ಇಗ ‘ಕಾರ್ಡ’ ಇಲ್ಲದೆ ಎಟಿಎಂದಿಂದ ಹಣ ತೆಗೆಯಬಹುದು !

ರಿಸರ್ವ ಬ್ಯಾಂಕಿನ ಮಹತ್ವದ ಘೋಷಣೆ !

ನವ ದೆಹಲಿ – ‘ಡಿಜಿಟಲ’ ವಂಚನೆಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ ಬ್ಯಾಂಕ ಆಫ್ ಇಂಡಿಯಾ ಕೆಲವು ಮಹತ್ವದ ಘೋಷಣೆಗಳನ್ನು ಮಾಡಿದೆ. ಇದರ ಅಡಿಯಲ್ಲಿ ಬ್ಯಾಂಕ್ ಎ.ಟಿ.ಎಂ. ಗಳಿಂದ ಕಾರ್ಡ ಇಲ್ಲದೆ (ಕಾಡ್ ರಹಿತ) ಹಣ ತೆಗೆಯುವ ಸೌಲಭ್ಯವನ್ನು ಆರಂಭಿಸುವುದರ ಅನುಮತಿ ನೀಡುವ ನಿರ್ಣಯ ತೆಗೆದುಕೊಂಡಿದೆ. ಇದುವರೆಗೆ ಈ ಸೌಲಭ್ಯವನ್ನು ದೇಶದ ಕೆಲವು ಬ್ಯಾಂಕಗಳು ಮಾತ್ರ ನೀಡುತ್ತಿದ್ದವು. ಈ ಸೌಲಭ್ಯ ಗ್ರಾಹಕರಿಗೆ ಯಾವಾಗ ಸಂಬಂಧಿತ ಬ್ಯಾಂಕಿನ ಎ.ಟಿ.ಎಂ. ಬಳಸಿದಾಗ ಮಾತ್ರ ಸಿಗುತ್ತಿತ್ತು. ಇಗ ಈ ಸೇವೆಯ ವಿಸ್ತಾರ ಮಾಡಲಾಗುತ್ತದೆ.

ರಿಜರ್ವ್ ಬ್ಯಾಂಕಿನ ಗವರ್ನರ ಶಕ್ತಿಕಾಂತ ದಾಸ ಇವರು, “ಇಗ ಎಲ್ಲಾ ಬ್ಯಾಂಕಗಳು ಮತ್ತು ‘ಎ.ಟಿ.ಎಂ.’ಗಳು ಯುಪಿಐ (ತ್ವರಿತ ಹಣವಿನಿಮಯಕ್ಕಾಗಿ ಬಳಸುವ ಆನಲೈನ ವ್ಯವಸ್ಥೆ) ಬಳಸುತ್ತಿವೆ. ಕಾರ್ಡರಹಿತ ನಗದು ಹಿಂಪಡೆಯುವ ಸೌಲಭ್ಯವನ್ನು ನೆಟವರ್ಕನಲ್ಲಿ ಪ್ರಸ್ತಾಪಿಸಲಾಗಿದೆ. ಕಾರ್ಡ ರಹಿತ ಹಣವನ್ನು ತೆಗೆಯುವ ಸೌಲಭ್ಯವು ‘ಕಾರ್ಡ್ ಸ್ಕಿಮ್ಮಿಂಗ’ ಅಂದರೆ ಕಾರ್ಡನ ತಾಂತ್ರಿಕ ಮಾಹಿತಿ ಮತ್ತು ‘ಪಿನ್’ ಕದಿಯುವ ವಿಧಾನದಂತಹ ವಿಷಯಗಳನ್ನು ಸಹ ನಿಗ್ರಹಿಸುತ್ತದೆ. ಕಾರ್ಡ ಇಲ್ಲದೆ ಎ.ಟಿ.ಎಂ.ಗಳಿಂದ ಹಣ ತೆಗೆಯಲು ಮೊಬೈಲ ಆಪ ಬಳಸಲಾಗುವುದು. ಈ ಸಂಪೂರ್ಣ ವ್ಯವಸ್ಥೆಯು ‘ಓಟಿಪಿ’ಯ ಸಹಾಯದಿಂದ ಕಾರ್ಯ ನಿರ್ವಹಿಸುತ್ತದೆ.” ಎಂದು ಹೇಳಿದರು.