ಸೈನ್ಯಾಧಿಕಾರಿಗಳ ತರಬೇತಿಯಲ್ಲಿ ಶ್ರೀಮದ್ಭಗವದ್ಗೀತೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರವನ್ನು ಕಲಿಸಲು ಶಿಫಾರಸು !

ಅಭಿನಂದನೀಯ ಶಿಫಾರಸು ! ಕೇವಲ ಈ ಎರಡು ಗ್ರಂಥಗಳು ಮಾತ್ರವಲ್ಲ, ಇಂತಹ ಅನೇಕ ಧರ್ಮಗ್ರಂಥಗಳನ್ನು ಸೈನ್ಯಾಧಿಕಾರಿಗಳಿಗೆ ಮತ್ತು ಸೈನಿಕರಿಗೆ ಕಲಿಸುವುದು ಅವಶ್ಯಕವಾಗಿದೆ. ಇದರಿಂದ ಅವರ ಮನೋಬಲ ಹೆಚ್ಚಾಗುವುದರೊಂದಿಗೆ ಅವರಲ್ಲಿ ನೇತೃತ್ವ ಗುಣವು ವೃದ್ಧಿಯಾಗಲು ಸಹಾಯವಾಗುತ್ತದೆ.- ಸಂಪಾದಕರು 

ನವದೆಹಲಿ – ‘ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜಮೆಂಟ’ನಿಂದ ಮಾಡಲಾದ ಒಂದು ಅಧ್ಯಯನದಿಂದ ಶ್ರೀಮದ್ಭಗವದ್ಗೀತೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದಂತಹ ಪ್ರಾಚೀನ ಗ್ರಂಥಗಳನ್ನು ಸೈನ್ಯದ ತರಬೇತಿಯಲ್ಲಿ ಸೇರಿಸುವ ಬಗ್ಗೆ ಶಿಫಾರಸು ಮಾಡಲಾಗಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ‘ಭಾರತೀಯ ಸಂಸ್ಕೃತಿ ಅಭ್ಯಾಸ ಮಂಚ’ವನ್ನು ಸ್ಥಾಪಿಸಬಹುದು, ಎಂದು ಅಧ್ಯಯನಕಾರರು ಹೇಳಿದ್ದಾರೆ. ಸಿಕಂದರಾಬಾದ (ತೆಲಂಗಾಣ)ನಲ್ಲಿ ‘ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜಮೆಂಟ್’ ನ ಸೈನ್ಯ ತರಬೇತಿ ಕೇಂದ್ರವಿದೆ. ಇಲ್ಲಿ ಸೈನ್ಯದ ಮೂರೂ ದಳಗಳ ವರಿಷ್ಠ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಈ ಕೇಂದ್ರದಿಂದ ‘ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ಯುದ್ಧತಂತ್ರಗಳ ಗುಣ ಹಾಗೆಯೇ ವರ್ತಮಾನದಲ್ಲಿನ ಸಂರಕ್ಷಣೆ ಮತ್ತು ತರಬೇತಿ’ ಈ ಸಂದರ್ಭದಲ್ಲಿ ಒಂದು ಯೋಜನೆಯನ್ನು ನಡೆಸಲಾಗುತ್ತಿದೆ. ಈ ಮೂಲಕ ಭಾರತೀಯ ಪ್ರಾಚೀನ ಗ್ರಂಥಗಳನ್ನು ಹುಡುಕಿ ಈ ಗ್ರಂಥಗಳ ಮೂಲಕ ಸಂರಕ್ಷಣೆಯ ದೃಷ್ಟಿಯಿಂದ ನೇತೃತ್ವ ಗುಣವನ್ನು ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ.

ಶ್ರೀಮದ್ಭಗವದ್ಗೀತೆ ಇತ್ಯಾದಿಗಳ ಶಿಕ್ಷಣದಿಂದ ಸೈನ್ಯದ ರಾಜಕೀಯಕರಣ ಮಾಡುವ ಪ್ರಯತ್ನ ! (ಅಂತೆ) – ಕಾಂಗ್ರೆಸ್ಸಿನಿಂದ ವಿರೋಧ

ಕಾರ್ಗಿಲ ಯುದ್ಧವನ್ನು ಮುಸಲ್ಮಾನ ಸೈನಿಕರ ಸಹಾಯದಿಂದಲೇ ಗೆಲ್ಲಲಾಗಿದೆ ಎಂಬ ಹೇಳಿಕೆ

* ಕಾಂಗ್ರೆಸ್ ಸೈನ್ಯದ ಸಂದರ್ಭದಲ್ಲಿಯಾದರೂ ರಾಜಕಾರಣ ಮಾಡಬಾರದು ಎಂದು ಅಪೇಕ್ಷೆಯಿದೆ ! ಶ್ರೀಮದ್ಭಗವದ್ಗೀತೆಯನ್ನು ವಿರೋಧಿಸುವ ಕಾಂಗ್ರೆಸ್ಸಿನ ತೀವ್ರ ಹಿಂದೂದ್ವೇಷವೇ ಇಲ್ಲಿ ಗಮನಕ್ಕೆ ಬರುತ್ತದೆ. ಬೈಬಲ ಮತ್ತು ಕುರಾನಿನ ಶಿಕ್ಷಣವನ್ನು ನೀಡಲು ಪ್ರಯತ್ನಿಸಬೇಕು ಎಂದು ಯಾರಾದರೂ ಹೇಳಿದ್ದರೆ ಕಾಂಗ್ರೆಸ್ಸಿನ ಆನಂದಕ್ಕೆ ಪಾರವೇ ಇರುತ್ತಿರಲಿಲ್ಲವೇನೋ ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ !- ಸಂಪಾದಕರು 

* ಕಾಂಗ್ರೆಸ್ ಭಾರತೀಯ ಸಂವಿಧಾನದಲ್ಲಿ ಕಾನೂನುಬಾಹಿರವಾಗಿ ‘ಸೆಕ್ಯುಲರ್’ ಎಂಬ ಶಬ್ದವನ್ನು ಸೇರಿಸಿ ಅಕ್ಷಮ್ಯ ತಪ್ಪು ಮಾಡಿದೆ. ಭಾರತವನ್ನು ಧರ್ಮದಿಂದ ದೂರ ಕೊಂಡೊಯ್ಯುವ ಕಾಂಗ್ರೆಸ್ ಇಂದು ಇತಿಹಾಸವಾಗುವ ಮಾರ್ಗದಲ್ಲಿದೆ ಎಂಬುದನ್ನು ಕಾಂಗ್ರೆಸ್ ಗಮನದಲ್ಲಿಟ್ಟುಕೊಳ್ಳಬೇಕು ! -ಸಂಪಾದಕರು 

* ಕ್ಯಾಪ್ಟನ್ ಸೌರಭ ಕಾಲಿಯಾ, ಕ್ಯಾಪ್ಟನ್ ಬತ್ರಾ ಮೊದಲಾದ ಹಿಂದೂ ಸೈನ್ಯಾಧಿಕಾರಿಗಳು ಮತ್ತು ಸೈನಿಕರು ಹುತಾತ್ಮರಾಗಿದ್ದರಿಂದಲೇ ಭಾರತವು ಕಾರ್ಗಿಲ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಇದರಲ್ಲಿ ಒಬ್ಬನೇ ಒಬ್ಬ ಮುಸಲ್ಮಾನ ಸೈನಿಕನಿದ್ದಾನೆಯೇ ? ಸೈನ್ಯದಲ್ಲಿಯೂ ಹಿಂದೂ ಮತ್ತು ಮುಸಲ್ಮಾನ ಎಂದು ರಾಜಕಾರಣ ಮಾಡುವ ಕಾಂಗ್ರೆಸ್ಸಿಗೆ ಪುರೊ(ಅಧೋ)ಗಾಮಿ ಹಾಗೂ ಜಾತ್ಯಾತೀತವಾದಿಗಳು ಏನಾದರೂ ಹೇಳುವರೇ ?- ಸಂಪಾದಕರು

ಕಾಂಗ್ರೆಸ್ ಈ ಶಿಫಾರಸನ್ನು ವಿರೋಧಿಸಿದೆ. ಕಾಂಗ್ರೆಸ್ಸಿನ ವಕ್ತಾರ ಕೆ.ಕೆ. ಮಿಶ್ರಾ ಇವರು ಶ್ರೀಮದ್ಭಗವದ್ಗೀತೆ ಮತ್ತು ಅರ್ಥಶಾಸ್ತ್ರವನ್ನು ಕಲಿಸುವುದು ಸೈನ್ಯ ದಳಗಳ ರಾಜಕೀಯಕರಣವಾಗಿದೆ. ಸೈನ್ಯದ ಸಂದರ್ಭದಲ್ಲಿಯಾದರೂ ರಾಜಕಾರಣ ಮಾಡಬಾರದು. ನಾವು ಮುಸಲ್ಮಾನ ಸೈನಿಕರ ಸಹಾಯದಿಂದ ಕಾರ್ಗಿಲ ಯುದ್ಧವನ್ನು ಗೆದ್ದಿದ್ದೆವು ‘ ಎಂದು ಹೇಳಿದರು.