ಖಡ್ಗ ತೆಗೆದುಕೊಂಡು ಹಿಂದೂಗಳ ದಿಕ್ಕಿನಲ್ಲಿ ಓಡಿದ ಯುವಕನನ್ನು ತಡೆಯಲು ಹೋಗುತ್ತಿರುವಾಗ ಮತ್ತೊಬ್ಬನು ನನ್ನ ಮೇಲೆ ಗುಂಡು ಹಾರಿಸಿದನು ! – ಗಾಯಗೊಂಡ ಪೊಲೀಸ್ ಅಧಿಕ್ಷಕ

ಮತಾಂಧರು ರಾಮನವಮಿಯ ದಿನದಂದು ಹಿಂದೂಗಳು ನಡೆಸಿದ ಶೋಭಾಯಾತ್ರೆಯ ಮೇಲೆ ದಾಳಿ ನಡೆಸಿದ್ದರು. ಹಿಂದೂಗಳು ಕೂಡ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಆಶ್ರುವಾಯುವನ್ನು ಸಿಡಿಸಿದರು.

ಚೆನ್ನೈಯಲ್ಲಿರುವ ‘ಅಯೋಧ್ಯಾ ಮಂಡಪಮ್‌’ ಎಂಬ ಧಾರ್ಮಿಕ ಸ್ಥಳದ ಸರಕಾರೀಕರಣ !

ತಮಿಳುನಾಡು ಸರಕಾರದ ಧಾರ್ಮಿಕ ದತ್ತಿ ವಿಭಾಗವು ಚೆನ್ನೈಯಲ್ಲಿರುವ ಪಶ್ಚಿಮ ಮಾಂಬಲಮ್‌ನಲ್ಲಿರುವ ‘ಅಯೋಧ್ಯಾ ಮಂಡಪಮ್‌’ವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ೬೪ ವರ್ಷ ಹಳೆದಾದ ಈ ಧಾರ್ಮಿಕ ಸ್ಥಳಕ್ಕೆ ‘ಅಯೋಧ್ಯಾ ಅಶ್ವಮೇಧ ಮಹಾ ಮಂಡಪಮ್‌’ ಎಂದು ಕರೆಯಲಾಗುತ್ತದೆ.

ಕಟನಿ (ಮಧ್ಯಪ್ರದೇಶ) ಇಲ್ಲಿ ರೈಲು ನಿಲ್ದಾಣ ಪ್ರದೇಶದಲ್ಲಿನ ಹಳೆಯ ಶ್ರೀರಾಮ ಮಂದಿರದ ಮುಂಭಾಗದ ಗೋಡೆಯನ್ನು ಹಿಂದೂ ಸಂಘಟನೆಗಳು ಕೆಡವಿದವು !

ಕೆಲವು ವರ್ಷಗಳ ಹಿಂದೆ ರೈಲ್ವೇ ಆಡಳಿತವು ಕಟನಿಯ ರೈಲು ನಿಲ್ದಾಣದ ಪ್ರದೇಶದ ಹಳೆಯ ಶ್ರೀ ರಾಮ ಮಂದಿರದ ಮುಂಭಾಗದಲ್ಲಿ ಗೋಡೆಯೊಂದನ್ನು ನಿರ್ಮಿಸಿತ್ತು. ಇದರಿಂದ ದೇವಸ್ಥಾನಕ್ಕೆ ತೆರಳಲು ಭಕ್ತರು ಪರದಾಡುವಂತಾಗಿತ್ತು. ರೈಲ್ವೇ ಆಡಳಿತದ ಈ ಕ್ರಮಕ್ಕೆ ಹಿಂದೂ ಸಂಘಟನೆಗಳು ಆಗಾಗ್ಗೆ ವಿರೋಧ ವ್ಯಕ್ತಪಡಿಸಿದ್ದವು.

ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವೀಟರ ಖಾತೆ ಹ್ಯಾಕ್ !

ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದ ಮುಖ್ಯಮಂತ್ರಿಗಳ ಕಚೇರಿಯ ಟ್ವೀಟರ ಖಾತೆಯನ್ನು ಹ್ಯಾಕ್ ಮಾಡಬಹುದಾದರೆ ಸಾಮಾನ್ಯ ನಾಗರಿಕರ ಸಾಮಾಜಿಕ ಮಾಧ್ಯಮ ಖಾತೆಗಳು ಎಷ್ಟರ ಮಟ್ಟಿಗೆ ಭದ್ರತೆ ಇದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ !

ಇಗ ‘ಕಾರ್ಡ’ ಇಲ್ಲದೆ ಎಟಿಎಂದಿಂದ ಹಣ ತೆಗೆಯಬಹುದು !

‘ಡಿಜಿಟಲ’ ವಂಚನೆಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ ಬ್ಯಾಂಕ ಆಫ್ ಇಂಡಿಯಾ ಕೆಲವು ಮಹತ್ವದ ಘೋಷಣೆಗಳನ್ನು ಮಾಡಿದೆ. ಇದರ ಅಡಿಯಲ್ಲಿ ಬ್ಯಾಂಕ್ ಎ.ಟಿ.ಎಂ. ಗಳಿಂದ ಕಾರ್ಡ ಇಲ್ಲದೆ (ಕಾಡ್ ರಹಿತ) ಹಣ ತೆಗೆಯುವ ಸೌಲಭ್ಯವನ್ನು ಆರಂಭಿಸುವುದರ ಅನುಮತಿ ನೀಡುವ ನಿರ್ಣಯ ತೆಗೆದುಕೊಂಡಿದೆ.

ಕಾಶಿ ವಿಶ್ವನಾಥ ದೇವಸ್ಥಾನದ ಪರಿಸರದಲ್ಲಿ ವರ್ಷಪೂರ್ತಿ ದೇವಿ ಶೃಂಗಾರ ಗೌರಿ ಮಾತೆಯ ದರ್ಶನ ಮತ್ತು ಪೂಜೆಗೆ ಅನುಮತಿ

ಇಸ್ಲಾಮಿ ಆಕ್ರಮಣಕಾರರು ಹಿಂದೂಗಳ ನೂರಾರು ದೇವಸ್ಥಾನಗಳನ್ನು ಕೆಡವಿ ಅಲ್ಲಿ ಮಸೀದಿಗಳನ್ನು ಕಟ್ಟಿದರು. ಅವುಗಳನ್ನು ಹಿಂಪಡೆಯಲು ಹಿಂದೂಗಳು ಕಾನೂನುಬದ್ಧ ಮಾರ್ಗದಿಂದ ಹೋರಾಡುತ್ತಿದ್ದಾರೆ. ಈಗ ಸರಕಾರವೂ ಇದರಲ್ಲಿ ಹಸ್ತಕ್ಷೇಪ ಮಾಡಿ ಹಿಂದೂಗಳಿಗೆ ತಮ್ಮ ಧಾರ್ಮಿಕ ಸ್ಥಳಗಳನ್ನು ಹಿಂದಿರುಗಿಸಿ ಕೊಡಬೇಕು, ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ !

ಮಸೀದಿಗಳ ಮೇಲಿನ ಭೋಂಗಾಗಗಳ ಶಬ್ಧವನ್ನು ಅಳೆಯಲು ಧ್ವನಿಮಾಪನ ಯಂತ್ರವನ್ನು ಅಳವಡಿಸಿ !

ಕರ್ನಾಟಕ ರಾಜ್ಯದಲ್ಲಿನ ಮಸೀದಿಗಳ ಮೇಲಿನ ಭೋಂಗಾಗಳನ್ನು ತೆಗೆಯುವ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳು ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜ್ಯದಲ್ಲಿನ ಮಸೀದಿಗಳಿಗೆ ನೊಟೀಸನ್ನು ಕಳುಹಿಸಿದೆ. ಅವರು ಭೋಂಗಾದ ಶಬ್ದವನ್ನು ನಿಶ್ಚಯಿಸಿದ ಡೆಸಿಬಲ್‌ನಷ್ಟೇ ಇಡಲು ಹೇಳಿದ್ದಾರೆ. ಹಾಗೆಯೇ ಧ್ವನಿಮಾಪಕ ಯಂತ್ರವನ್ನು ಅಳವಡಿಸಲು ಹೇಳಲಾಗಿದೆ.

ಬುಚಾ ನಗರದಲ್ಲಿ ನಾವು ನರಸಂಹಾರ ನಡೆಸಿಲ್ಲ ! – ರಷ್ಯಾದ ಹೇಳಿಕೆ

ಬುಚಾ ನಗರದಲ್ಲಿ ನಾವು ನರಸಂಹಾರ ನಡೆಸಿಲ್ಲ, ಎಂದು ರಷ್ಯಾ ಹೇಳಿಕೆ ನೀಡಿದೆ. ಈ ಸಂಪೂರ್ಣ ಪ್ರಕರಣ ಸುಳ್ಳಾಗಿದೆಯೆಂದು ವಾದಿಸುವ ಒಂದು ವಿಡಿಯೊವನ್ನು ರಷ್ಯಾ ಪ್ರಸಾರ ಮಾಡಿದೆ. ಬುಚಾ ನಗರದಲ್ಲಿ ೪೧೦ ಕ್ಕಿಂತ ಹೆಚ್ಚು ಆವಗಳು ಸಿಕ್ಕಿದೆ. ರಷ್ಯಾದ ಸೈನ್ಯವು ನಾಗರಿಕರನ್ನು ಸಾಮೂಹಿಕ ಹತ್ಯೆ ಮಾಡಿರುವ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವ ಆರೋಪವಿದೆ.

ಹಿಜಾಬ್ ಪ್ರಕರಣದ ವಿದ್ಯಾರ್ಥಿನಿ ಮುಸ್ಕಾನ ಖಾನ ಇವಳನ್ನು ‘ಅಲ್ ಕಾಯದಾ’ ಮುಖಂಡ ಅಲ್ ಜವಾಹಿರಿಯಿಂದ ಪ್ರಶಂಸೆ

ಕರ್ನಾಟಕದ ಹಿಜಾಬ ಪ್ರಕರಣದ ಸಮಯದಲ್ಲಿ ಶಿವಮೊಗ್ಗದಲ್ಲಿ ಒಂದು ಶಾಲೆಯ ಪರಿಸರದಲ್ಲಿ ಮುಸ್ಕಾನ ಖಾನ ಹೆಸರಿನ ವಿದ್ಯಾರ್ಥಿನಿಯು ಹಿಜಾಬನ್ನು ವಿರೋಧಿಸುವ ವಿದ್ಯಾರ್ಥಿಗಳ ಎದುರಿಗೆ ‘ಅಲ್ಲಾಹು ಅಕ್ಬರ್’ನ (‘ಅಲ್ಲಾ ಮಹಾನ್ ಆಗಿದ್ದಾನೆ’) ಘೋಷಿಸಿದ್ದಳು.

ಮ. ಗಾಂಧಿಯವರ ಬಗ್ಗೆ ನೀಡಿದ್ದ ಹೇಳಿಕೆಯ ಬಗ್ಗೆ ಪಶ್ಚಾತ್ತಾಪವಿಲ್ಲ ! – ಕಾಲಿಚರಣ ಮಹಾರಾಜ

ಮೋಹನದಾಸ ಗಾಂಧಿಯವರ ವಿಷಯದಲ್ಲಿ ನಾನು ನೀಡಿರುವ ಹೇಳಿಕೆಯ ವಿಷಯದಲ್ಲಿ ನನಗೆ ಯಾವುದೇ ರೀತಿಯ ಪಶ್ಚಾತ್ತಾಪ ಆಗುತ್ತಿಲ್ಲ. ಕಲಿಯುಗದಲ್ಲಿ ಸತ್ಯ ಮಾತನಾಡಿದ್ದರಿಂದ ನನಗೆ ಶಿಕ್ಷೆಯಾಗಿದೆ, ಎಂದು ಕಾಲಿಚರಣ ಮಹಾರಾಜರು ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಹೇಳಿದರು.