ದೆಹಲಿಯಲ್ಲಿ ಚಿಕ್ಕಮಕ್ಕಳ ಜಗಳದ ಕಾರಣ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ

ಇಲ್ಲಿಯ ವೆಲ್ಕಮ್ ಭಾಗದಲ್ಲಿ ಚಿಕ್ಕಮಕ್ಕಳ ಜಗಳದ ಕಾರಣ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ೩ ಜನರನ್ನು ಬಂಧಿಸಿದ್ದಾರೆ ಹಾಗೂ ೩೭ ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಮೇ ೪ ರಂದು ರಾತ್ರಿ ನಡೆದಿದೆ.

ಕೇರಳದಲ್ಲಿ ಸಂಘ ಕಾರ್ಯಕರ್ತನ ಹತ್ಯೆಯ ಪ್ರಕರಣದಲ್ಲಿ ಪಿ.ಎಫ್.ಐ.ಯ ೪ ಜನರ ಬಂಧನ

ಜಿಲ್ಲೆಯಲ್ಲಿ ಕಳೆದ ತಿಂಗಳ ನಡೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ನಾಯಕನ ಹತ್ಯೆ ಪ್ರಕರಣದಲ್ಲಿ ಇನ್ನೂ ೪ ಜನರನ್ನು ಬಂಧಿಸಲಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿಸಲಾಗಿರುವ ಒಟ್ಟು ಆರೋಪಿಗಳ ಸಂಖ್ಯೆ ೨೦ ಕೆ ತಲುಪಿದೆ, ಎಂಬ ಮಾಹಿತಿ ಹೆಚ್ಚುವರಿ ಪೊಲೀಸ್ ಮಹಾ ಸಂಚಾಲಕರು (ಕಾನೂನು ಮತ್ತು ಸುವ್ಯವಸ್ಥೆ) ವಿಜಯ ಸಾಖರೆ ಇವರು ನೀಡಿದರು.

ಶುಕ್ರ ಗ್ರಹದ ಮೇಲೆ ಆದಷ್ಟು ಬೇಗನೆ ಯಾನ ಕಳಿಸಲಿರುವ ಇಸ್ರೋ !

ಚಂದ್ರ ಮತ್ತು ಮಂಗಳ ಗ್ರಹಗಳ ಮೇಲೆ ಯಾನ ಕಳಿಸಿದ ನಂತರ ಇನ್ನೂ ಸೌರ ಮಂಡಲದ ಎಲ್ಲಕ್ಕಿಂತ ಉಷ್ಣ ಗ್ರಹ ಆಗಿರುವ ಶುಕ್ರಗ್ರಹದ ಮೇಲೆ ಅಂತರಿಕ್ಷಯಾನ ಕಳಿಸಲು ಭಾರತೀಯ ಅಂತರಿಕ್ಷ ಸಂಶೋಧನೆ ಸಂಸ್ಥೆ ಅಂದರೆ ಇಸ್ರೋ ಸಿದ್ಧತೆ ನಡೆಸುತ್ತಿದೆ. ಶುಕ್ರನ ಪೃಷ್ಠ ಭಾಗದಲ್ಲಿ ಏನು ಅಡಗಿದೆ, ಇದನ್ನು ಕಂಡು ಹಿಡಿಯುವುದಕ್ಕಾಗಿ ಅದರ ಕಕ್ಷೆಯನ್ನು ಸೇರುವುದು ಆವಶ್ಯಕವಾಗಿದೆ.

ಗಂಗೆ ಎಂದಿಗೂ ಬತ್ತುವುದಿಲ್ಲ ! – ಸಂಶೋಧನೆಯ ನಿಷ್ಕರ್ಷ

‘ಕ್ಯಟೊ ಇನ್ಸ್ಟಿಟ್ಯೂಟ್’ನ ಸಂಶೋಧಕರ ಅಭಿಪ್ರಾಯ – ಹವಾಮಾನ ಬದಲಾವಣೆಯಿಂದ ಹಿಮಾಲಯದಲ್ಲಿರುವ ಮಂಜು ಕರಗುವುದಿಲ್ಲ. ಮಂಜು ಕರಗುವ ಪ್ರಕ್ರಿಯೆಯು ಹಿಮಯುಗದ ಸಮಾಪ್ತಿಯ ಬಳಿಕ ಅಂದರೆ ಕಳೆದ ೧೧ ಸಾವಿರ ೭೦೦ ವರ್ಷಗಳಿಂದ ನಡೆಸುಯುತ್ತಲೇ ಇದೆ.

ಭಿಲವಾಡಾ (ರಾಜಸ್ತಾನ)ದಲ್ಲಿ ಇಬ್ಬರು ತರುಣರ ಮೇಲೆ ಚಾಕುವಿನಿಂದ ಆಕ್ರಮಣವಾಗಿದ್ದರಿಂದ ಒತ್ತಡ

ಇಲ್ಲಿನ ಸಾಂಗಾನೇರ ಭಾಗದಲ್ಲಿ ೨ ತರುಣರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಅವರ ದ್ವಿಚಕ್ರವನ್ನು ಸುಟ್ಟಿರುವ ಘಟನೆಯ ನಂತರ ಇಲ್ಲಿ ಒತ್ತಡದ ವಾತಾವರಣವಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವ ಮನವಿ ಮಾಡಲು ಇಲ್ಲಿ ಪ್ರತಿಭಟನೆ ಆಂದೋಲನಗಳನ್ನು ಮಾಡಲಾಗುತ್ತದೆ.

ಭಾಗ್ಯನಗರ (ತೆಲಂಗಾಣಾ)ದಲ್ಲಿ ಮುಸಲ್ಮಾನ ತರುಣಿಯೊಂದಿಗೆ ವಿವಾಹವಾದ ಹಿಂದೂ ತರುಣನ ಹತ್ಯೆ

ಇಲ್ಲಿ ಮುಸಲ್ಮಾನ ತರುಣಿಯೊಂದಿಗೆ ವಿವಾಹವಾದದ್ದರಿಂದ ೨೫ ವರ್ಷದ ನಾಗರಾಜು ಎಂಬ ಯುವಕನ ಚಾಕೂ ಚುಚ್ಚಿ ಹತ್ಯೆ ಮಾಡಲಾಯಿತು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಅವರು ತರುಣಿಯ ಕುಟುಂಬದವರಾಗಿದ್ದಾರೆ.

ದೆಹಲಿಯಲ್ಲಿನ ಧಾರ್ಮಿಕ ಸ್ಥಳಗಳಲ್ಲಿನ ಭೋಂಗಾಗಳ ಮೇಲೆ ಕಾರ್ಯಾಚರಣೆಯನ್ನು ಮಾಡಲು ಕೇಂದ್ರ ಸರಕಾರಕ್ಕೆ ಹೇಳಬೇಕು !

ದೆಹಲಿ ರಾಜ್ಯದಲ್ಲಿನ ಧಾರ್ಮಿಕ ಸ್ಥಳಗಳಲ್ಲಿರುವ ಭೋಂಗಾಗಳನ್ನು ತೆಗೆಯುವ ಬಗ್ಗೆ ಭಾಜಪವು ಮನವಿ ಮಾಡಿದಾಗ ಅಧಿಕಾರದಲ್ಲಿರುವ ಆಮ ಆದಮಿ ಪಕ್ಷದಿಂದ ಅದಕ್ಕೆ ಒಪ್ಪಿಗೆಯನ್ನು ನೀಡಲಾಯಿತು.

ಕರ್ನಾಲ (ಹರಿಯಾಣ)ದಲ್ಲಿ ೪ ಖಲಿಸ್ತಾನಿ ಭಯೋತ್ಪಾದಕರನ್ನು ದೊಡ್ಡ ಶಸ್ತ್ರಸಂಗ್ರಹದೊಂದಿಗೆ ಬಂಧಿಸಲಾಯಿತು !

ರಾಜಧಾನಿ ದೆಹಲಿಯಲ್ಲಿ ಬಾಂಬ್‌ಸ್ಫೋಟಗಳನ್ನು ನಡೆಸುವ ದೊಡ್ಡ ಷಡ್ಯಂತ್ರವನ್ನು ಧ್ವಂಸಗೊಳಿಸಲಾಯಿತು. ಇಲ್ಲಿ ಕರ್ನಾಲ ಮತ್ತು ಪಂಜಾಬ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಗುರಪ್ರೀತ, ಅಮನದೀಪ, ಪರಮಿಂದರ ಮತ್ತು ಭೂಪಿಂದರ ಎಂಬ ೪ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ.

ಇಸ್ಲಾಂ ತೊರೆದ ವ್ಯಕ್ತಿಯನ್ನು ಥಳಿಸಿದ ಮತಾಂಧರ ಗುಂಪು

ಇಲ್ಲಿ ಓರ್ವ ಮುಸಲ್ಮಾನನು ಇಸ್ಲಾಂ ತೊರೆದಿರುವುದರಿಂದ ಮತಾಂಧರ ಗುಂಪು ಅವನ ಮೇಲೆ ಹಲ್ಲೆ ನಡೆಸಿದೆ. ಆ ವ್ಯಕ್ತಿಯ ಹೆಸರು ಅಸ್ಕರ ಅಲೀ. ಹಲ್ಲೆ ಪ್ರಕರಣದಲ್ಲಿ ಪೊಲೀಸರಲ್ಲಿ ತಕರಾರನ್ನು ನೋಂದಿಸಲಾಯಿತು.

ಮಧ್ಯಪ್ರದೇಶದ ಭಾಜಪ ಸರಕಾರವು ದೇವಸ್ಥಾನಗಳ ಭೂಮಿರಹಿತ ಅರ್ಚಕರಿಗೆ ಪ್ರತಿತಿಂಗಳು ೫ ಸಾವಿರ ರೂಪಾಯಿಗಳ ಮಾನಧನ ನೀಡಲಿದೆ !

ಭೂಮಿರಹಿತ ದೇವಸ್ಥಾನಗಳ ಅರ್ಚಕರಿಗೆ ಪ್ರತಿತಿಂಗಳು ೫ ಸಾವಿರ ರೂಪಾಯಿಗಳ ಮಾನಧನವನ್ನು ನೀಡುವ ಘೋಷಣೆಯನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶಿವರಾಜ ಸಿಂಹ ಚೌಹಾನರವರು ಮಾಡಿದ್ದಾರೆ.