ಮಸೀದಿಗಳಲ್ಲಿ ಸಿಸಿಟಿವಿ ಅಳವಡಿಸಲು ಭೋಪಾಲ್ ನಗರದ ಖಾಜಿ (ಮುಸಲ್ಮಾನ ನ್ಯಾಯಾಧೀಶರು) ಯವರ ಬೇಡಿಕೆ
ವಾಸ್ತವದಲ್ಲಿ ಇಂತಹ ಬೇಡಿಕೆ ಮಾಡುವಂತಹ ಪ್ರಮೇಯ ಬರಬಾರದು. ಸರಕಾರಿ ವ್ಯವಸ್ಥೆಗಳು ಅದನ್ನು ತಾವಾಗಿ ಸ್ಥಾಪಿಸುವುದು ಅಗತ್ಯವಾಗಿದೆ. ಅದನ್ನು ಮೀರಿ ರಾಷ್ಟ್ರ ಮತ್ತು ಸಮಾಜಕ್ಕೆ ಕುತ್ತು ತರುವಂತಹ ಚಟುವಟಿಕೆಗಳಲ್ಲಿ ತೊಡಗಿರುವ ಮಸೀದಿ, ಮದರಸಾಗಳಿಗೆ ಬೀಗ ಜಡಿಯುವುದು ಅನಿವಾರ್ಯವಾಗಿದೆ !
ಭೋಪಾಲ್ (ಮಧ್ಯಪ್ರದೇಶ) – ಸರಕಾರಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈಗ ಮದರಸಾಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ‘ಮೌಲ್ವಿ ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿದ್ದಾರೆ ಮತ್ತು ಅವರು ಏನು ಕಲಿಯುತ್ತಿದ್ದಾರೆ’ ಎಂಬುದನ್ನು ಎಲ್ಲರೂ ತಿಳಿಯಬೇಕು, ಎಂದು ಇಲ್ಲಿಯ ಭಾಜಪ ಶಾಸಕ ರಾಮೇಶ್ವರ ಶರ್ಮಾ ಆಗ್ರಹಿಸಿದ್ದಾರೆ. ರಾಜ್ಯದ ಖರಗೋನ್‌ನಲ್ಲಿ ರಾಮನವಮಿಯ ಶೋಭಾಯಾತ್ರೆಯ ವೇಳೆ ಮಸೀದಿಯಿಂದ ಕಲ್ಲು ತೂರಾಟದ ಘಟನೆಯ ನಂತರ ಭೋಪಾಲ್‌ನ ಖಾಜಿ ಮಸೀದಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಿದ್ದರು. ಬಳಿಕ ಶಾಸಕ ಶರ್ಮಾ ಅವರು ಮೇಲಿನ ಬೇಡಿಕೆಯನ್ನು ಮುಂದಿಟ್ಟರು.