ಚಲನಚಿತ್ರಗಳಲ್ಲಿ ಕರ್ನಲ್‌ ಆಗಿರುವ ನಾಯಕಿಯ ತಂದೆಯನ್ನು ಯಾವಾಗಲೂ ಕೆಟ್ಟವರಾಗಿಯೇ ಏಕೆ ತೋರಿಸಲಾಗುತ್ತದೆ? – ಸೈನ್ಯದಳ ಪ್ರಮುಖ ನರವಣೆಯವರ ಪ್ರಶ್ನೆ

  • ಇಂದಿನವರೆಗೂ ಸೈನ್ಯದ ಯಾವುದೇ ಪ್ರಮುಖರು ಕೂಡ ಈ ರೀತಿಯ ಪ್ರಶ್ನೆಯನ್ನು ಕೇಳಿರಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! ಸೈನ್ಯ ಹಾಗೂ ಸೈನ್ಯಾಧಿಕಾರಿಗಳ ಚಾರಿತ್ರ್ಯವನ್ನು ಮಲಿನಗೊಳಿಸುವ ಹಿಂದೆ ಯಾವುದಾದರೂ ಜಿಹಾದ್‌ ಇದೆಯೇ ? ಎಂಬುದನ್ನು ಈಗ ಪತ್ತೆ ಹಚ್ಚಬೇಕು !

  • *ಇಂದಿನವರೆಗೂ ಚಲನಚಿತ್ರಗಳಿಂದ ಸೈನ್ಯಾಧಿಕಾರಿಗಳ ವ್ಯಕ್ತಿತ್ವವನ್ನು ತಪ್ಪಾಗಿ ಚಿತ್ರಿಸುತ್ತಿರುವಾಗ ಯಾರಾದರೂ ಒಬ್ಬ ಭಾರತೀಯನಾಗಲಿ, ಸಂಘಟನೆಯಾಗಲಿ, ರಾಜಕೀಯ ಪಕ್ಷವಾಗಲಿ ಈ ಬಗ್ಗೆ ಏನೂ ಮಾತನಾಡಲಿಲ್ಲ, ಎಂಬುದು ಲಜ್ಜಾಸ್ಪದ !’

ಪುಣೆ – ಚಲನಚಿತ್ರಗಳಲ್ಲಿ ಭಾರತೀಯ ಸೈನ್ಯಾಧಿಕಾರಿಗಳನ್ನು ತಪ್ಪಾದ ರೀತಿಯಲ್ಲಿ ತೋರಿಸಿರುವುದನ್ನು ನಾನು ಯಾವಾಗಲೂ ನೋಡಿದ್ದೇನೆ. ಆ ಚಲನಚಿತ್ರಗಳಲ್ಲಿ ಸುಂದರವಾಗಿರುವ ನಟಿಯ ಕರ್ನಲ್‌ ತಂದೆಯನ್ನು ಯಾವಾಗಲು ಕೆಟ್ಟವರಾಗಿ ತೋರಿಸಲಾಗುತ್ತದೆ. ಅವರ ಒಂದು ಕೈಯಲ್ಲಿ ಬಂದೂಕು ಹಾಗೂ ಮತ್ತೊಂದು ಕೈಯಲ್ಲಿ ವಿಸ್ಕಿಯ ಬಾಟಲಿಯನ್ನು ಹಿಡಿದುಕೊಂಡಿರುವಂತೆ ತೋರಿಸಲಾಗುತ್ತದೆ. ನನಗೆ ಅದನ್ನು ನೋಡಿದಾಗ ತಪ್ಪೆಂದು ಅನಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ; ಆದರೆ ಈ ರೀತಿ ಯಾವುದಾದರೂ ಒಂದು ಸಮಾಜ ಹಾಗೂ ವ್ಯಕ್ತಿತ್ವವನ್ನು ತೋರಿಸುವುದನ್ನು ತಪ್ಪಿಸಬೇಕು, ಎಂದು ಭಾರತೀಯ ಸೈನ್ಯದಳದ ಪ್ರಮುಖರಾದ ಮನೋಜ ಮುಕುಂದ ನರವಣೆಯವರು ಹೇಳಿದರು. ‘ಫಿಲ್ಮ ಆಂಡ್‌ ಟೆಲಿವಿಜನ್‌ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯಾ’ದ ದೂರದರ್ಶನ ಶಾಖೆಯ ಸುವರ್ಣ ಜಯಂತಿಯ ಕಾರ್ಯಕ್ರಮ ನಡೆಯಿತು. ಸೈನ್ಯದಳ ಪ್ರಮುಖರು ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.