ಬ್ರಿಟನ್ ನ ಸಂಸತ್ತಿನಲ್ಲಿ ಕಾಶ್ಮೀರದಲ್ಲಿನ ಮಾನವಾಧಿಕಾರಗಳ ಬಗ್ಗೆ ಚರ್ಚೆ : ಭಾರತದ ಆಕ್ಷೇಪ
* ಬ್ರಿಟನ್ ನ ಸಂಸದರಿಗೆ ತಿಳಿಯುವ ಸಂಗತಿಯು ಭಾರತದಲ್ಲಿನ ಜಾತ್ಯಾತೀತವಾದಿ ಮತ್ತು ಪೂರೋ(ಅಧೋ)ಗಾಮಿ ರಾಜಕಾರಣಿಗಳಿಗೆ ಹಾಗೂ ಅವರ ಪಕ್ಷಗಳಿಗೆ ಏಕೆ ತಿಳಿಯುವುದಿಲ್ಲ ? – ಸಂಪಾದಕರು * ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿರುವಾಗ ಬ್ರಿಟನ್ ನ ಸಂಸತ್ತಿನಲ್ಲಿ ಕಾಶ್ಮೀರದ ಮೇಲೆ ಚರ್ಚಿಸುವ ಅಧಿಕಾರವನ್ನು ಬ್ರಿಟನ್ ಗೆ ನೀಡಿದವರು ಯಾರು ? ನಾಳೆ ಭಾರತದ ಸಂಸತ್ತಿನಲ್ಲಿ ಬ್ರಿಟನ್ ನಲ್ಲಿರುವ ವಿವಾದಾತ್ಮಕ ಅಂಶಗಳ ಮೇಲೆ ಚರ್ಚೆ ಮಾಡಿದರೆ ಅದಕ್ಕೆ ಬ್ರಿಟನ್ ಒಪ್ಪುವುದೇ ? – ಸಂಪಾದಕರು |
ಲಂಡನ (ಇಂಗ್ಲೆಂಡ್) – ಜಮ್ಮು-ಕಾಶ್ಮೀರದಿಂದ ಭಾರತೀಯ ಸೈನ್ಯವನ್ನು ಹಿಂಪಡೆದರೆ ಅಲ್ಲಿ ತಾಲಿಬಾನಿನ ರಾಜ್ಯ ಬರುವುದು ಎಂಬ ಹೇಳಿಕೆಯನ್ನು ಬ್ರಿಟನಿನ ಸಂಸದ ಬಾಬ್ ಬ್ಲಾಕಮನ್ ನೀಡಿದ್ದಾರೆ. ಅವರು ಬ್ರಿಟಿಷ್ ಸಂಸತ್ತಿನ ಕೆಳಮನೆಯಲ್ಲಿ ಅಂದರೆ ‘ಹೌಸ್ ಆಫ್ ಕಾಮನ್ಸ್’ನಲ್ಲಿ ನಡೆದ ಕಾಶ್ಮೀರದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ‘ಸರ್ವಪಕ್ಷೀಯ ಸಂಸದೀಯ ಗುಂಪು’ (‘ಆಲ್ ಪಾರ್ಟಿ ಪಾರ್ಲಿಮೆಂಟರಿ ಗ್ರೂಪ್’) ಕಾಶ್ಮೀರದಲ್ಲಿನ ಮಾನವಾಧಿಕಾರದ ಮೇಲೆ ಚರ್ಚಿಸುವ ಪ್ರಸ್ತಾವನೆಯನ್ನು ಮಂಡಿಸಿತ್ತು. ಈ ಸಮಯದಲ್ಲಿ ಸಂಸದ ಡೇಬ್ಬಿ ಅಬ್ರಾಹಮ್ ಮತ್ತು ಪಾಕಿಸ್ತಾನಿ ವಂಶದ ಸಂಸದ ಯಾಸ್ಮಿನ್ ಕುರೇಶಿಯವರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಈ ಪ್ರಸ್ತಾಪದಲ್ಲಿನ ಚರ್ಚೆಯಲ್ಲಿ 20 ಸಂಸದರು ಸಹಭಾಗಿಯಾಗಿದ್ದರು. ಈ ಪ್ರಸ್ತಾಪದ ಬಗ್ಗೆ ಭಾರತವು ಆಕ್ಷೇಪವೆತ್ತಿದೆ.
Indian Army has stopped Kashmir from becoming Taliban’s Afghanistan: MP Bob Blackman to UK Parliament.https://t.co/h5zn6w3mgo
— TIMES NOW (@TimesNow) September 24, 2021
1. ಬ್ಲಾಕಮನ್ ಇವರು ತಮ್ಮ ಮಾತನ್ನು ಮುಂದುವರೆಸುತ್ತ, ‘ಜಮ್ಮು-ಕಾಶ್ಮೀರದಿಂದ ಭಾರತೀಯ ಸೈನ್ಯವನ್ನು ಹಿಂಪಡೆದರೆ ಇಸ್ಲಾಮಿ ಶಕ್ತಿಯು ಅಫ್ಘಾನಿಸ್ತಾನದಂತೆಯೇ ಕಾಶ್ಮೀರದಲ್ಲಿನ ಪ್ರಜಾಪ್ರಭುತ್ವವನ್ನೂ ನಾಶ ಮಾಡುವುದು. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ’ ಎಂಬುದನ್ನು ಅವರು ಸ್ಪಷ್ಟಪಡಿಸಿದರು.
2. ಲೇಬರ್ ಪಕ್ಷದ ಸಂಸದ ಬ್ಯಾರೀ ಗಾರ್ಡಿನರರು ‘ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತದೆ. ಅಲ್ಲಿ ಅವರ ತರಬೇತಿ ಕೇಂದ್ರಗಳಿವೆ. ಪಾಕಿಸ್ತಾನ ಮತ್ತು ಅದರ ಐಎಸ್ಐ ಎಂಬ ಗುಪ್ತಚರ ಸಂಸ್ಥೆಯು ತಾಲಿಬಾನಿಗಳಿಗೆ ಆಶ್ರಯ ನೀಡಿದೆ’ಎಂದು ಹೇಳಿದರು.