿಳಿಯುತ್ತಾರೆ !

ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಮತ್ತು ಸರಕಾರದ ಅಡಿಯಲ್ಲಿ ಬರುವ ದತ್ತಿ ಇಲಾಖೆಯಿಂದ ಇಂತಹ ಉಪಕ್ರಮವನ್ನು ತೆಗೆದುಕೊಳ್ಳುವುದು ಹಿಂದುಗಳಿಗೆ ಅಪೇಕ್ಷಿತವಿಲ್ಲ !

ಬೇಲೂರು – ಇಲ್ಲಿಯ ಪ್ರಸಿದ್ಧ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಎಪ್ರಿಲ್ ೧೧ ರಂದು ರಥೋತ್ಸವದ ಆರಂಭವನ್ನು ಕುರಾನ್ ಪಠಣ ಎಂದು ಕರೆಯಲ್ಪಡುವ ಐತಿಹಾಸಿಕ ಸಂಪ್ರದಾಯದಿಂದ ಪ್ರಾರಂಭಿಸಲಾಯಿತು. ಈ ಸಂಪ್ರದಾಯವನ್ನು ಹಿಂದುತ್ವನಿಷ್ಠರು ಕಾನೂನಾತ್ಮಕವಾಗಿ ವಿರೋಧಿಸಿದ್ದರು. ಈ ಸಂಪ್ರದಾಯವನ್ನು ಉಳಿಸಿಕೊಳ್ಳಲು ರಾಜ್ಯದ ದತ್ತಿ ಇಲಾಖೆ ಪ್ರಯತ್ನ ನಡೆಸಿತು. ಈ ವೇಳೆ ಇಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಹಬ್ಬವು ೨ ದಿನಗಳ ಕಾಲ ನಡೆಯುತ್ತದೆ.

(ಸೌಜನ್ಯ : Times of India)

೧. ಶ್ರೀ ಚೆನ್ನಕೇಶವ ದೇವಸ್ಥಾನದ ರಥೋತ್ಸವದ ಆರಂಭದಲ್ಲಿ ಕುರಾನ್ ಪಠಿಸುವ ಸಂಪ್ರದಾಯವನ್ನು ನಿಲ್ಲಿಸಬೇಕೆಂದು ಹಿಂದುತ್ವನಿಷ್ಠರು ಸರಕಾರಕ್ಕೆ ಮತ್ತು ದೇವಾಲಯದ ಆಡಳಿತವನ್ನು ಒತ್ತಾಯಿಸಿದರು.

೨. ಚೆನ್ನಕೇಶವ ದೇವಸ್ಥಾನದ ಆಡಳಿತ ಮಂಡಳಿಯು ಮುಸ್ಲಿಂ ಉದ್ಯಮಿಗಳಿಗೆ ದೇವಸ್ಥಾನದ ಉತ್ಸವದಲ್ಲಿ ಅಂಗಡಿಗಳನ್ನು ಇಡಬೇಡಿ ಎಂದು ಹೇಳುವ ಮೂಲಕ ಗೊಂದಲವನ್ನು ಸೃಷ್ಟಿಸಲಾಯಿತು; ಆದರೆ ದತ್ತಿ ಇಲಾಖೆಯು ವಿವಿಧ ಅರ್ಚಕರೊಂದಿಗೆ ಸಮಾಲೋಚನೆ ನಡೆಸಿ ಹಿಂದೂಯೇತರ ವ್ಯಾಪಾರಿಗಳಿಗೆ ಉತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಿದೆ. (ಮುಸ್ಲಿಂ ಓಲೈಸುವ ದತ್ತಿ ಇಲಾಖೆ ! ಹಿಂದೂಗಳ ಕಲ್ಯಾಣಕ್ಕಿಂತ ಹಿಂದೂಯೇತರರ ಹಿತಕಾಯುವ ದತ್ತಿ ಇಲಾಖೆಯನ್ನು ವಿಸರ್ಜಿಸಿ ! – ಸಂಪಾದಕರು) ಈಗ ೧೫ ಮುಸ್ಲಿಂ ಅಂಗಡಿಕಾರರು ಇಲ್ಲಿ ಮಳಿಗೆ ಹಾಕಿದ್ದಾರೆ.