ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವೀಟರ ಖಾತೆ ಹ್ಯಾಕ್ !

ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದ ಮುಖ್ಯಮಂತ್ರಿಗಳ ಕಚೇರಿಯ ಟ್ವೀಟರ ಖಾತೆಯನ್ನು ಹ್ಯಾಕ್ ಮಾಡಬಹುದಾದರೆ ಸಾಮಾನ್ಯ ನಾಗರಿಕರ ಸಾಮಾಜಿಕ ಮಾಧ್ಯಮ ಖಾತೆಗಳು ಎಷ್ಟರ ಮಟ್ಟಿಗೆ ಭದ್ರತೆ ಇದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ !

ನವದೆಹಲಿ – ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಚೇರಿಯ ಟ್ವೀಟರ ಖಾತೆಯನ್ನು ಏಪ್ರಿಲ ೮ ರ ತಡರಾತ್ರಿ ಹ್ಯಾಕ್ ಮಾಡಲಾಗಿದೆ. (ಅನಧಿಕೃತ ನಿಯಂತ್ರಣ) ಹ್ಯಾಕರಗಳು ಮೊದಲು ಖಾತೆಯಲ್ಲಿನ ಅವರ ಮಾಹಿತಿಯನ್ನು ಬದಲಾಯಿಸಿದರು ಮತ್ತು ನಂತರ ಟ್ವಿಟರ ಹ್ಯಾಂಡಲ ‘@CMOfficeUP’ ನ ‘ಪ್ರೊಫೈಲ ಫೊಟೊ’ ಅನ್ನು ಬದಲಾಯಿಸಿದರು.

ನಂತರ ೫೦ ಕ್ಕೂ ಹೆಚ್ಚು ಟ್ವೀಟಗಳನ್ನು ಮಾಡಲಾಯಿತು. ಮುಖ್ಯಮಂತ್ರಿಗಳ ಕಚೇರಿಯ ಟ್ವೀಟರ ಖಾತೆ ಹ್ಯಾಕ ಆಗಿದೆ ಎಂಬ ಸುದ್ದಿ ಬಂದ ನಂತರ ಮಧ್ಯರಾತ್ರಿ ಇಡೀ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ. ಟ್ವೀಟರ ಹ್ಯಾಂಡಲನ್ನು ೨೫ ನಿಮಿಷಗಳಲ್ಲಿ ರದ್ದುಗೊಳಿಸಲಾಗಿದೆ. ಹ್ಯಾಕರ‍್ಸ್‌ಗಳ ಎಲ್ಲಾ ಟ್ವೀಟಗಳನ್ನು ಅಳಿಸಲಾಯಿತು.