ಐಎಸ್‌ಐಗೆ ಗೌಪ್ಯ ದಾಖಲೆಗಳನ್ನು ಒದಗಿಸಿದ್ದಕ್ಕಾಗಿ ಭಾರತೀಯ ಸೇನೆಯ ಇಬ್ಬರು ಸೈನಿಕರ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಭಾರತೀಯ ಸೇನೆಯ ಬಗ್ಗೆ ಸೂಕ್ಷ್ಮ ಮಾಹಿತಿ ನೀಡಿದ್ದ ಆರೋಪದ ಮೇಲೆ ಪಂಜಾಬ್ ಪೊಲೀಸರು ಸೇನೆಯ ಹರಪ್ರೀತ್ ಸಿಂಗ್ (೨೩) ಮತ್ತು ಗುರ್ಭೇಜ್ ಸಿಂಗ್ (೨೩) ಇವರಿಬ್ಬರನ್ನು ಬಂಧಿಸಿದ್ದಾರೆ.

‘ಮೆರಿಟಾಯಿಮ್ ಕಮಾಂಡ್’ ಮತ್ತು ‘ಏಯರ್ ಡಿಫೆನ್ಸ್ ಕಮಾಂಡ್’ ಸ್ಥಾಪಿಸಲಾಗುವುದು!

ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಅಪಾಯವನ್ನು ಗಮನಿಸಿ, ಮೆರಿಟಾಯಿಮ್ ಕಮಾಂಡ್ ಸ್ಥಾಪಿಸಲಾಗುತ್ತಿದೆ. ಈ ಕಮಾಂಡ ಭಾರತೀಯ ಮಹಾಸಾಗರ ಕ್ಷೇತ್ರದ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿದೆ. ಸಧ್ಯಕ್ಕೆ ಸೈನ್ಯ ನೆಲೆ, ನೌಕಾ ನೆಲೆ ಮತ್ತು ಇನ್ನಿತರೆ ಯಂತ್ರಗಳ ರಕ್ಷಣೆಯನ್ನು ಮಾಡಲಿದೆ.

ಜಮ್ಮುವಿನಲ್ಲಿ ಮೂರನೇಯ ಬಾರಿ ಕಂಡುಬಂದ ಡ್ರೋನ್ !

ಈ ಹಿಂದೆ ಭಾರತೀಯ ವಾಯುದಳದ ನೆಲೆಯ ಮೇಲೆ ಜಿಹಾದಿ ಭಯೋತ್ಪಾದಕರು ಡ್ರೋನ್ ಮೂಲಕ ಬಾಂಬ್ ಸ್ಪೋಟ ಮಾಡಿದ್ದರು ಮತ್ತು ಮಾರನೇಯ ದಿನ ಅಲ್ಲಿಯ ಸೈನ್ಯ ದಳದ ನೆಲೆಯ ಮೇಲೆ ಕಂಡು ಬಂದಿದ್ದ ಡ್ರೋನ್ ಮೇಲೆ ಸೈನಿಕರು ಗುಂಡು ಹಾರಾಟ ಮಾಡಿ ಓಡಿಸಿದ್ದರು.

ಗಲ್ವಾನ್ ಕಣಿವೆಯಲ್ಲಿನ ಸಂಘರ್ಷದ ನಂತರ ಚೀನಾದ ಸೈನ್ಯಕ್ಕೆ ಇನ್ನೂ ಉತ್ತಮವಾದ ತರಬೇತಿಯ ಅವಶ್ಯಕತೆ ಇದೆ ! – ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್

ಪ್ರತ್ಯಕ್ಷ ಗಡಿರೇಖೆಯಲ್ಲಿರುವ ಗಲ್ವಾನ್ ಕಣಿವೆಯಲ್ಲಿ ಹಾಗೂ ಇತರ ಸ್ಥಳಗಳಲ್ಲಾದ ಚಕಮಕಿಯ ನಂತರ ಚೀನಾದ ಸೈನ್ಯಕ್ಕೆ ಇನ್ನೂ ಸಿದ್ಧತೆಯ ಹಾಗೂ ಒಳ್ಳೆಯ ತರಬೇತಿಯ ಅವಶ್ಯಕತೆ ಇದೆ, ಎಂಬುದು ಅರಿವಾಯಿತು, ಎಂದು ಭಾರತದ ಚೀಫ್ ಆಫ್ ಡಿಫೆನ್ಸ್ ಜನರಲ ಬಿಪಿನ ರಾವತ್ ಹೇಳಿದರು.

ಲಡಾಖ್ ಗಡಿಯಲ್ಲಿ ಬೀಡುಬಿಟ್ಟಿದ್ದ ಶೇಕಡಾ ೯೦ ರಷ್ಟು ಸೈನಿಕರು ಹೆಪ್ಪುಗಟ್ಟುವಂತಹ ಚಳಿಯಿಂದ ಅನಾರೋಗ್ಯಪೀಡಿತರಾದ ಕಾರಣ ಅವರನ್ನು ವಾಪಾಸು ಕರೆಸಿಕೊಂಡ ಚೀನಾ

ಹೆಪ್ಪುಗಟ್ಟುವಂತಹ ಚಳಿಯಿಂದ ಲಡಾಖ್ ಗಡಿಯಲ್ಲಿ ಬೀಡುಬಿಟ್ಟಿರುವ ಚೀನಾದ ಶೇ. ೯೦ ರಷ್ಟು ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷದ ನಂತರ ಚೀನಾ ೫೦೦೦೦ ಕ್ಕೂ ಹೆಚ್ಚು ಸೈನಿಕರನ್ನು ಅಲ್ಲಿ ನಿಯೋಜಿಸಿತ್ತು. ವಾಪಸ ಕರೆಸಲಾದ ಸೈನಿಕರ ಜಾಗದಲ್ಲಿ ಇತರ ಸ್ಥಳಗಳಲ್ಲಿ ಬೀಡುಬಿಟ್ಟಿರುವ ಸೈನಿಕರನ್ನು ಲಡಾಖ್ ಗಡಿಗೆ ಕರೆತರಲಾಗಿದೆ.