ಕಾಶ್ಮೀರದಲ್ಲಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಉಗ್ರಗಾಮಿಗಳು ಕಾರ್ಯಾಚರಣೆ ಮಾಡುವರು ಎಂದು ಚಿಂತಿಸುವ ಅಗತ್ಯವಿಲ್ಲ ! – ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆ

ಸೈನ್ಯದ ಪ್ರಮುಖ ಕಮಾಂಡರ ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆ

ನವ ದೆಹಲಿ – ಕಾಶ್ಮೀರದಲ್ಲಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಉಗ್ರಗಾಮಿಗಳು ಕಾರ್ಯಾಚರಣೆ ನಡೆಸುವರು ಎಂದು ಚಿಂತಿಸುವ ಅಗತ್ಯವಿಲ್ಲ, ಎಂದು ಕಾಶ್ಮೀರದಲ್ಲಿ ಸೈನ್ಯದ ಪ್ರಮುಖ ಕಮಾಂಡರ ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆಯವರು ಹೇಳಿದ್ದಾರೆ.

ಲೆಫ್ಟ. ಜನರಲ್ ಡಿ.ಪಿ. ಪಾಂಡೆಯವರು ಮುಂದಿನಂತೆ ಹೇಳಿದರು, ಫೆಬ್ರುವರಿಯಿಂದ ಕಾಶ್ಮೀರ ಕಣಿವೆಯಲ್ಲಿ ಗಡಿಯ ಆಚೆಯಿಂದ ಶಸ್ತ್ರಸಂಧಾನದ ಉಲ್ಲಂಘನೆಯಾಗಿಲ್ಲ. ಇಡೀ ವರ್ಷ ಭಯೋತ್ಪಾದಕರಿಂದ ನುಸುಳಲು ಮಾಡಿದ ಪ್ರಯತ್ನಗಳಲ್ಲಿ ಕೇವಲ ಎರಡು ಬಾರಿ ಅವರಿಗೆ ಯಶಸ್ಸು ಸಿಕ್ಕಿದೆ. ಆಗ ಒಬ್ಬ ಸೈನಿಕನು ಗಾಯಗೊಂಡಿದ್ದನು. ಗಡಿಯಾಚೆ ಯಾವುದೇ ರೀತಿಯ ಚಲನವಲನಗಳಾದರೆ ನಾವು ಅದಕ್ಕೆ ಯೋಗ್ಯ ಪ್ರತ್ಯುತ್ತರ ನೀಡಲು ತಯಾರಾಗಿದ್ದೇವೆ.

ಕುಟಿಲ ತಂತ್ರ ಹೂಡುವುದರಲ್ಲಿ ನಿಪುಣರಾಗಿರುವ ಪಾಕಿಸ್ತಾನಿ ಭಯೋತ್ಪಾದಕರು !

ಕಾಶ್ಮೀರ ಕಣಿವೆಯಲ್ಲಿ ಈಗ 60 ರಿಂದ 70 ಪಾಕಿಸ್ತಾನಿ ಭಯೋತ್ಪಾದಕರಿದ್ದಾರೆ. ಸ್ಥಳೀಯ ಯುವಕರ ಕೈಗೆ ಶಸ್ತ್ರ ನೀಡಿ ಆಕ್ರಮಣ ನಡೆಸಲು ಅವರಿಗೆ ಪ್ರೇರಣೆ ನೀಡುವುದು ಅವರ ಉದ್ದೇಶವಾಗಿದೆ, ಅದರಿಂದ ಚಕಮಕಿಯಲ್ಲಿ ಅವರು ಸಾಯುತ್ತಾರೆ ಹಾಗೂ ಸ್ವತಃ ಸುರಕ್ಷಿತರಾಗಿರುತ್ತಾರೆ. ಕಾಶ್ಮೀರದಲ್ಲಿ ಒಬ್ಬ ಯುವಕನು ಸತ್ತರೆ, ಅದರಿಂದ ಭಯೋತ್ಪಾದಕರಿಗೆ ಒಂದು ರೀತಿಯಲ್ಲಿ ಲಾಭವೇ ಆಗುತ್ತದೆ. ಏಕೆಂದರೆ ‘ಭಾರತೀಯ ಸೈನ್ಯವು ಅವನನ್ನು ಕೊಲ್ಲುತ್ತದೆ; ಆದ್ದರಿಂದ ಯುವಕನ ಕುಟುಂಬದವರಿಗೆ ನಮ್ಮ ಬಗ್ಗೆ ಸಿಟ್ಟಿರುತ್ತದೆ’, ಎಂದು ಪಾಂಡೆಯವರು ನುಡಿದರು.