ಅಮೇರಿಕಾವು ಅಫ್ಘಾನಿಸ್ತಾನದ ದೂತವಾಸದಲ್ಲಿರುವ ಸಿಬ್ಬಂದಿಗಳನ್ನು ವಾಪಸ್ಸು ಕರೆದುಕೊಂಡು ಬರಲು 3 ಸಾವಿರ ಸೈನಿಕರನ್ನು ಕಳುಹಿಸಲಿದೆ !

ವಾಶಿಂಗ್‍ಟನ್ (ಅಮೇರಿಕಾ) – ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಅತ್ಯಧಿಕ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಿರುವ ಭಯದಿಂದ ಅಮೇರಿಕಾವು ಅಫ್ಘಾನಿಸ್ತಾನದಲ್ಲಿರುವ ತನ್ನ ನಾಗರಿಕರನ್ನು ಕರೆತರುವ ತಯಾರಿ ಮಾಡಿದೆ. ಅದಕ್ಕಾಗಿ ಅಮೇರಿಕಾವು ತನ್ನ 3 ಸಾವಿರ ಸೈನಿಕರನ್ನು ಅಫ್ಘಾನಿಸ್ತಾನಕ್ಕೆ ಮರಳಿ ಕಳುಹಿಸುತ್ತಿದೆ. ಅಮೇರಿಕಾವು ಸೈನಿಕರನ್ನು ದೀರ್ಘ ಕಾಲಕ್ಕಾಗಿ ಅಲ್ಲ; ಕೇವಲ ತಾತ್ಕಾಲಿಕ ಕಾರ್ಯಾಚರಣೆಗಾಗಿ ಕಳುಹಿಸುತ್ತಿದ್ದೇವೆ ಎಂದು ಸಹ ಸ್ಪಷ್ಟ ಪಡಿಸಿದೆ.

ಅಮೇರಿಕಾದ ವಕ್ತಾರರಾದ ನೆಡ ಪ್ರಾಯಿಸ್‍ರವರು ಇದರ ಬಗ್ಗೆ ಹೇಳುವಾಗ, ನಾವು ಆಫಘಾನಿಸ್ತಾನದ ದೂತಾವಾಸದಲ್ಲಿ ಕೆಲಸ ಮಾಡುವ 5 ಸಾವಿರದ 400 ಜನರನ್ನು ಹೊರಗೆ ತರುವ ಕೆಲಸವನ್ನು ಮಾಡುತ್ತಿದ್ದೇವೆ. ಅವರ ಪೈಕಿ 1 ಸಾವಿರ 400 ಜನರು ಅಮೇರಿಕಾದ ನಾಗರಿಕರಾಗಿದ್ದಾರೆ. ದೂತಾವಾಸದಲ್ಲಿ ಕೆಲಸ ಮಾಡುವ ನಮ್ಮ ಜನರ ಸುರಕ್ಷೆಯನ್ನು ಖಚಿತ ಪಡಿಸಿಕೊಳ್ಳಲು ನಾವು ಸತತವಾಗಿ ಪರಿಸ್ಥಿತಿಯ ವರದಿಯನ್ನು ಪಡೆದುಕೊಳ್ಳುತ್ತಿದ್ದೇವೆ ಎಂದು ನುಡಿದರು.