ನಗರ ನಕ್ಸಲರ ಬಗ್ಗೆ ಪ್ರೇಮವೋ ಅಥವಾ ಅದರ ಮರೆಯಲ್ಲಿ ಭಾರತದ್ವೇಷವೋ ?

೧. ಪ್ರಗತಿಪರರು, ವಿಚಾರವಂತರು ಮತ್ತು ಜನಪ್ರತಿನಿಧಿಗಳು ನಗರ ನಕ್ಸಲರೆಂದು ಬಂಧನದಲ್ಲಿರುವ ಆರೋಪಿಗಳನ್ನು ಮುಕ್ತಗೊಳಿಸಲು ಪ್ರಧಾನಮಂತ್ರಿಗಳು, ಮುಖ್ಯ ನ್ಯಾಯಾಧೀಶರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದು

‘ಇತ್ತೀಚೆಗಷ್ಟೆ ಪ್ರಧಾನಮಂತ್ರಿಗಳು, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಪ್ರಾಪ್ತವಾಗಿದೆ. ಈ ಪತ್ರವನ್ನು ಪ್ರಗತಿಪರರು, ವಿಚಾರವಂತರು, ‘ನೋಬೆಲ್ ಲೋರೇಟ್ಸ್ ಪುರಸ್ಕಾರಪ್ರಾಪ್ತ ವ್ಯಕ್ತಿಗಳುಮತ್ತು ಕೆಲವು ಸಂಸದರು ಕಳುಹಿಸಿದ್ದಾರೆ. ಅವರು ಈ ಪತ್ರದಲ್ಲಿ ಯಾವ ನಗರ ನಕ್ಸಲವಾದಿಗಳ ವಿರುದ್ಧ ಅಪರಾಧಗಳನ್ನು ದಾಖಲಿಸಿ ಅವರನ್ನು ಸೆರೆಮನೆಯಲ್ಲಿಡಲಾಗಿದೆಯೋ, ಅದು ಅಯೋಗ್ಯವಾಗಿದೆ ಎಂದು ಬರೆದಿದ್ದಾರೆ. ಅವರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಖ್ಯಾತನಾಮರು, ಗಣ್ಯ ವ್ಯಕ್ತಿಗಳು ಮತ್ತು ಸಮಾಜ ಸೇವಕರಾಗಿದ್ದಾರೆ. ಅವರಲ್ಲಿನ ಕೆಲವರ ವಯಸ್ಸು ೬೦ ರಿಂದ ೮೦ ಕ್ಕಿಂತಲೂ ಹೆಚ್ಚಿರುವುದರಿಂದ ಅವರನ್ನು ಸೆರೆಮನೆಯಲ್ಲಿಡುವುದು ಯೋಗ್ಯವಲ್ಲ ಎಂದೂ ಬರೆದಿದ್ದಾರೆ.

ಪತ್ರ ಬರೆದಿರುವವರ ಮುಂದಿನ ಹೇಳಿಕೆಯೆಂದರೆ, ಇಡೀ ಜಗತ್ತಿನಲ್ಲಿ ಕೊರೋನಾ ಮಹಾಮಾರಿಯ ಆಪತ್ತು ಎದುರಾಗಿದ್ದು, ಕೋಟಿಗಟ್ಟಲೆ ಜನರಿಗೆ ಈ ಸೋಂಕು ತಗುಲಿದೆ. ಇದಕ್ಕೆ ಸೆರೆಮನೆಗಳೇನು ಹೊರತಾಗಿಲ್ಲ. ಅವರ ದೃಷ್ಟಿಯಿಂದ ಭಾರತದಲ್ಲಿನ ಸೆರೆಮನೆಗಳ ವ್ಯವಸ್ಥೆ ಅಷ್ಟೇನು ಉತ್ತಮವಿಲ್ಲ ಇಂತಹ ಪರಿಸ್ಥಿತಿಯಲ್ಲಿ ಮತ್ತು ಈ ವಯಸ್ಸಿನಲ್ಲಿ ಅವರನ್ನು ಸೆರೆಮನೆಯಲ್ಲಿಡುವುದು ಅಯೋಗ್ಯವಾಗಿದೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೨. ಸುರಕ್ಷಾದಳದ ಸಾವಿರಾರು ಸೈನಿಕರನ್ನು ಮತ್ತು ನಾಗರಿಕರನ್ನು ಕ್ರೂರವಾಗಿ ಹತ್ಯೆಗೈಯ್ಯುವುದು ನಕ್ಸಲರ ಕಾರ್ಯವಾಗಿದೆ !

ಹಿಂಸಾತ್ಮಕ ಮಾರ್ಗದಿಂದ ತಮ್ಮ ಹಿತವನ್ನು ಕಾಪಾಡುವುದು, ಪ್ರಜಾಪ್ರಭುತ್ವವನ್ನು ಸ್ವೀಕರಿಸದಿರುವುದು, ಆದಿವಾಸಿ ಜನರನ್ನು ಮುಖ್ಯ ಪ್ರವಾಹದಲ್ಲಿ ಬರಲು ಬಿಡದಿರುವುದು ಇವೆಂದರೆ ನಕ್ಸಲವಾದಿ ಚಳುವಳಿಯಾಗಿದೆ. ನಕ್ಸಲವಾದಿಗಳು ೧೯೯೪ ರಿಂದ ೨೦೦೫ ರ ವರೆಗೆ ಸಾವಿರಾರು ನಾಗರಿಕರನ್ನು, ಪೊಲೀಸರನ್ನು, ಆಡಳಿತದಲ್ಲಿನ ಅಧಿಕಾರಿಗಳನ್ನು ಮತ್ತು ರಾಜಕೀಯ ವ್ಯಕ್ತಿಗಳನ್ನು ನಿರ್ದಯವಾಗಿ ಸಾಯಿಸಿದ್ದಾರೆ, ಚುನಾವಣೆಗಳು ನಡೆಯ ಬಾರದೆಂದು ಅನೇಕ ವರ್ಷಗಳವರೆಗೆ ಅಡಚಣೆಯನ್ನುಂಟು ಮಾಡಿದ್ದಾರೆ. ಸರಕಾರ ನಿರ್ಮಿಸಿದ ಮೂಲಭೂತ ಸೌಕರ್ಯಗಳನ್ನು ಬಾಂಬ್‌ಸ್ಫೋಟ ಮಾಡಿ ನಾಶ ಮಾಡುವುದು, ಅಮಾಯಕರನ್ನು ಪೊಲೀಸರ ಸಹಾಯಕರೆಂದು ಹತ್ಯೆಗೈದು ತಮ್ಮ ಭಯವನ್ನು ಸೃಷ್ಟಿಸುವುದು ಅವರ ಕಾರ್ಯವಾಗಿದೆ.

೩. ಪ್ರಧಾನಮಂತ್ರಿಗಳ ಹತ್ಯೆ ಮಾಡಲು ಒಳಸಂಚು ರೂಪಿಸುವ ಈ ಆರೋಪಿಗಳನ್ನು ಅಮಾಯಕನೆಂದು ಹೇಳುವ ತಥಾಕಥಿತ ಬುದ್ಧಿವಂತರು !

‘ನಗರ ನಕ್ಸಲರನ್ನು ಸುಳ್ಳು ಖಟ್ಲೆಗಳಲ್ಲಿ ಸಿಲುಕಿಸಲಾಗಿದೆ, ಆದ್ದರಿಂದ ಅವರ ವಿರುದ್ಧ ಅಪರಾಧಗಳು ಸಿದ್ಧವಾಗಲು ಸಾಧ್ಯವೇ ಇಲ್ಲ, ಎಂಬುದು ಬುದ್ಧಿವಂತರ ಹೇಳಿಕೆಯಾಗಿದೆ. ನಿಜ ನೋಡಿದರೆ ಅವರ ಮೇಲೆ ಒಂದು ಖಂಡಪ್ರಾಯ ದೇಶದ ಪ್ರಧಾನಮಂತ್ರಿಗಳನ್ನು ಕೊಲೆ ಮಾಡುವ ಒಳಸಂಚು ರೂಪಿಸಿದ ಆರೋಪವಿರುವಾಗ ಈ ಹೆಸರಾಂತ, ಪ್ರತಿಷ್ಠಿತ ಮತ್ತು ಈ ಸಮಾಜಸೇವಕರಿಗೆ ಇಂತಹ ಪತ್ರವನ್ನು ಬರೆಯುವ ಧೈರ್ಯ ಹೇಗೆ ಬರುತ್ತದೆ ? ಇದರ ಬಗ್ಗೆ ಆಶ್ಚರ್ಯವೆನಿಸುತ್ತದೆ. ಈ ಪತ್ರವನ್ನು ನೋಮಚೋಮಸ್ಕಿ, ಕುಕರ್ ಝುಕ್, ವೋಲೆ ಶೊಯಿಂಕಾ, ಪಾರ್ಥ ಚಟರ್ಜಿ, ಆಶುತೋಷ ವರ್ಷಣೇಯ, ಶಾಹಿದುಲ ಆಲಮ್, ರಸಬ್ರಿಜರ್ ಇವರು ಬರೆದಿದ್ದಾರೆ. ಅವರು ಮಾನವ ಅಧಿಕಾರದ ಜೋಪಾಸನೆ ಹಾಗೂ ವಿದ್ಯಾದಾನದ ಕಾರ್ಯವನ್ನು ಮಾಡುತ್ತಾರೆ ಎಂದು ಹೇಳಿಕೊಳ್ಳುತ್ತಾರೆ, ಹಾಗೆಯೇ ಅವರು ಸ್ವತಃ ಪತ್ರಕರ್ತರೆಂದು ತಿಳಿಯುತ್ತಾರೆ. ಅವರ ಹೇಳಿಕೆಗನುಸಾರ ಬಂಧನಕ್ಕೊಳಗಾದವರಲ್ಲಿ ೪ ಜನರು ಮಾನವಾಧಿಕಾರವನ್ನು ಕಾಪಾಡುವ ಹಾಗೂ ಇತರರ ಬಗ್ಗೆ ದಯೆ ತೋರಿಸುವವರಾಗಿದ್ದಾರೆ. ಮೂವರು ವಕೀಲರು ಮತ್ತು ಇಬ್ಬರು ಪತ್ರಿಕಾ ರಂಗದಲ್ಲಿ ಪ್ರಸಿದ್ಧರಾಗಿದ್ದಾರೆ. ಒಬ್ಬರು ಸಾಮಾಜಿಕ ಕಾರ್ಯಕರ್ತರು ಮತ್ತು ಒಬ್ಬರು ಸುಪ್ರಸಿದ್ಧ ಕವಿ ಯಾಗಿದ್ದಾರೆ. ಮೂವರು ರಂಗ ಮಂಟಪದ ಕಲಾವಿದರಾಗಿದ್ದಾರೆ ಅವರಲ್ಲಿನ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದಾರೆ. ಆದ್ದರಿಂದ ಅವರನ್ನು ಸೆರೆಮನೆಯಲ್ಲಿಡುವುದು ಸರಿಯಲ್ಲ. ಸೆರೆಮನೆಯಲ್ಲಿರುವ ಈ ಜನರು ‘ಆದಿವಾಸಿಗಳು, ದಲಿತರು, ನಕ್ಸಲರು ಮತ್ತು ಅಲ್ಪಸಂಖ್ಯಾತರ ಇವರೆಲ್ಲರ ಕಲ್ಯಾಣಕ್ಕಾಗಿ ಸಂವಿಧಾನದ ನಿಯಮಗಳಿಗನುಸಾರ ಕಾರ್ಯವನ್ನು ಮಾಡುತ್ತಾರೆ. ಆದ್ದರಿಂದ ಅವರ ವಿರುದ್ಧ ಅಪರಾಧವನ್ನು ದಾಖಲಿಸುವುದೇ ಮೂಲದಲ್ಲಿ ತಪ್ಪಾಗಿದೆ. ಅವರನ್ನು ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಅವರಿಗೆ ಆವಶ್ಯಕವಿರುವ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ. ಈ ಬುದ್ಧಿವಂತರು ಮುಂದುವರಿದು ಏನು ಹೇಳುತ್ತಾರೆಂದರೆ, ಸೆರೆಮನೆಯಲ್ಲಿರುವ ಈ ವ್ಯಕ್ತಿಗಳು ವೃದ್ಧರಾಗಿರುವುದರಿಂದ ಅವರ ಕುಟುಂಬದವರು ಅವರ ಆರೈಕೆಯನ್ನು ಮಾಡಲು ಅವರನ್ನು ಮುಕ್ತಗೊಳಿಸುವುದು ಆವಶ್ಯಕವಾಗಿದೆ. ಅವರಿಗೆ ಸಂವಿಧಾನ ನೀಡಿರುವ ಅಧಿಕಾರ ಮತ್ತು ಪ್ರತಿಷ್ಠೆಯನ್ನು ಹಿಂತಿರುಗಿಸಬೇಕು ಇಲ್ಲದಿದ್ದರೆ ಅವರಿಗೆ ಮಾನಸಿಕ ತೊಂದರೆಯುಂಟಾಗಿ ಅವರ ಮೇಲೆ ದುಷ್ಪರಿಣಾಮವಾಗಬಹುದು. ಆದ್ದರಿಂದ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಜನರು ಯಾವಾಗಲೂ ಮತಾಂಧರು, ದೇಶದ್ರೋಹಿಗಳು, ಉಗ್ರವಾದಿಗಳು, ಭಾರತದ ವಿರುದ್ಧ ಕಾರ್ಯನಿರತವಾಗಿರುವ ವ್ಯಕ್ತಿಗಳ ಪಕ್ಷವನ್ನು ವಹಿಸುತ್ತಾರೆ. ಅವರು ಕೆಲವೊಮ್ಮೆ ತನಿಖಾ ದಳದ ಪಾತ್ರದಲ್ಲಿ ಮತ್ತು ಕೆಲವೊಮ್ಮೆ ನ್ಯಾಯಾಲಯದ ಪಾತ್ರದಲ್ಲಿರುತ್ತಾರೆ. ಈ ಎಲ್ಲ ಆರೋಪಿಗಳು ಪ್ರತಿಭಾಸಂಪನ್ನರಾಗಿದ್ದಾರೆ. ಅವರು ಈ ಖಟ್ಲೆಯಲ್ಲಿ ಯಾವುದೇ ಹುರುಳಿಲ್ಲದ ಕಾರಣ ಈ ಖಟ್ಲೆಯು ನಿಷ್ಫಲವಾಗುವುದು ಎಂದು ಹೇಳುತ್ತಿದ್ದಾರೆ.

೪. ಭಾರತದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರವಾಗುತ್ತಿರುವಾಗ ಈ ತಥಾಕಥಿತ ಮಾನವಾಧಿಕಾರದವರು ಎಲ್ಲಿದ್ದರು ?

‘ಹಿಂದೂ ಉಗ್ರವಾದವನ್ನು ಸಿದ್ಧ ಮಾಡಲು ಅಂದಿನ ಕಾಂಗ್ರೆಸ್ ಸರಕಾರ ಸಾಧ್ವಿ ಪ್ರಜ್ಞಾಸಿಂಹ ಮತ್ತು ಭಾರತೀಯ ಸೈನ್ಯದಲ್ಲಿನ ಅನೇಕ ಅಧಿಕಾರಿಗಳನ್ನು ಮಾಲೆಗಾವ್-೨ ಸ್ಫೋಟ ಪ್ರಕರಣದಲ್ಲಿ ಬಂಧಿಸಿ ಅವರಿಗೆ ಅತಿ ಹಿಂಸೆಯನ್ನು ನೀಡಲಾಯಿತು. ಸಾಧ್ವಿ ಪ್ರಜ್ಞಾಸಿಂಹ ಇವರು ಜೀವಮಾನವಿಡೀ ಧರ್ಮಕ್ಕಾಗಿ ಸನ್ಯಾಸ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಅವರು ಎಂದಿಗೂ ಕಾನೂನು ಉಲ್ಲಂಘಿಸಿ ದೇಶವಿರೋಧಿ ಅಥವಾ ಯಾವುದೇ ಸಮಾಜದ ವಿರುದ್ಧ ದುಷ್ಕೃತ್ಯವನ್ನು ಮಾಡಲು ಸಾಧ್ಯವಿಲ್ಲ, ಇದು ತಿಳಿದಿದ್ದರೂ ಕೇವಲ ‘ಹಿಂದೂ ಉಗ್ರವಾದವನ್ನು ಸಿದ್ಧಪಡಿಸಲು ಪೊಲೀಸರು ಅವರಿಗೆ ಅಪಾರ ಹಿಂಸೆಯನ್ನು ನೀಡಿದರು. ಅವರಿಗೆ ಸರಿಯಾಗಿ ಆಹಾರ ಅಥವಾ ಆಯುರ್ವೇದೀಯ ಚಿಕಿತ್ಸೆಗಳಂತಹ ಮೂಲಭೂತ ಸೌಲಭ್ಯಗಳನ್ನೂ ಪೂರೈಸದೆ ತಪ್ಪೊಪ್ಪಿಕೊಳ್ಳಬೇಕೆಂದು ಪೊಲೀಸರು ಅವರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿದರು, ತೀವ್ರವಾಗಿ ಹೊಡೆದರು. ಇದರಿಂದ ಅವರ ಬೆನ್ನು ಮೂಳೆಯ ಎಲುಬುಗಳು ಮುರಿದವು. ಆಗ ಯಾವ ಪತ್ರಕರ್ತರೂ, ವಿಚಾರವಂತರೂ, ಪ್ರಗತಿಪರರೂ, ಮಾನವ ಹಕ್ಕನ್ನು ಕಾಪಾಡುವವರು ಹಾಗೂ ಮಹಿಳೆಯರ ಹಕ್ಕಿಗಾಗಿ ಹೋರಾಡುವ ಕಾರ್ಯಕರ್ತರು ಮುಂದೆ ಬರಲಿಲ್ಲ ಅಥವಾ ಅವರ ಪರವಾಗಿ ಮಾತನಾಡಲಿಲ್ಲ. ಕಾಶ್ಮೀರದಲ್ಲಿ ೧೯೯೦ ರಲ್ಲಿ ಮತಾಂಧರು ನಾಲ್ಕುವರೆ ಲಕ್ಷ ಹಿಂದೂಗಳನ್ನು ಅವರ ಮಾತೃಭೂಮಿಯಿಂದ ಹೊರದಬ್ಬಿದರು, ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಮಾಡಿದರು, ಹಿಂದೂ ಮಹಿಳೆಯರ ಮೇಲೆ ಅಪಾರ ದೌರ್ಜನ್ಯ ಮಾಡಿದರು ಮತ್ತು ಬಾಲಕರನ್ನು ನಿರ್ದಯವಾಗಿ ಸಾಯಿಸಿದರು. ಕಳೆದ ೩೧ ವರ್ಷಗಳಿಂದ ಈ ಕಾಶ್ಮೀರಿ ಹಿಂದೂಗಳು ಅವರ ದೇಶದಲ್ಲಿಯೇ ನಿರಾಶ್ರಿತರಾಗಿ ಬಾಳುತ್ತಿದ್ದಾರೆ. ಸಹಿಷ್ಣುತೆಯನ್ನು ಕಾಪಾಡುವವರು, ಸಂವಿಧಾನವನ್ನು ಸನ್ಮಾನಿಸುವವರು ಹಾಗೂ ಮಾನವಾಧಿಕಾರವನ್ನು ರಕ್ಷಣೆ ಮಾಡುವವರು ಅವರಿಗಾಗಿ ಯಾವತ್ತೂ ಮುಂದೆ ಬರಲಿಲ್ಲ. ಕಾಶ್ಮೀರದಿಂದ ಕಲಮ್ ೩೭೦ ನ್ನು ರದ್ದುಪಡಿಸಿದರೂ ಇದುವರೆಗೆ ಕಾಶ್ಮೀರಿ ಹಿಂದೂಗಳ ಪುನರ್ವಸತಿಯಾಗಿಲ್ಲ. ಅದರ ವಿಷಯದಲ್ಲಿ ಯಾರಿಗೂ ದುಃಖವಾಗುವುದಿಲ್ಲ.

೫. ಮತಾಂಧರಿಂದ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿರುವಾಗ ಏನೂ ಮಾಡದಿರುವವರು ಮಹಿಳಾ ನಕ್ಸಲರನ್ನು ಹೇಗೆ ಬೆಂಬಲಿಸುತ್ತಾರೆ ?

. ನಗರ ನಕ್ಸಲರಲ್ಲಿ ಕೆಲವು ಆರೋಪಿಗಳು ಮಹಿಳೆಯರಾಗಿದ್ದಾರೆ; ಆದ್ದರಿಂದ ಬುದ್ಧಿವಂತರಿಗೆ ಅವರ ಬಗ್ಗೆ ಕನಿಕರ ಮೂಡುತ್ತದೆ; ಆದರೆ ಇತ್ತೀಚೆಗೆ ಕೇರಳದಲ್ಲಿ ಒಬ್ಬ ಮತಾಂಧನು ಅವನೊಂದಿಗೆ ‘ಲಿವ್ ಇನ್ ರಿಲೇಶನ್‌ಶಿಪ್ನಲ್ಲಿದ್ದ ಹಿಂದೂ ಮಹಿಳೆಯು ಇನ್‌ಸ್ಟಾಗ್ರಾಂನಲ್ಲಿ ಛಾಯಾಚಿತ್ರ ಹಂಚಿಕೊಂಡಳೆಂದು ಅವಳನ್ನು ಬೆಂಕಿ ಹಚ್ಚಿ ಸುಟ್ಟನು. ಆಗಲೂ ಮಹಿಳೆಯ ಪರವಾಗಿ ಈ ಮೇಲಿನ ಜನರು ತುಟಿಬಿಚ್ಚಲಿಲ್ಲ. ಅವರು ನರಾಧಮನನ್ನು ಖಂಡಿಸಲಿಲ್ಲ ಅಥವಾ ಅವನಿಗೆ ಶಿಕ್ಷೆಯಾಗಬೇಕೆಂದು ವಿನಂತಿಯನ್ನೂ ಮಾಡಲಿಲ್ಲ.

ಆ. ಈ ಹಿಂದೆ ಹರಿಯಾಣಾದಲ್ಲಿ ಹಿಂದೂ ಹುಡುಗಿಯು ಒಮ್ಮುಖ ಪ್ರೇಮಕ್ಕೆ ಸ್ಪಂದಿಸಲಿಲ್ಲವೆಂದು ಮತಾಂಧನು ಅವಳನ್ನು ಹಾಡುಹಗಲೇ ಬೆಂಕಿ ಹಚ್ಚಿ ಸುಟ್ಟನು. ಆ ಸಂದರ್ಭದಲ್ಲಿಯೂ ಮೇಲಿನವರು ಯಾರೂ ಅವಳ ಹಕ್ಕನ್ನು ಕಾಪಾಡಲು ಮುಂದೆ ಬರಲಿಲ್ಲ. ಭಾರತದಲ್ಲಿ ‘ಲವ್ ಜಿಹಾದ್ಗೆ ಅನೇಕ ಹಿಂದೂ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಅದರ ಬಗ್ಗೆಯೂ ಅವರಿಗೆ ಏನೂ ಅನಿಸುವುದಿಲ್ಲ.

. ಇವರಿಗೆ ದೆಹಲಿ, ಬೆಂಗಳೂರು ಅಥವಾ ಇತರ ನಗರಗಳಲ್ಲಿ ಮತಾಂಧರು ನಡೆಸಿದ ದಂಗೆಗಳು ನಡೆಯುತ್ತವೆ; ಆದರೆ ಯಾವಾಗ ಮತಾಂಧರು, ಉಗ್ರರು, ಜಿಹಾದಿಗಳು, ನಕ್ಸಲರು, ದೇಶದ್ರೋಹಿ ಹಾಗೂ ಹಿಂದೂದ್ರೋಹಿಗಳ ವಿರುದ್ಧ ಖಟ್ಲೆಗಳು ದಾಖಲಾಗು ತ್ತವೆಯೋ, ಆಗ ಇವರಿಗೆ ಮಹಿಳೆಯರ ರಕ್ಷಣೆ, ಮಾನವ ಹಕ್ಕಿನ ಹತ್ಯೆ ಮತ್ತು ಸರ್ವಧರ್ಮಸಮಭಾವದ ನೆನಪಾಗುತ್ತದೆ. ಇದಕ್ಕೆ ಒಂದೇ ಕಾರಣವೆಂದರೆ, ಇವರೆಲ್ಲರಿಗೂ ಭಾರತ ದೇಶ ಇಷ್ಟವಾಗು ವುದಿಲ್ಲ. ೨೦೧೪ ರಿಂದ ಅಸ್ತಿತ್ವದಲ್ಲಿರುವ ಸರಕಾರ ಹೀಗೆಯೇ ಮುಂದುವರಿದರೆ, ಭಾರತ ಹೆಚ್ಚು ಬಲಿಷ್ಠವಾಗುವುದು ಹಾಗೂ ಪುನಃ ಅದು ವಿಶ್ವಗುರು ಆಗುವುದು, ಇದು ಈ ಜನರಿಗೆ ಬೇಡವಾಗಿದೆ.

೬. ಹಿಂದುತ್ವನಿಷ್ಠ ಸಂಘಟನೆಗಳಿಗೆ ಅಡ್ಡಗಾಲಿಡುವ ಹಿಂದೂದ್ವೇಷಿ ಸಮಾಜಮಾಧ್ಯಮಗಳು !

‘ಫೇಸ್‌ಬುಕ್ ವು ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಮತ್ತು ‘ಸನಾತನ ಪ್ರಭಾತ ದ ಪುಟಗಳಿಗೆ ನಿರ್ಬಂಧ ಹೇರಿದೆ. ಇದರಿಂದ ಧಾರ್ಮಿಕ ಲೇಖನಗಳು, ಧಾರ್ಮಿಕ ವಿಚಾರಗಳು, ಅಧ್ಯಾತ್ಮ ವಿಷಯದಲ್ಲಿನ ಜ್ಞಾನವನ್ನು ಹಿಂದೂಗಳಿಗೆ ತಲಪಿಸುವುದರಲ್ಲಿ ಅಡಚಣೆಯುಂಟಾಗಿದೆ. ಘಟನೆ ಮತ್ತು ವಿಚಾರ ಸ್ವಾತಂತ್ರ್ಯದ ಡಂಗುರ ಸಾರುವ ಈ ಜನರು ಇಂತಹ ಪ್ರಸಂಗಗಳಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಇದು ಹಿಂದೂ ಮತ್ತು ಭಾರತ ದೇಶದ ವಿರುದ್ಧದ ದೊಡ್ಡ ಅಂತರರಾಷ್ಟ್ರೀಯ ಷಡ್ಯಂತ್ರವಾಗಿದೆ.

೭. ನ್ಯಾಯವ್ಯವಸ್ಥೆಗೆ ಸವಾಲೊಡ್ಡುವ ಈ ದೇಶವಿರೋಧಿ ಶಕ್ತಿಗಳಿಗೆ ಸೊಪ್ಪು ಹಾಕಬಾರದು !

ನಗರ ನಕ್ಸಲವಾದದ ಆರೋಪವಿರುವ ಈ ೧೬ ವ್ಯಕ್ತಿಗಳು ತಮ್ಮ ಮೇಲಿನ ಆರೋಪಗಳ ಬಗ್ಗೆ ವಿವಿಧ ಉಚ್ಚನ್ಯಾಯಾಲಯಗಳೊಂದಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿಯೂ ದಾವೆ ಹೂಡಿದ್ದಾರೆ. ಆದರೆ ಅದಕ್ಕೆ ನ್ಯಾಯಾಲಗಳು ಸೊಪ್ಪು ಹಾಕಿಲ್ಲ, ಈ ಜನರಿಗಾಗಿ ಇತಿಹಾಸತಜ್ಞರು, ವಿಚಾರವಂತರು, ಪ್ರಖ್ಯಾತ ವಕೀಲರು ಮತ್ತು ಸಮಾಜಸೇವಕರು ಕೂಡ ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿ ಆಯಿತು. ಅನಂತರ ‘ಈ ಆರೋಪಿಗಳನ್ನು ಪೊಲೀಸ್ ಕಸ್ಟಡಿಯಿಂದ ಮುಕ್ತಗೊಳಿಸಿ ಅವರನ್ನು ಮನೆಯಲ್ಲಿಡಿ, ಎನ್ನುವ ಆದೇಶ ಸಿಕ್ಕಿತ್ತು; ಆದರೆ ಅದು ಕೂಡ ನಂತರ ರದ್ದಾಯಿತು. ಆದ್ದರಿಂದ ಒಮ್ಮೆ ಭಾರತೀಯ ನ್ಯಾಯವ್ಯವಸ್ಥೆಯು ಒಂದು ಆದೇಶವನ್ನು ಹೊರಡಿಸಿದರೆ ಈ ಜನರಿಗೆ ಅದರಲ್ಲಿ ಮೂಗು ತೂರಿಸುವ ಅವಶ್ಯಕತೆಯೇನಿದೆ ? ಇದು ಜಗತ್ತಿನಾದ್ಯಂತ ಕೀರ್ತಿ ಹೊಂದಿದ ಭಾರತೀಯ ನ್ಯಾಯವ್ಯವಸ್ಥೆಗೆ ಸವಾಲೊಡ್ಡಿದಂತಾಗಿದೆ. ಈ ಜನರು ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು ಹಾಗೆಯೇ ಭಾರತದ ಮುಖ್ಯ ನ್ಯಾಯಾಧೀಶರಿಗೂ ಪತ್ರವನ್ನು ಬರೆದು ಆರೋಪಿಗಳನ್ನು ಮುಕ್ತಗೊಳಿಸಲು ವಿನಂತಿಸಿದ್ದಾರೆ. ಅವರು ಈ ಹಿಂದೆ ಹಲವಾರು ಬಾರಿ ಜಾಮೀನಿಗಾಗಿ ಅರ್ಜಿಗಳನ್ನು ಮಾಡಿದ್ದರು, ಆದರೆ ಅವೆಲ್ಲವುಗಳನ್ನೂ ತಿರಸ್ಕರಿಸಲಾಗಿದೆ, ಆದುದರಿಂದ ಅವರು ಇದರ ಅರ್ಥವನ್ನು ತಿಳಿದುಕೊಳ್ಳಬೇಕು. ಯಾವಾಗ ನ್ಯಾಯವ್ಯವಸ್ಥೆಯು ಯಾವುದಾದರೂ ನ್ಯಾಯದ ನಿರ್ಣಯವನ್ನು ಕೊಡುತ್ತದೆಯೋ, ಆಗ ಅದು ಎಲ್ಲ ನಾಗರಿಕರಿಗೆ ಮತ್ತು ಆ ಸಮಯದಲ್ಲಿ ದಾಖಲಿಸಿದ ಅರ್ಜಿದಾರನಿಗೆ ಬಂಧನಕಾರಿಯಾಗಿರುತ್ತದೆ. ಇಲ್ಲಿ ಈ ಜನರು ನ್ಯಾಯವ್ಯವಸ್ಥೆಗೂ ಸವಾಲೊಡ್ಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಇವರ ಪತ್ರಕ್ಕೆ ಸನ್ಮಾನ್ಯ ನ್ಯಾಯವ್ಯವಸ್ಥೆ, ಮುಖ್ಯಮಂತ್ರಿಗಳು ಮತ್ತು ಪ್ರಧಾನಮಂತ್ರಿಗಳು ಸೊಪ್ಪು ಹಾಕಬಾರದು ಹಾಗೆಯೇ ತನಿಖಾ ದಳದವರು ಈ ಜನರ ವಿರುದ್ಧದ ಖಟ್ಲೆಗಳನ್ನು ಪೂರ್ಣತ್ವಕ್ಕೆ ಒಯ್ಯಬೇಕು.

೮. ಎಲ್ಲ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿಗಳು ಮೂಕದರ್ಶಕರಾಗದೇ ಇದನ್ನು ಕಾನೂನುಮಾರ್ಗದಿಂದ ವಿರೋಧಿಸುವುದು ಆವಶ್ಯಕವಾಗಿದೆ !

ಇಂತಹ ಸಮಯದಲ್ಲಿ ಎಲ್ಲ ಹಿಂದುತ್ವನಿಷ್ಠರು, ನ್ಯಾಯಪ್ರಿಯ ವ್ಯಕ್ತಿಗಳು ಮತ್ತು ಭಾರತದ ಪ್ರಜ್ಞಾವಂತ ನಾಗರಿಕರು ಪ್ರಧಾನಮಂತ್ರಿಗಳು, ಮುಖ್ಯ ನ್ಯಾಯಾಧೀಶರು, ಮುಖ್ಯಮಂತ್ರಿಗಳು ಮತ್ತು ತನಿಖಾ ದಳದವರ ಬೆಂಬಲಕ್ಕಿರಬೇಕು. ಮೇಲೆ ಉಲ್ಲೇಖಿಸಿದ ಜನರ ಢೋಂಗಿತನದ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿದ್ದು ವಿರೋಧಿಸಬೇಕು. ಯಾವಾಗ ಅಂತರರಾಷ್ಟ್ರೀಯ ಷಡ್ಯಂತ್ರದ ಭಾಗವೆಂದು ಇಂತಹ ಷಡ್ಯಂತ್ರಗಳನ್ನು ರೂಪಿಸಲಾಗುತ್ತದೆಯೋ, ಆಗ ಜಾಗರೂಕರಾಗಿದ್ದು ಅವುಗಳನ್ನು ವಿರೋಧಿಸಬೇಕು. ‘ಅದರಿಂದ ನನಗೇನಾಗಬೇಕು, ‘ನಾನು ಒಬ್ಬನೇ ಏನು ಮಾಡಲಿ, ಎನ್ನುವ ವೃತ್ತಿಯನ್ನು ಬಿಡಬೇಕು, ಇಲ್ಲದಿದ್ದರೆ ಈ ಜನರ ಅಹಂಕಾರ ಮತ್ತು ವರ್ಚಸ್ಸು ಹೆಚ್ಚಾಗಿ ಭಾರತದ ಐಕ್ಯತೆ ಮತ್ತು ಸಾರ್ವಭೌಮತೆಗೆ ಅಪಾಯ ನಿರ್ಮಾಣವಾಗಬಹುದು. ಆದ್ದರಿಂದ ಈ ಪ್ರವೃತ್ತಿಯನ್ನು ಪ್ರಖರವಾಗಿ ಕಾನೂನುಮಾರ್ಗದಿಂದ ವಿರೋಧಿಸುವುದು ಆವಶ್ಯಕವಾಗಿದೆ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳು. (೧೭.೬.೨೦೨೧)