ಕಾಶ್ಮೀರದಲ್ಲಾದ ಚಕಮಕಿಯಲ್ಲಿ ಸೈನ್ಯದ ೧ ಅಧಿಕಾರಿ ಹುತಾತ್ಮ ಹಾಗೂ ೧ ಉಗ್ರಗಾಮಿ ಹತ !

೧-೨ ಉಗ್ರಗಾಮಿಗಳನ್ನು ಕೊಂದರೆ ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆ ನಾಶವಾಗುವುದಿಲ್ಲ. ಅದಕ್ಕಾಗಿ ಪಾಕ್‌ಅನ್ನು ಸಂಪೂರ್ಣವಾಗಿ ನಾಶ ಮಾಡಬೇಕು !

ಶ್ರೀನಗರ (ಜಮ್ಮು-ಕಾಶ್ಮೀರ) – ರಾಜೌರಿಯ ಥಾನಾಮಂಡೀ ಭಾಗದಲ್ಲಿನ ಉಗ್ರಗಾಮಿಗಳೊಂದಿಗೆ ನಡೆದ ಚಕಮಕಿಯಲ್ಲಿ ಸೈನ್ಯದ ಅಧಿಕಾರಿಗಳೊಬ್ಬರು ಹುತಾತ್ಮರಾಗಿದ್ದು ಒಬ್ಬ ಉಗ್ರಗಾಮಿಯು ಹತನಾಗಿದ್ದಾನೆ. ಸುರಕ್ಷಾದಳದವರಿಗೆ ಅಲ್ಲಿ ಉಗ್ರಗಾಮಿಗಳಿರುವುದರ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯ ಬಳಿಕ ಸುರಕ್ಷಾದಳದ ಸೈನಿಕರಿಂದ ಶೋಧ ಅಭಿಯಾನ ನಡೆಸಲಾಯಿತು. ಆ ಸಮಯದಲ್ಲಿ ಈ ಚಕಮಕಿ ನಡೆಯಿತು.

‘ಜಮ್ಮು-ಕಾಶ್ಮೀರದಲ್ಲಿ ಅಪ್ನಿ ಪಾರ್ಟಿಯ ಮುಖಂಡರನ್ನು ಹತ್ಯೆಗೈದ ಭಯೋತ್ಪಾದಕರು

ಜಮ್ಮು-ಕಾಶ್ಮೀರದಲ್ಲಿನ ದೆವರಸ್‌ನಲ್ಲಿ ‘ಜಮ್ಮು-ಕಾಶ್ಮೀರ ಅಪನೀ ಪಾರ್ಟಿಯ ಮುಖಂಡ ಗುಲಾಮ್ ಹಸನ್ ಲೋನ್‌ರವರನ್ನು ಉಗ್ರಗಾಮಿಗಳು ಆಗಸ್ಟ್ ೧೯ರಂದು ರಾತ್ರಿ ಗುಂಡಿಕ್ಕಿ ಕೊಂದಿದ್ದಾರೆ. ರಾಜಕೀಯ ಪಕ್ಷದ ಮುಖಂಡರ ಹತ್ಯಾ ಸರಣಿಯಲ್ಲಿ ೧೦ ದಿನಗಳೊಳಗೆ ಇದು ನಾಲ್ಕನೇಯ ಘಟನೆಯಾಗಿದೆ. ಜಮ್ಮು-ಕಾಶ್ಮೀರ ಅಪನೀ ಪಾರ್ಟಿಯ ಪ್ರಮುಖ ಮುಖಂಡ ಅಲತಾಫ ಬುಖಾರೀಯವರು ಈ ಘಟನೆಯನ್ನು ನಿಷೇಧಿಸಿದ್ದಾರೆ.