ಅಫಫಾನಿಸ್ತಾನದಲ್ಲಿ ಇಸ್ಲಾಮಿಕ ಸ್ಟೇಟ್ ಖುರಾಸಾನದ ನೆಲೆಯ ಮೇಲೆ ಡ್ರೋನ ಮೂಲಕ ದಾಳಿ : ಮುಖ್ಯ ಸೂತ್ರಧಾರನ ಸಹಿತ ಅನೇಕ ಭಯೋತ್ಪಾದಕರ ಹತ್ಯೆ
ಭಾರತವು ಇಂದಿನ ತನಕ ಇಷ್ಟು ಶೀಘ್ರವಾಗಿ ಇಂತಹ ಕೃತಿ ಮಾಡಿದೆಯೇ ? ಭಾರತವು ಅಮೇರಿಕಾದಿಂದ ಈ ತತ್ಪರತೆಯನ್ನು ಕಲಿಯುವುದೇನು ? – ಸಂಪಾದಕರು
ಕಾಬುಲ್ (ಅಫಫಾನಿಸ್ತಾನ) – ಕಾಬುಲ್ ವಿಮಾನ ನಿಲ್ದಾಣದಲ್ಲಿ ‘ಇಸ್ಲಾಮಿಕ್ ಸ್ಟೇಟ್ ಖುರಾಸಾನ'(`ಖೂರಾಸಾನ’ ಎಂದರೆ ಉತ್ತರ-ಪೂರ್ವ ಇರಾನ, ಅಫ್ಘಾನಿಸ್ತಾನ, ಪಾಕಿಸ್ತಾನ, ತುರ್ಕಮೆನಿಸ್ತಾನ, ಮತ್ತು ಉಜ್ಬೇಕಿಸ್ಥಾನ ಈ ದೇಶದ ಭೂಭಾಗ) ಇಲ್ಲಿಯ ಭಯೋತ್ಪಾದಕರ ಸಂಘಟನೆಯಿಂದ ಮಾಡಲಾದ 2 ಬಾಂಬ ಸ್ಫೋಟದಲ್ಲಿ 170 ಕ್ಕೂ ಹೆಚ್ಚಿನ ಜನರು ಹತರಾಗಿದ್ದರು. ಹತರಾದವರಲ್ಲಿ ಅಮೇರಿಕಾದ 13 ಸೈನಿಕರಿದ್ದರು. ‘ಈ ದಾಳಿಯ ಸೇಡನ್ನು ತೀರಿಸಿಕೊಳ್ಳಲಾಗುವುದು’, ಎಂದು ಅಮೆರಿಕಾದ ಅಧ್ಯಕ್ಷರು ಘೋಷಿಸಿದ ನಂತರ ಕೆಲವೇ ಗಂಟೆಗಳಲ್ಲಿ ಅಮೆರಿಕಾವು ಅಫಫಾನಿಸ್ತಾನದಲ್ಲಿನ ಇಸ್ಲಾಮಿಕ್ ಸ್ಟೇಟ್ ಖೂರಾಸಾನದ ನೆಲೆಯ ಮೇಲೆ ಡ್ರೋನ್‍ನಿಂದ (ಮಾನವರಹಿತ ಚಿಕ್ಕ ವಾಯುಯಂತ್ರ) ದಾಳಿ ಮಾಡಿ ದಾಳಿಯ ಮುಖ್ಯ ಸೂತ್ರಧಾರರಾಗಿದ್ದ ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ. ಈ ದಾಳಿಯಲ್ಲಿ ಯಾವುದೇ ಸಾಮಾನ್ಯ ನಾಗರಿಕರು ಸಾವನ್ನಪ್ಪಿಲ್ಲ ಎಂದು ಅಮೆರಿಕಾ ಸ್ಪಷ್ಟನೆ ನೀಡಿದೆ. 27 ಆಗಸ್ಟ್ ಮಧ್ಯರಾತ್ರಿ ಪೂರ್ವ ನಂಗರಹಾರದಲ್ಲಿನ ಒಂದು ಮನೆಯ ಮೇಲೆ ಈ ದಾಳಿ ನಡೆಸಲಾಯಿತು. ಅದರಲ್ಲಿ ಮನೆಯು ಸಂಪೂರ್ಣವಾಗಿ ಧ್ವಂಸವಾಗಿದೆ. ಅದರಲ್ಲಿ ಮುಖ್ಯ ಸೂತ್ರಧಾರ ಸಹಿತ ಅನೇಕ ಭಯೋತ್ಪಾದಕರು ಹತರಾದರು ಎಂದು ಅಮೇರಿಕಾವು ಹೇಳಿಕೊಂಡಿದೆ.