ಮ. ಗಾಂಧಿಯವರ ಬಗ್ಗೆ ನೀಡಿದ್ದ ಹೇಳಿಕೆಯ ಬಗ್ಗೆ ಪಶ್ಚಾತ್ತಾಪವಿಲ್ಲ ! – ಕಾಲಿಚರಣ ಮಹಾರಾಜ

ಇಂದೂರ (ಮಧ್ಯಪ್ರದೇಶ) – ಮೋಹನದಾಸ ಗಾಂಧಿಯವರ ವಿಷಯದಲ್ಲಿ ನಾನು ನೀಡಿರುವ ಹೇಳಿಕೆಯ ವಿಷಯದಲ್ಲಿ ನನಗೆ ಯಾವುದೇ ರೀತಿಯ ಪಶ್ಚಾತ್ತಾಪ ಆಗುತ್ತಿಲ್ಲ. ಕಲಿಯುಗದಲ್ಲಿ ಸತ್ಯ ಮಾತನಾಡಿದ್ದರಿಂದ ನನಗೆ ಶಿಕ್ಷೆಯಾಗಿದೆ, ಎಂದು ಕಾಲಿಚರಣ ಮಹಾರಾಜರು ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಹೇಳಿದರು. ಕಾಲಿಚರಣ ಮಹಾರಾಜರ ಬೆಂಬಲಿಗರು ಅವರಿಗೆ ಇಂದೂರ ವಿಮಾನನಿಲ್ದಾಣದಲ್ಲಿ ಭವ್ಯ ಸ್ವಾಗತ ಮಾಡಿದರು.

ಕಳೆದ ವರ್ಷ ಡಿಸೆಂಬರನಲ್ಲಿ ಛತ್ತೀಸಗಡದ ರಾಯಪೂರನಲ್ಲಿ ಜರುಗಿದ ಧರ್ಮಸಂಸತ್ತಿನಲ್ಲಿ ಕಾಲಿಚರಣ ಮಹಾರಾಜರು ಗಾಂಧಿಯವರ ಹತ್ಯೆ ಮಾಡಿದ ಪಂಡಿತ ನಥುರಾಮ ಗೋಡಸೆಯವರನ್ನು ಹೊಗಳಿದ್ದರು. ತದನಂತರ ಅವರ ವಿರುದ್ಧ ದೂರು ದಾಖಲಿಸಿ, ಅವರನ್ನು ಬಂಧಿಸಲಾಗಿತ್ತು.