ಗಲ್ವಾನ್ ಕಣಿವೆಯಲ್ಲಿನ ಸಂಘರ್ಷದ ನಂತರ ಚೀನಾದ ಸೈನ್ಯಕ್ಕೆ ಇನ್ನೂ ಉತ್ತಮವಾದ ತರಬೇತಿಯ ಅವಶ್ಯಕತೆ ಇದೆ ! – ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್

ಪ್ರತ್ಯಕ್ಷ ಗಡಿರೇಖೆಯಲ್ಲಿರುವ ಗಲ್ವಾನ್ ಕಣಿವೆಯಲ್ಲಿ ಹಾಗೂ ಇತರ ಸ್ಥಳಗಳಲ್ಲಾದ ಚಕಮಕಿಯ ನಂತರ ಚೀನಾದ ಸೈನ್ಯಕ್ಕೆ ಇನ್ನೂ ಸಿದ್ಧತೆಯ ಹಾಗೂ ಒಳ್ಳೆಯ ತರಬೇತಿಯ ಅವಶ್ಯಕತೆ ಇದೆ, ಎಂಬುದು ಅರಿವಾಯಿತು, ಎಂದು ಭಾರತದ ಚೀಫ್ ಆಫ್ ಡಿಫೆನ್ಸ್ ಜನರಲ ಬಿಪಿನ ರಾವತ್ ಹೇಳಿದರು.

ಲಡಾಖ್ ಗಡಿಯಲ್ಲಿ ಬೀಡುಬಿಟ್ಟಿದ್ದ ಶೇಕಡಾ ೯೦ ರಷ್ಟು ಸೈನಿಕರು ಹೆಪ್ಪುಗಟ್ಟುವಂತಹ ಚಳಿಯಿಂದ ಅನಾರೋಗ್ಯಪೀಡಿತರಾದ ಕಾರಣ ಅವರನ್ನು ವಾಪಾಸು ಕರೆಸಿಕೊಂಡ ಚೀನಾ

ಹೆಪ್ಪುಗಟ್ಟುವಂತಹ ಚಳಿಯಿಂದ ಲಡಾಖ್ ಗಡಿಯಲ್ಲಿ ಬೀಡುಬಿಟ್ಟಿರುವ ಚೀನಾದ ಶೇ. ೯೦ ರಷ್ಟು ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷದ ನಂತರ ಚೀನಾ ೫೦೦೦೦ ಕ್ಕೂ ಹೆಚ್ಚು ಸೈನಿಕರನ್ನು ಅಲ್ಲಿ ನಿಯೋಜಿಸಿತ್ತು. ವಾಪಸ ಕರೆಸಲಾದ ಸೈನಿಕರ ಜಾಗದಲ್ಲಿ ಇತರ ಸ್ಥಳಗಳಲ್ಲಿ ಬೀಡುಬಿಟ್ಟಿರುವ ಸೈನಿಕರನ್ನು ಲಡಾಖ್ ಗಡಿಗೆ ಕರೆತರಲಾಗಿದೆ.