ಚೆನ್ನೈಯಲ್ಲಿರುವ ‘ಅಯೋಧ್ಯಾ ಮಂಡಪಮ್‌’ ಎಂಬ ಧಾರ್ಮಿಕ ಸ್ಥಳದ ಸರಕಾರೀಕರಣ !

ತಮಿಳುನಾಡು ಸರಕಾರದ ಹಿಂದೂದ್ರೋಹಿ ನಿರ್ಣಯ !

ಸ್ಥಳೀಯರ ವಿರೋಧ

ತಮಿಳುನಾಡಿನಲ್ಲಿ ಹಿಂದೂದ್ವೇಷಿ ದ್ರವಿಡ ಮುನ್ನೇತ್ರ ಕಳಘಮ್‌ (ದ್ರವಿಡ ಪ್ರಗತಿ ಸಂಘ) ಪಕ್ಷದ ಸರಕಾರವಿರುವುದರಿಂದ ಇಲ್ಲಿ ಇಂತಹ ಘಟನೆಗಳು ನಡೆದರೆ ಆಶ್ವರ್ಯವೇನು ? ಇಂತಹ ಸರಕಾರವು ಎಂದಿಗೂ ಚರ್ಚ ಮತ್ತು ಮಸೀದಿಗಳ ಸರಕಾರೀಕರಣ ಮಾಡುವ ಧೈರ್ಯ ಮಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ಚೆನ್ನೈ (ತಮಿಳುನಾಡು) – ತಮಿಳುನಾಡು ಸರಕಾರದ ಧಾರ್ಮಿಕ ದತ್ತಿ ವಿಭಾಗವು ಚೆನ್ನೈಯಲ್ಲಿರುವ ಪಶ್ಚಿಮ ಮಾಂಬಲಮ್‌ನಲ್ಲಿರುವ ‘ಅಯೋಧ್ಯಾ ಮಂಡಪಮ್‌’ವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ೬೪ ವರ್ಷ ಹಳೆದಾದ ಈ ಧಾರ್ಮಿಕ ಸ್ಥಳಕ್ಕೆ ‘ಅಯೋಧ್ಯಾ ಅಶ್ವಮೇಧ ಮಹಾ ಮಂಡಪಮ್‌’ ಎಂದು ಕರೆಯಲಾಗುತ್ತದೆ. ಸ್ಥಳೀಯರು ಈ ಧಾರ್ಮಿಕ ಸ್ಥಳದ ಸರಕಾರೀಕರಣವನ್ನು ವಿರೋಧಿಸಿದರು. ಇದಕ್ಕಾಗಿ ಅವರು ಆಂದೋಲನ ಮಾಡಿದರು. ಕೆಲವು ರಾಜಕೀಯ ಪಕ್ಷಗಳೂ ನಾಗರೀಕರ ಆಂದೋಲನವನ್ನು ಸಮರ್ಥಿಸಿದವು. ಈ ಸಮಯದಲ್ಲಿ ಪೊಲೀಸರು ಕೆಲವು ಜನರನ್ನು ವಶಕ್ಕೆ ಪಡೆದರು. ಈ ಆಂದೋಲನದಲ್ಲಿ ಭಾಜಪದ ಸ್ಥಳೀಯ ನಗರಸೇವಕಿಯಾದ ಉಷಾ ಆನಂದನ್‌ರವರು ಸಹಭಾಗಿಯಾಗಿದ್ದರು. ‘ಅಯೋಧ್ಯಾ ಮಂಡಪಮ್‌’ ನ ಜವಾಬ್ದಾರಿಯು ‘ಶ್ರೀರಾಮ ಸಮಾಜ’ದ ಬಳಿ ಇತ್ತು.

೧. ಸ್ಥಳೀಯರು ಹೇಳುವಂತೆ, ಈ ಧಾರ್ಮಿಕ ಸ್ಥಳವನ್ನು ಜನತೆಯ ಅರ್ಪಣೆಯಿಂದ ಕಟ್ಟಲಾಗಿದೆ. ಇಲ್ಲಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಇದು ದೇವಸ್ಥಾನವಲ್ಲ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಭಾವಿಕರಿಂದ ಅರ್ಪಣೆ ನೀಡಲಾಗುತ್ತಿರುವುದರಿಂದ ಸರಕಾರವು ಇದರ ಸರಕಾರೀಕರಣ ಮಾಡಿರುವುದಾಗಿ ಜನರು ಆರೋಪಿಸಿದ್ದಾರೆ.

೨. ತಮಿಳುನಾಡು ಸರಕಾರವು ‘ಇಲ್ಲಿ ಅರ್ಪಣೆ ನೀಡಲಾಗುತ್ತಿರುವುದರಿಂದ ಇದು ದೇವಸ್ಥಾನವಾಗಿದೆ. ‘ಶ್ರೀರಾಮ ಸಮಾಜವು ಇಲ್ಲಿ ಕೇವಲ ದೇವತೆಗಳ ಚಿತ್ರದ ಪೂಜೆ ಮಾಡಲಾಗುತ್ತದೆ’, ಎಂದು ಹೇಳುತ್ತದೆ. ಇಲ್ಲಿ ಯಾವುದೇ ಮೂರ್ತಿ ಇಲ್ಲ’ ಎಂದು ಹೇಳಿದೆ.

೩. ಧಾರ್ಮಿಕದತ್ತೀ ವಿಭಾಗವು ‘ಈ ಧಾರ್ಮಿಕ ಸ್ಥಳದ ವ್ಯವಸ್ಥಾಪನೆಯ ವಿರುದ್ಧ ದೂರುಗಳು ಬರುತ್ತಿದ್ದವು. ಆದುದರಿಂದ ಅದರ ಸರಕಾರೀಕರಣ ಮಾಡಲಾಯಿತು’ ಎಂದು ಹೇಳುತ್ತಿದೆ. (ವಕ್ಫ ಬೋರ್ಡನಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಸ್ಥಿತತೆ ಇದೆ; ಹೀಗಿರುವಾಗ ಈ ಬೋರ್ಡನ್ನು ಸರಕಾರ ಏಕೆ ವಶಕ್ಕೆ ಪಡೆಯುತ್ತಿಲ್ಲ ? – ಸಂಪಾದಕರು)