ದೆಹಲಿಯ ೪೦ ಹಳ್ಳಿಗಳ ಇಸ್ಲಾಮಿ ಹೆಸರುಗಳನ್ನು ಬದಲಾಯಿಸುವ ಶಿಫಾರಸ್ಸು ಆಮ್ ಆದ್ಮಿ ಸರಕಾರಕ್ಕೆ ನೀಡುವೆವು – ಭಾಜಪ

ನವದೆಹಲಿ – ದೆಹಲಿಯ ೪೦ ಹಳ್ಳಿಗಳ ಹೆಸರು ಇಸ್ಲಾಮಿ ಆಗಿದೆ. ಅವನ್ನು ಬದಲಾಯಿಸಲು ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂಬ ಮಾಹಿತಿ ದೆಹಲಿಯ ಭಾಜಪದ ಪ್ರದೇಶಾಧ್ಯಕ್ಷ ಆದೇಶ ಗುಪ್ತಾ ಅವರು ನೀಡಿದರು. ಅವರು ಅಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ದೆಹಲಿಯ ಈ ೪೦ ಹಳ್ಳಿಗಳ ಹೆಸರುಗಳಲ್ಲಿ ಹುಮಾಯೂಪುರ, ಯುಸಫ್ ಸರಾಯ್, ಮಸುದಪುರ, ಜಮರುದಾಪುರ, ಬೇಗುಂಪುರ ಸೈದುಲ ಅಜಾಬ, ಫತೆಹಪುರ ಬೇರಿ, ಹೌಜ ಖಾಸ, ಶೇಖ ಶರಾಯ ಮುಂತಾದ ಹೆಸರು ಒಳಗೊಂಡಿವೆ.

೧. ಗುಪ್ತಾ ಮಾತು ಮುಂದುವರೆಸುತ್ತಾ, ಯಾರೂ ಗುಲಾಮಗಿರಿಯ ಮಾನಸಿಕತೆಯಲ್ಲಿ ಇರಲು ಇಚ್ಛಿಸುವುದಿಲ್ಲ. ಈ ಹೆಸರುಗಳು ಅದನ್ನೇ ನೆನಪಿಸುತ್ತದೆ. ನನಗೆ ಅನೇಕ ಗ್ರಾಮಸ್ಥರು ಹೆಸರನ್ನು ಬದಲಾಯಿಸುವ ಮನವಿಯನ್ನು ನೀಡಿದ್ದಾರೆ. ಭಾಜಪ ಅಧಿಕಾರವಿರುವ ದಕ್ಷಿಣ ದೆಹಲಿ ಮಹಾನಗರಪಾಲಿಕೆಯಲ್ಲಿ ಮಹಮ್ಮದಪುರ ಹಳ್ಳಿಯ ಹೆಸರನ್ನು ಬದಲಾಯಿಸಿ ಮಾಧವಪುರ ಇಡುವ ಪ್ರಸ್ತಾಪ ಸಮ್ಮತಿಸಿ ಸರಕಾರಕ್ಕೆ ಕಳುಹಿಸಲಾಗಿದೆ.

೨. ಈ ವಿಷಯವಾಗಿ ಆಮ್ ಆದ್ಮಿ ಪಕ್ಷ ಹೇಳಿದೇನೆಂದರೆ, ದೆಹಲಿಯ ಪ್ರಕರಣದ ಸಂಬಂಧಿತ ರಾಜ್ಯ ನಾಮಕರಣ ಪ್ರಾಧಿಕರಣ ಇದೆ. ಏನಾದರೂ ಹೆಸರು ಬದಲಾಯಿಸುವ ಪ್ರಸ್ತಾವನೆ ಸಿಕ್ಕಿದ್ದರೆ ಆಗ ಈ ಪ್ರಾಧಿಕಾರ ಕಾನೂನಿನ ಪ್ರಕಾರ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳುವುದು.

ಸಂಪಾದಕರ ನಿಲುವು

ಕೇವಲ ದೆಹಲಿಯಲ್ಲಿ ಅಷ್ಟೇ ಅಲ್ಲದೆ, ಸಂಪೂರ್ಣ ದೇಶಾದ್ಯಂತ ಗುಲಾಮಗಿರಿಯ ಕುರುಹು ಇರುವ ಇಸ್ಲಾಮಿ ಹೆಸರುಗಳನ್ನು ಬದಲಾಯಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಯತ್ನಿಸಬೇಕು.