ಮಧ್ಯಪ್ರದೇಶದ ಖರಗೋನನಲ್ಲಿ ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ಮತಾಂಧರು ದಾಳಿ ನಡೆಸಿದ ಪ್ರಕರಣ
ಕಳೆದ ೭೪ ವರ್ಷಗಳಲ್ಲಿ ಎಲ್ಲ ಪಕ್ಷದ ಆಢಳಿತಗಾರರು ಮತಾಂಧರನ್ನು ಪೋಷಿಸಿದ್ದರಿಂದ ಇಂದು ಅವರು ತಲೆನೋವಾಗಿ ಪರಿಣಮಿಸಿದೆ. ಅವರು ಪೊಲೀಸ್ ಅಧಿಕಾರಿಗಳಿಗೂ ಹೆದರುವುದಿಲ್ಲ, ಎಂಬುದು ದೇಶಕ್ಕೆ ಲಜ್ಜಾಸ್ಪದ ! ದಾಳಿಕಾರ ಮತಾಂಧರ ಮೇಲೆ ಬುಲಡೋಝರ ಹಾಯಿಸಿದ್ದರಿಂದ ತಾಂಡವವಾಡುವ ಜಾತ್ಯತೀತರು, ಪ್ರಗತಿ(ಅಧೋ)ಪರರಿಂದ ಹಿಡಿದು ಅಂತರರಾಷ್ಟ್ರೀಯ ಪ್ರಚಾರಮಾಧ್ಯಮಗಳು ಉದ್ಧಟತನ ಮತಾಂಧರ ಕೃತ್ಯಗಳ ಬಗ್ಗೆ ಮಾತ್ರ ಮೌನವೇಕೆ ? |
ಖರಗೊನ (ಮಧ್ಯಪ್ರದೇಶ) – ಮತಾಂಧರು ರಾಮನವಮಿಯ ದಿನದಂದು ಹಿಂದೂಗಳು ನಡೆಸಿದ ಶೋಭಾಯಾತ್ರೆಯ ಮೇಲೆ ದಾಳಿ ನಡೆಸಿದ್ದರು. ಹಿಂದೂಗಳು ಕೂಡ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಆಶ್ರುವಾಯುವನ್ನು ಸಿಡಿಸಿದರು. ಈ ಎಲ್ಲಾ ಚಕಮಕಿಯಲ್ಲಿ ಅಲ್ಲಿ ಹಾಜರಿದ್ದ ಪೊಲೀಸ್ ಅಧಿಕ್ಷಕ ಸಿದ್ಧಾರ್ಥ ಚೌಧರಿಯವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಈ ಸಂದರ್ಭವಾಗಿ ಪ್ರಸಾರಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, “ಗಲಭೆಯಲ್ಲಿ ಯುವಕನೊಬ್ಬನು ಕೈಯಲ್ಲಿ ಖಡ್ಗ ಹಿಡಿದುಕೊಂಡು ಹಿಂದೂಗಳ ದಿಕ್ಕಿನಲ್ಲಿ ಓಡುತ್ತಿರುವುದನ್ನು ನಾನು ನೋಡಿದೆ. ಅವನನ್ನು ತಡೆಯಲು ಪ್ರಯತ್ನಿಸಿ ಅವನ ಬಳಿಯಿದ್ದ ಖಡ್ಗವನ್ನು ಕಸಿದುಕೊಳ್ಳುವಾಗ ನನ್ನ ಕೈಗೆ ಗಾಯವಾಯಿತು. ಅದೇ ಸ್ಥಿತಿಯಲ್ಲಿ ಅವನಿಗೆ ಸಹಾಯ ಮಾಡಲು ಬಂದ ಮತ್ತೊಬ್ಬನು ನನ್ನ ಮೇಲೆ ಗುಂಡು ಹಾರಿಸಿದನು. ಆ ಗುಂಡು ನನ್ನ ಕಾಲಿಗೆ ತಗುಲಿತು” ಎಂದರು.
‘A sword-wielding miscreant dashed toward the Hindus’: SP who sustained bullet injury narrates the mayhem unleashed during Khargone violencehttps://t.co/bRvqM8BA6N
— OpIndia.com (@OpIndia_com) April 12, 2022
ರಾಮನವಮಿಯಂದು ನಗರದ ತಾಲಾಬ ಚೌಕ, ಶೀತಲಾಮಾತಾ ಮಂದಿರ ಹಾಗೂ ಸರಾಫ ಬಾಜಾರ ಪರಿಸರಗಳಲ್ಲಿ ಗಲಭೆಯಾಗಿತ್ತು. ಆಗ ಕೆಲವು ಮನೆಗಳಿಗೆ ಬೆಂಕಿಯಿಡಲಾಯಿತು. ದಾಳಿ ನಡೆಸಿದ ಮತಾಂಧರು ಅತಿಕ್ರಮಣ ನಡೆಸಿ ಮನೆ ಕಟ್ಟಿರುವುದರಿಂದ ಅವರ ಮನೆಗಳ ಮೇಲೆ ಬುಲಡೋಝರ ಬಿಟ್ಟು ಅದನ್ನು ಕೆಡವಲಾಯಿತು.