ಉತ್ತರಪ್ರದೇಶ ಸರಕಾರದ ಅಭಿನಂದನಾರ್ಹ ನಿರ್ಣಯ !
ವಾದದ ಹಿನ್ನೆಲೆಯಲ್ಲಿ ಕಥಿತ ಮಸೀದಿಯ ಬದಿಯಲ್ಲಿರುವ ಈ ದೇವಸ್ಥಾನದಲ್ಲಿ ವರ್ಷದಲ್ಲಿ ಕೇವಲ ಒಮ್ಮೆ ಮಾತ್ರ ಪೂಜೆಗೆ ಅನುಮತಿ ಇತ್ತು ! ಇಸ್ಲಾಮಿ ಆಕ್ರಮಣಕಾರರು ಹಿಂದೂಗಳ ನೂರಾರು ದೇವಸ್ಥಾನಗಳನ್ನು ಕೆಡವಿ ಅಲ್ಲಿ ಮಸೀದಿಗಳನ್ನು ಕಟ್ಟಿದರು. ಅವುಗಳನ್ನು ಹಿಂಪಡೆಯಲು ಹಿಂದೂಗಳು ಕಾನೂನುಬದ್ಧ ಮಾರ್ಗದಿಂದ ಹೋರಾಡುತ್ತಿದ್ದಾರೆ. ಈಗ ಸರಕಾರವೂ ಇದರಲ್ಲಿ ಹಸ್ತಕ್ಷೇಪ ಮಾಡಿ ಹಿಂದೂಗಳಿಗೆ ತಮ್ಮ ಧಾರ್ಮಿಕ ಸ್ಥಳಗಳನ್ನು ಹಿಂದಿರುಗಿಸಿ ಕೊಡಬೇಕು, ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ ! |
ವಾರಣಾಸಿ (ಉತ್ತರಪ್ರದೇಶ) – ಕ್ರೂರಕರ್ಮಿ ಔರಂಗಜೇಬನು ಇಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನವನ್ನು ಕೆಡವಿ ಅದೇ ಪರಿಸರದಲ್ಲಿ ಜ್ಞಾನವಾಪಿ ಮಸೀದಿಯನ್ನು ಕಟ್ಟಿಸಿದನು. ಈ ಭೂಮಿಯು ಪುನಃ ಹಿಂದೂಗಳಿಗೆ ಸಿಗಬೇಕು, ಎಂದು ನ್ಯಾಯಾಲಯದಲ್ಲಿ ಖಟ್ಲೆ ನಡೆಯುತ್ತಿದೆ. ಈ ವಾದದ ಹಿನ್ನೆಲೆಯಲ್ಲಿ ಹಿಂದೂಗಳಿಗೆ ಈ ಕಥಿತ ಮಸೀದಿಯ ಪಶ್ಚಿಮ ದಿಕ್ಕಿನಲ್ಲಿರುವ ದೇವಿ ಶೃಂಗಾರ ಗೌರಿ ಮಾತೆಯ ಮೂರ್ತಿಗೆ ವರ್ಷದಲ್ಲಿ ಕೇವಲ ಒಮ್ಮೆ ಪೂಜೆ ಮಾಡಲು ಅನುಮತಿ ದೊರೆಯುತ್ತಿತ್ತು. ಈ ವಿಷಯದಲ್ಲಿ ನ್ಯಾಯವಾದಿ ವಿಷ್ಣುಶಂಕರ ಜೈನರವರು ವಾರಣಾಸಿ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿ ವರ್ಷಪೂರ್ತಿ ಪೂಜೆ ಮಾಡುವ ಅನುಮತಿ ದೊರೆಯಬೇಕು ಎಂದು ಮನವಿ ಮಾಡಿದ್ದರು. ಈ ಬಗ್ಗೆ ನ್ಯಾಯಾಲಯವು ಉತ್ತರಪ್ರದೇಶ ಸರಕಾರಕ್ಕೆ ನೋಟಿಸು ಕಳಿಸಿತ್ತು. ಆದರೆ ಇದರ ಮೊದಲೇ ಉತ್ತರಪ್ರದೇಶ ಸರಕಾರವು ವರ್ಷಪೂರ್ತಿ ಪೂಜೆ ಮಾಡಲು ಹಾಗೂ ದರ್ಶನ ಪಡೆಯಲು ಅನುಮತಿ ನೀಡಿದೆ. ಮಹಾರಾಣಿ ಅಹಿಲ್ಯಾಬಾಯಿ ಹೋಳ್ಕರರವರು ಜ್ಞಾನವಾಪಿ ಮಸೀದಿಯ ಬದಿಯಲ್ಲಿ ಕಾಶೀ ವಿಶ್ವನಾಥ ದೇವಸ್ಥಾನವನ್ನು ಕಟ್ಟಿದ್ದರು.
ಕಳೆದ ಅನೇಕ ವರ್ಷಗಳಿಂದ ಇದಕ್ಕಾಗಿ ಹೋರಾಡಿದ ಹಿಂದೂಗಳ ವಿಜಯ ! – ನ್ಯಾಯವಾದಿ ವಿಷ್ಣುಶಂಕರ ಜೈನ
ಈ ಬಗ್ಗೆ ನ್ಯಾಯವಾದಿ ವಿಷ್ಣುಶಂಕರ ಜೈನರವರು ಮಾತನಾಡುತ್ತ, ‘೧೯೯೦ರ ನಂತರ ಆಗಿನ ಸರಕಾರವು ಪೂಜೆಯನ್ನು ನಿಲ್ಲಿಸಿತ್ತು. ಆಗ ಕೇವಲ ಚೈತ್ರ ನವರಾತ್ರಿಯಲ್ಲಿನ ಶುಕ್ಲ ಚತುರ್ಥಿಯಂದು ಪೂಜೆಗೆ ಅನುಮತಿಯನ್ನು ನೀಡಲಾಗಿತ್ತು. ನಾವು ವಾರಣಾಸಿ ದಿವಾನಿ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿ ದೇವಿಯ ಪೂಜೆ ಮಾಡುವುದು ಹಿಂದೂಗಳ ಮೂಲಭೂತ ಅಧಿಕಾರವಾಗಿರುವುದಾಗಿ ಹೇಳುತ್ತ ವರ್ಷಪೂರ್ತಿ ಅನುಮತಿ ನೀಡಬೇಕಾಗಿ ಮನವಿ ಮಾಡಲಾಗಿತ್ತು. ಇದರ ಮೇಲೆ ನ್ಯಾಯಾಲಯವು ಸರಕಾರಕ್ಕೆ ನೊಟೀಸು ಕಳಿಸಿದೆ. ಇದು ಕಳೆದ ಅನೇಕ ವರ್ಷಗಳಿಂದ ಇದಕ್ಕಾಗಿ ಹೋರಾಡಿದ ಹಿಂದೂಗಳ ವಿಜಯವಾಗಿದೆ’ ಎಂದು ಹೇಳಿದರು.
ಜ್ಞಾನವಾಪಿ ಮಸೀದಿಯು ಇಸ್ಲಾಮಿನ ಮಾನ್ಯತೆಗನುಸಾರ ಇಲ್ಲ !
ನ್ಯಾಯವಾದಿ ಜೈನರವರು ಮಾತನಾಡುತ್ತ, ಈ ಮಸೀದಿಯು ಇಸ್ಲಾಮಿನ ಮಾನ್ಯತೆಗನುಸಾರ ಇಲ್ಲ. ಏಕೆಂದರೆ ಒಂದು ಮಸೀದಿಯ ಪಶ್ಚಿಮ ದಿಕ್ಕಿನಲ್ಲಿ ಹಿಂದೂಗಳ ದೇವತೆಯ ಮೂರ್ತಿಯಿರುವುದು ಭಾರತದಲ್ಲಿ ಎಲ್ಲಿಯೂ ಇಲ್ಲ. ಇಸ್ಲಾಮಿನಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಔರಂಗಜೇಬನು ಇಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನವನ್ನು ಕೆಡವಿ ಅಲ್ಲಿ ಈ ಮಸೀದಿಯನ್ನು ಕಟ್ಟಿದ್ದಾನೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ, ಎಂದು ಹೇಳಿದರು.