ಮಸೀದಿಗಳ ಮೇಲಿನ ಭೋಂಗಾಗಗಳ ಶಬ್ಧವನ್ನು ಅಳೆಯಲು ಧ್ವನಿಮಾಪನ ಯಂತ್ರವನ್ನು ಅಳವಡಿಸಿ !

ಕರ್ನಾಟಕ ಪೊಲೀಸರಿಂದ ಮಸೀದಿಗಳಿಗೆ ನೊಟೀಸು

ಕರ್ನಾಟಕ ಉಚ್ಚ ನ್ಯಾಯಾಲಯವು ೨೦೦೧ರಲ್ಲಿ ನೀಡಿರುವ ಆದೇಶದ ಪಾಲನೆಯನ್ನು ಇಷ್ಟು ವರ್ಷಗಳ ನಂತರ ಮಾಡಲಾಗುತ್ತಿದೆ ! ಇದನ್ನು ಮೊದಲೇ ಮಾಡಿದ್ದರೆ ಇಂದು ಸಮಾಜಕ್ಕೆ ಮಸೀದಿಗಳ ಮೇಲಿನ ಭೋಂಗಾಗಳ ಸಮಸ್ಯೆಯನ್ನು ಎದುರಿಸಬೇಕಾಗುತ್ತಿರಲಿಲ್ಲ !

೨೧ ವರ್ಷಗಳಿಂದ ನ್ಯಾಯಾಲಯದ ಆದೇಶವನ್ನು ಪಾಲಿಸದಿರುವ ಪೊಲೀಸರನ್ನು ಅಮಾನತುಗೊಳಿಸಿ ಸರಕಾರವು ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !

ಬೆಂಗಳೂರು (ಕರ್ನಾಟಕ) – ಕರ್ನಾಟಕ ರಾಜ್ಯದಲ್ಲಿನ ಮಸೀದಿಗಳ ಮೇಲಿನ ಭೋಂಗಾಗಳನ್ನು ತೆಗೆಯುವ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳು ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜ್ಯದಲ್ಲಿನ ಮಸೀದಿಗಳಿಗೆ ನೊಟೀಸನ್ನು ಕಳುಹಿಸಿದೆ. ಅವರು ಭೋಂಗಾದ ಶಬ್ದವನ್ನು ನಿಶ್ಚಯಿಸಿದ ಡೆಸಿಬಲ್‌ನಷ್ಟೇ ಇಡಲು ಹೇಳಿದ್ದಾರೆ. ಹಾಗೆಯೇ ಧ್ವನಿಮಾಪಕ ಯಂತ್ರವನ್ನು ಅಳವಡಿಸಲು ಹೇಳಲಾಗಿದೆ.

೧. ಬೆಂಗಳೂರು ನಗರದಲ್ಲಿ ೨೫೦ಕ್ಕೂ ಹೆಚ್ಚಿನ ಮಸೀದಿಗಳಿಗೆ ಇಂತಹ ನೊಟೀಸನ್ನು ಕಳುಹಿಸಲಾಗಿದೆ. ಈ ನೊಟೀಸಿನ ನಂತರ ಮಸೀದಿಗಳಿಂದ ಧ್ವನಿಮಾಪಕ ಯಂತ್ರದ ಅಳವಡಿಕೆಯು ಆರಂಭವಾಗಿದೆ. ಈ ಮೂಲಕ ಪೊಲೀಸರಿಗೆ ಭೋಂಗಾಗಳ ಧ್ವನಿ ಎಷ್ಟಿದೆ ಎಂಬುದು ತಿಳಿಯಬಲ್ಲುದು. ಇದರೊಂದಿಗೆ ನಗರದಲ್ಲಿನ ೮೩ ದೇವಸ್ಥಾನಗಳು, ೨೨ ಚರ್ಚ ಮತ್ತು ೫೯ ಪಬ್‌ಗಳಿಗೂ ನೊಟೀಸನ್ನು ಜ್ಯಾರಿಗೊಳಿಸಲಾಗಿದೆ.

೨. ರಾಜ್ಯದ ಪೊಲೀಸ ಮಹಾಸಂಚಾಲಕರಾದ ಪ್ರವೀಣ ಸೂದ ರವರು ರಾಜ್ಯದ ಎಲ್ಲ ಪೊಲೀಸ ಆಯುಕ್ತರು, ಪೊಲೀಸ ಮಹಾನಿರೀಕ್ಷಕರು ಹಾಗೂ ಪೊಲೀಸ ಅಧೀಕ್ಷಕರಿಗೆ ಧಾರ್ಮಿಕ ಸ್ಥಳಗಳು, ಪಬ್, ನೈಟ್ ಕ್ಲಬ್ ಮತ್ತು ಇತರ ಕಡೆಗಳಲ್ಲಿ ಶಬ್ದ ಮಾಲಿನ್ಯದ ಸಂದರ್ಭದಲ್ಲಿ ನಿಯಮಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ವಿಚಾರಣೆ ನಡೆಸಲು ಆದೇಶಿಸಿದ್ದಾರೆ.

ನಾವು ಯಾವುದೇ ಹೊಸ ಆದೇಶವನ್ನು ನೀಡಿಲ್ಲ ! – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸರಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದಾರೆ. ಕರ್ನಾಟಕ ಸರಕಾರವು ಕರ್ನಾಟಕ ಉಚ್ಚ ನ್ಯಾಯಾಲಯದ ಮಸೀದಿಗಳ ಮೇಲಿನ ಭೋಂಗಾಗಳ ಶಬ್ದವನ್ನು ನಿಯಂತ್ರಿಸುವ ಆದೇಶವನ್ನು ಪಾಲಿಸುತ್ತಿದೆ. ಆದರೆ ಈ ಆದೇಶವನ್ನು ಬಲಪೂರ್ವಕವಾಗಿ ಜ್ಯಾರಿಗೊಳಿಸಲಾಗುವುದಿಲ್ಲ. ಇದಕ್ಕಾಗಿ ಪೊಲೀಸ ಠಾಣೆಯಿಂದ ಆ ಜಿಲ್ಲಾ ಮಟ್ಟದಲ್ಲಿರುವ ಸಂಘಟನೆಯೊಂದಿಗೆ ಚರ್ಚೆ ನಡೆಸಲಾಗುವುದು. ಈ ಆದೇಶವು ೨೦೦೧ ಮತ್ತು ೨೦೦೨ ಇಸವಿಯದ್ದಾಗಿದೆ. ನಾವು ಯಾವುದೇ ಹೊಸ ಆದೇಶವನ್ನು ನೀಡಿಲ್ಲ. ನ್ಯಾಯಾಲಯವು ಡೆಸಿಬಲ್‌ನ ಮಟ್ಟವನ್ನು ಸ್ಥಿರವಾಗಿಡಲು ಹೇಳಿದೆ. ಆದುದರಿಂದ ಜಿಲ್ಲಾಮಟ್ಟದಲ್ಲಿ ಧ್ವನಿಮಾಪಕಯಂತ್ರದ ಖರೀದಿ ಮಾಡಲು ಆದೇಶಿಸಲಾಗಿದೆ. ಯಾವುದೇ ಸಮಾಜ ಅಥವಾ ಸಂಘಟನೆಗಳಿಗೆ ಕರ್ನಾಟಕದಲ್ಲಿನ ಶಾಂತಿ ಮತ್ತು ಸದ್ಭಾವನೆಯನ್ನು ಕೆಡಿಸುವ ಅನುಮತಿ ನೀಡಲಾಗುವುದಿಲ್ಲ, ಎಂಬುದನ್ನೂ ಅವರು ಸ್ಪಷ್ಟಪಡಿಸಿದರು.

‘ದೇವಸ್ಥಾನಗಳೂ ನೊಟೀಸಿನ ಪಾಲನೆ ಮಾಡಬೇಕು ! – ಇಮಾಮ ಮಹಮ್ಮದ ಇಮ್ರಾನ ರಶ್ದೀ

ಹಿಂದೂಗಳು ಕಾನೂನು ಪಾಲನೆ ಮಾಡುತ್ತಿರುವುದರಿಂದ ಇಲ್ಲಿಯ ವರೆಗೆ ಯಾರೂ ಹಿಂದೂಗಳ ದೇವಸ್ಥಾನಗಳ ಭೋಂಗಾಗಳ ಬಗ್ಗೆ ದೂರು ನೀಡಿಲ್ಲ; ಆದರೆ ಮಸೀದಿಗಳ ಮೇಲಿನ ಭೋಂಗಾಗಳಿಂದ ಜನತೆಗೆ ತೊಂದರೆಯಾಗುತ್ತಿದೆ. ಆದರೂ ಇಂತಹ ಹೇಳಿಕೆಗಳನ್ನು ನೀಡಿ ಹಿಂದೂಗಳನ್ನೂ ದೋಷಿ ಎಂದು ಹೇಳುವ ಮತಾಂಧರ ಪ್ರಯತ್ನಗಳು ಗಮನಕ್ಕೆ ಬರುತ್ತವೆ !

ಬೆಂಗಳೂರಿನ ಜಾಮಿಯಾ ಮಸೀದಿಯ ಪ್ರಮುಖರಾದ ಇಮಾಮ ಮಹಮ್ಮದ ಇಮ್ರಾನ ರಶ್ದೀಯವರು ಪೊಲೀಸರ ನೊಟೀಸಿನ ಬಗ್ಗೆ ‘ನಾವು ಆವಶ್ಯಕತೆಯ ಅನುಸಾರ ಶಬ್ದ ನಿಯಂತ್ರಿಸುವ ಉಪಕರಣವನ್ನು ಹಚ್ಚುವ ವ್ಯವಸ್ಥೆ ಮಾಡಿದ್ದೇವೆ, ಒಟ್ಟಿನಲ್ಲಿ ಯಾವುದೇ ಸಮಸ್ಯೆ ಆಗಬಾರದು. ನಾವು ನೊಟೀಸಿನ ಪಾಲನೆ ಮಾಡಲಿದ್ದೇವೆ, ಹಾಗೆಯೇ ದೇವಸ್ಥಾನಗಳೂ ಮಾಡಬೇಕು’ ಎಂದು ಹೇಳಿದ್ದಾರೆ.