ಸೈನಿಕರಿಗೋಸ್ಕರ ಕೇಂದ್ರ ಸರಕಾರ ಪ್ರಮಾಣಿತ ಮಾಂಸ ಮಾರಾಟ ಕೇಂದ್ರದಿಂದ ನಿಯಮಬಾಹಿರವಾಗಿ ಹಲಾಲ ಮಾಂಸದ ಪೂರೈಕೆ !

ಸೈನಿಕರಿಂದ ಅಪ್ರಸನ್ನತೆ ವ್ಯಕ್ತ !

ಸರಕಾರವು ಈ ಬಗ್ಗೆ ವಿಚಾರಣೆ ಮಾಡಿ ಆರೋಪಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು, ಎಂಬ ಅಪೇಕ್ಷೆ ! – ಸಂಪಾದಕರು

‘ಹಲಾಲ’ ಮಾಂಸ ಅಂದರೆ ಏನು?

ಹಲಾಲ ಪದ್ಧತಿಯಂತೆ ಮಾಂಸ ಪಡೆಯಲು ಪ್ರಾಣಿಗಳ ಕುತ್ತಿಗೆಯ ರಕ್ತನಾಳ ಕಡಿದು ಅದನ್ನು ಹಾಗೆಯೇ ಬಿಟ್ಟು ಬಿಡುತ್ತಾರೆ. ಅದರಿಂದ ದೊಡ್ಡ ಪ್ರಮಾಣದಲ್ಲಿ ರಕ್ತಸ್ರಾವವಾಗಿ ಅದು ಯಾತನೆ ಅನುಭವಿಸಿ ಪ್ರಾಣ ಬಿಡುತ್ತದೆ. ಆ ಪ್ರಾಣಿಗಳ ಬಲಿ ನೀಡುವಾಗ ಅದರ ಮುಖವನ್ನು ಮಕ್ಕಾದ ದಿಕ್ಕಿಗೆ ಮಾಡಿಡಲಾಗುತ್ತದೆ.

ನವದೆಹಲಿ – ಕೇಂದ್ರ ಸರಕಾರದ ‘ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ’ವು (‘ಎಫ್.ಎಸ್.ಎಸ್.ಎ.ಐ.)ಯು ಪ್ರಮಾಣ ನೀಡಿರುವ ಕೇಂದ್ರವು ಸೈನಿಕರಿಗೆ ಹಲಾಲ ಮಾಂಸವನ್ನು ಪೂರೈಸುತ್ತಿದೆ ಎಂಬ ಆಘಾತಕರ ಮಾಹಿತಿಯು ಬೆಳಕಿಗೆ ಬಂದಿದೆ. ಹಲಾಲ ಮಾಂಸ ಹಿಂದೂ, ಸಿಖ್ ಮೊದಲಾದವರಿಗೆ ವಜ್ರ್ಯವಾಗಿದ್ದು. ಆ ಮಾಂಸವು ಕೇವಲ ಇಸ್ಲಾಮ ಮತದವರಿಗಷ್ಟೇ ನಡೆಯುತ್ತದೆ.

ಸೈನ್ಯವು ಪ್ರತೀವರ್ಷ ಸಾವಿರಾರು ಟನ ಮಾಂಸವನ್ನು ಆ ಕೇಂದ್ರದಿಂದ ಖರೀದಿಸುತ್ತದೆ. ಆ ಕೇಂದ್ರವು ಸೈನಿಕರಿಗೆ ಹಲಾಲ ಮಾಂಸವನ್ನು ಪೂರೈಸುತ್ತಿರುವುದು ಸೈನ್ಯದ ಕೆಲವು ಅಧಿಕಾರಿಗಳ ಗಮನಕ್ಕೆ ಬಂದಿದೆ. ಹಾಗೂ ಅದು ತಿಳಿದ ಬಳಿಕ ಸೈನಿಕರು ತಮ್ಮ ಅಪ್ರಸನ್ನತೆಯನ್ನು ವ್ಯಕ್ತ ಪಡಿಸಿದ್ದಾರೆ. ಆ ಬಗ್ಗೆ ಸೈನ್ಯಾಧಿಕಾರಿಗಳು ಪಂಜಾಬ, ಹರಿಯಾಣ ಹಾಗೂ ಉತ್ತರಪ್ರದೇಶ ರಾಜ್ಯಗಳ ಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ಸೈನಿಕರಿಗೆ ಪೂರೈಸುವ ಮಾಂಸವು ‘ಹಲಾಲ’ ಆಗಿದೆಯೇ ಅಥವ ‘ಝಟಕಾ’, ಎಂಬುದನ್ನು ಉಲ್ಲೇಖಿಸಬೇಕೆಂಬ ಆದೇಶವನ್ನು ನೀಡುವಂತೆ ಬೇಡಿಕೆ ಮಾಡಿದರು. ‘ಝಟಕಾ’ ಪ್ರಕಾರದಲ್ಲಿ ಪ್ರಾಣಿಗಳನ್ನು ಒಂದೇ ಹೊಡೆತದಿಂದ ಕೊಲ್ಲಲಾಗುತ್ತದೆ. ಇದರಿಂದ ಆ ಪ್ರಾಣಿಗಳಿಗೆ ಕಡಿಮೆ ವೇದನೆಯಾಗುತ್ತದೆ. ಹಿಂದೂಗಳು ಆ ರೀತಿಯ ಪದ್ಧತಿಯ ಮಾಂಸವನ್ನು ಸೇವಿಸುತ್ತಾರೆ. ಸೈನ್ಯಾಧಿಕಾರಿಗಳು ಕಳುಹಿಸಿದ ಪತ್ರಕ್ಕೆ ಇನ್ನೂ ಯಾರಿಂದಲೂ ಉತ್ತರ ದೊರಕಿಲ್ಲ.