ಫೇಸ್‌ಬುಕ್‌ನಲ್ಲಿ ‘ಜೈ ಶ್ರೀರಾಮ್’ ಎಂದು ಬರೆದಿದ್ದಕ್ಕಾಗಿ ಭೋಪಾಲ್‌ನಲ್ಲಿ ಭಾಜಪ ಬೆಂಬಲಿಗ ಮುಸ್ಲಿಂನನ್ನು ಆತನ ಧರ್ಮಬಾಂಧವರಿಂದ ಥಳಿತ

ಬೆಂಬಲಿಗನ ೪ ವರ್ಷದ ಮಗುವನ್ನು ಎತ್ತರದಿಂದ ಕೆಳಗೆ ಎಸೆಯಲಾಯಿತು !

ಮನೆಯಲ್ಲಿ ಧ್ವಂಸ

ಒಂದೆಡೆ, ಹಿಂದೂಗಳಿಗೆ ಸರ್ವಧರ್ಮ ಸಮನ್ವಯದ ಡೋಸ್ ನೀಡುತ್ತಾರೆ, ಮತ್ತೊಂದೆಡೆ, ಮತಾಂಧರು ಮಾತ್ರ ಹಿಂದೂಗಳನ್ನು ಮತ್ತು ಅವರನ್ನು ಬೆಂಬಲಿಸುವ ಧರ್ಮಬಾಂಧವರ ಮೇಲೆ ದಾಳಿ ಮಾಡುತ್ತಾರೆ ! ಇದು ಜಾತ್ಯತೀತರಿಗೆ ಕಾಣಿಸುವುದಿಲ್ಲವೇ ?

ಭೋಪಾಲ್ (ಮಧ್ಯಪ್ರದೇಶ) – ಇಲ್ಲಿಯ ಭಾಜಪ ಶಾಸಕ ರಾಮೇಶ್ವರ ಶರ್ಮಾ ಅವರ ಬೆಂಬಲಿಗ ಮುನವ್ವರ್ ಅನ್ಸಾರಿ ಅವರು ಶರ್ಮಾ ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ‘ಜೈ ಶ್ರೀರಾಮ್’ ಎಂದು ಬರೆದಿದ್ದರಿಂದ ಅವರನ್ನು ಮತ್ತು ಅವರ ಪತ್ನಿಯನ್ನು ಧರ್ಮಬಾಂಧವರು ಥಳಿಸಿದ್ದಾರೆ. ಅಲ್ಲದೆ, ಅನ್ಸಾರಿ ಅವರ ೪ ವರ್ಷದ ಮಗನನ್ನು ಎತ್ತರದಿಂದ ಕೆಳಗೆ ಎಸೆಯಲಾಯಿತು. ಆತನನ್ನು ಕಾಲುಗಳಿಂದ ತುಳಿಯಲು ಪ್ರಯತ್ನಿಸಿದನು. ಅವರು ಅನ್ಸಾರಿಯನ್ನು ‘ಮುಸ್ಲಿಂ ದ್ರೋಹಿ’ ಎಂದು ಕರೆಯುತ್ತಿದ್ದರು. ಅವರ ಮನೆಯನ್ನೂ ಧ್ವಂಸ ಮಾಡಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ‘ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಶರ್ಮಾ ಆಗ್ರಹಿಸಿದ್ದಾರೆ.

೧. ಅನ್ಸಾರಿಯವರ ನೆರೆಹೊರೆಯವರಾದ ಸೊಹೆಲ್ ಅಹಮದ್ ಅವರ ಪೋಸ್ಟ್ ಅನ್ನು ಓದಿ, ‘ಅನ್ಸಾರಿ ಹಿಂದುತ್ವನಿಷ್ಠ ನಾಯಕನನ್ನು ಬೆಂಬಲಿಸುತ್ತಿದ್ದಾರೆ ಮತ್ತು ಧರ್ಮ ದ್ರೋಹ ಮಾಡುತ್ತಿದ್ದಾರೆ’, ಎಂದು ಮಾಹಿತಿಯನ್ನು ಊರಿನೆಲ್ಲಡೆ ಹಬ್ಬಿಸಿದರು. ಅದರ ನಂತರ, ಆ ಪ್ರದೇಶದ ರಹಮತ್ ಮಸೀದಿಯಲ್ಲಿ ಆರೋಪಿಯು ಅನ್ಸಾರಿಗೆ ಪಾಠ ಕಲಿಸಲು ನಿರ್ಧರಿಸಿದರು. ಬಳಿಕ ೧೫ ಮಂದಿ ಅನ್ಸಾರಿ ಮನೆಗೆ ಬಂದು ಥಳಿಸಿದ್ದಾರೆ. ‘ಈಗ ಭಜರಂಗದಳದವರನ್ನು ಕರೆಯಿರಿ’, ಎಂದು ಹೇಳುತ್ತಿದ್ದರು.

೨. ಅನ್ಸಾರಿಯು, “ಈಗ ಆರೋಪಿಗಳು ನಮ್ಮನ್ನು ಈ ಪ್ರದೇಶವನ್ನು ಬಿಟ್ಟು ಹೋಗುವಂತೆ ಬೆದರಿಕೆ ಹಾಕುತ್ತಿದ್ದಾರೆ. ‘ಇಲ್ಲಿ ಬದುಕುವುದೇ ಕಷ್ಟವಾಗುವ ಹಾಗೆ ಮಾಡುತ್ತೇವೆ’, ಎಂಬ ಬೆದರಿಕೆಗಳೂ ಬರುತ್ತಿವೆ.” ಎಂದು ಹೇಳಿದರು.

ಪೊಲೀಸರನ್ನು ಸಂಪರ್ಕಿಸಿದರೂ ಅವರು ಘಟನಾ ಸ್ಥಳಕ್ಕೆ ಬಾರದೇ ಆರೋಪಿಗಳ ಕಚೇರಿಗೆ ತೆರಳಿದ ಆರೋಪ !

‘ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಪೊಲೀಸರು ಈ ರೀತಿ ವರ್ತಿಸಿದರೆ, ಜನರಿಗೆ ರಕ್ಷಣೆ ನೀಡುವವರು ಯಾರು ?’ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ !

ಥಳಿಸುವಾಗ ಮುನವ್ವರ್ ಅನ್ಸಾರಿ ಅವರ ಮಗ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದರು; ಆದರೆ, ಆರೋಪಿಗಳಲ್ಲಿ ಒಬ್ಬನಾದ ಸೊಹೈಲ್‌ನ ಕಚೇರಿಗೆ ಹೋಗಿ ಚಹಾ ಕುಡಿದು ಹೋದರು. ಎಂದು ಅನ್ಸಾರಿ ಆರೋಪಿಸಿದ್ದಾರೆ.