ಬುಚಾ ನಗರದಲ್ಲಿ ನಾವು ನರಸಂಹಾರ ನಡೆಸಿಲ್ಲ ! – ರಷ್ಯಾದ ಹೇಳಿಕೆ

ಮಾಸ್ಕೊ(ರಷ್ಯಾ) – ಬುಚಾ ನಗರದಲ್ಲಿ ನಾವು ನರಸಂಹಾರ ನಡೆಸಿಲ್ಲ, ಎಂದು ರಷ್ಯಾ ಹೇಳಿಕೆ ನೀಡಿದೆ. ಈ ಸಂಪೂರ್ಣ ಪ್ರಕರಣ ಸುಳ್ಳಾಗಿದೆಯೆಂದು ವಾದಿಸುವ ಒಂದು ವಿಡಿಯೊವನ್ನು ರಷ್ಯಾ ಪ್ರಸಾರ ಮಾಡಿದೆ. ಬುಚಾ ನಗರದಲ್ಲಿ ೪೧೦ ಕ್ಕಿಂತ ಹೆಚ್ಚು ಆವಗಳು ಸಿಕ್ಕಿದೆ. ರಷ್ಯಾದ ಸೈನ್ಯವು ನಾಗರಿಕರನ್ನು ಸಾಮೂಹಿಕ ಹತ್ಯೆ ಮಾಡಿರುವ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವ ಆರೋಪವಿದೆ.

ರಶಿಯಾದ ವಿದೇಶಾಂಗ ಸಚಿವಾಲಯವು, ರಷ್ಯಾದ ಸೈನ್ಯ ಮಾರ್ಚ ೩೦, ೨೦೨೨ ರಂದು ಬುಚಾ ನಗರದಿಂದ ಹಿಂದೆ ಸರಿದಿದೆ. ಕೀವ ಸರಕಾರದಿಂದ ಯಾವ ಛಾಯಾಚಿತ್ರಗಳು ಬಿಡುಗಡೆ ಮಾಡಲಾಗುತ್ತಿವೆಯೋ, ಅದರಲ್ಲಿರುವ ಶವ ೪ ದಿನಗಳು ಕಳೆದರೂ ಗಟ್ಟಿಯಾಗಿಲ್ಲ. ಮರಣದ ಬಳಿಕ ಕೆಲವೇ ಗಂಟೆಗಳಲ್ಲಿ ಮೃತದೇಹವು ಸೆಟೆಯತೊಡಗುತ್ತದೆ. ಇಲ್ಲಿ ಕಾಣಿಸುತ್ತಿರುವ ಶವಗಳ ಈ ಭಯಾನಕ ಛಾಯಾಚಿತ್ರಗಳು ನಕಲಿಯಾಗಿವೆ. ರಷ್ಯಾದ ಸೈನ್ಯವನ್ನು ಅಪಕೀರ್ತಿಗೊಳಿಸಲು ಉಕ್ರೇನ ಈ ರೀತಿ ಮಾಡುತ್ತಿದೆ ಎಂದು ಹೇಳಿದೆ.