ಮಸೀದಿಯಲ್ಲಿ ನಮಾಜು ಮಾಡದಂತೆ ತಡೆದು ‘ಕಾಫಿರ’ ಎಂದು ಹೀಗಳೆದರು!
(ಕಾಫಿರ ಎಂದರೆ ಇಸ್ಲಾಂನಲ್ಲಿ ನಂಬಿಕೆಯಿಲ್ಲದವನು)
ಗೊಂಡಾ (ಉತ್ತರಪ್ರದೇಶ) – ಇಲ್ಲಿನ ಬಂಕಟ್ಟಾ ಗ್ರಾಮದಲ್ಲಿ ಬಿಜೆಪಿಯನ್ನು ಬೆಂಬಲಿಸಿದ ನಂತರ ಮೊಹಮ್ಮದ ಲುಕ್ಮಾನ ಎಂಬ ಮುಸ್ಲಿಂ ಯುವಕನನ್ನು ಆತನ ಧಾರ್ಮಿಕ ಸಹೋದರರು ಮಸೀದಿಯಲ್ಲಿ ಪ್ರಾರ್ಥನೆ ಮಾಡದಂತೆ ತಡೆದಿದ್ದಾರೆ. ಆತನನ್ನು ಮಸೀದಿಯಿಂದ ಹೊರಗೆ ಕರೆದೊಯ್ದು ಲಾಠಿಯಿಂದ ಥಳಿಸಿದ್ದಾರೆ. ಇದಕ್ಕೂ ಮುನ್ನ ಮೊಹಮ್ಮದ ಲುಕ್ಮಾನ ಸಹೋದರ ಸರಫರಾಜನನ್ನು ಕೂಡಾ ಥಳಿಸಿದ್ದರು.
ಲುಕ್ಮಾನ ‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದೆ. ಇದು ನನ್ನ ಸಹೋದರರನ್ನು ಅಸಮಾಧಾನಗೊಳಿಸಿತ್ತು. ನನ್ನ ಸಹೋದರ ಸರಫರಾಜ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಹೋದಾಗ ಅವನನ್ನು ತಡೆದರು. ಮಸೀದಿಗಳ ಭೋಂಗಾಗಳನ್ನು ತೆಗೆಯುವಂತೆ ಬಿಜೆಪಿ ಕೇಳುತ್ತಿದೆ, ನೀವು ಬಿಜೆಪಿಯಲ್ಲಿದ್ದೀರಿ, ನಮಾಜಗೆ ಏಕೆ ಬರುತ್ತೀರಿ? ನಿಮಗೆ ಧರ್ಮವಿಲ್ಲ. ನೀನು ‘ಕಾಫಿರ’(ಕಾಫಿರ ಎಂದರೆ ಇಸ್ಲಾಂನಲ್ಲಿ ನಂಬಿಕೆಯಿಲ್ಲದವನು) ಎಂದು ಅವನು ಹೇಳುತ್ತಿದ್ದನು. ಈ ವೇಳೆ ಸರಫರಾಜಗೆ ಪೆಟ್ಟು ಬಿದ್ದಿದೆ. ಈ ವಿಷಯ ತಿಳಿದು ನಾನು ಅಲ್ಲಿಗೆ ಹೋದಾಗ ನನಗೂ ಥಳಿಸಿದ್ದಾರೆ’ ಎಂದು ದೂರು ನೀಡಲಾಗಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಸಂಪಾದಕೀಯ ನಿಲುವುಬಿಜೆಪಿಯು ಮುಸ್ಲಿಂ ವಿರೋಧ ಪಕ್ಷವೆಂದು ಅನೇಕ ಮುಸಲ್ಮಾನರು ಭಾವಿಸುತ್ತಾರೆ ಮತ್ತು ಅವರು ಬಿಜೆಪಿಯನ್ನು ವಿರೋಧಿಸುತ್ತಾರೆ |