‘ಸನ್ ಬರ್ನ್’ಹಿನ್ನೆಲೆ ತನಿಖೆ ಮಾಡಲು ಗೃಹ ರಾಜ್ಯಸಚಿವರ ನಿರ್ದೇಶನ !
(ಟಿಪ್ಪಣಿ : ‘ಮ್ಯೂಸಿಕ್ ಕಾನ್ಸರ್ಟ್’ ಎಂದರೆ ಪಾಶ್ಚಾತ್ಯ ಸಂಗೀತದ ಕಾರ್ಯಕ್ರಮ)

ಮುಂಬಯಿ, ಜೂನ್ 25 (ಸುದ್ದಿ) – ಗೋರೆಗಾಂವ್ ಮತ್ತು ವರ್ಲಿ ಪ್ರದೇಶಗಳಲ್ಲಿ ನಡೆದ ‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಯುವಕರ ದುರದೃಷ್ಟಕರ ಸಾವು ಸಂಭವಿಸಿದ ನಂತರ ಮಹಾರಾಷ್ಟ್ರ ರಾಜ್ಯ ಸರಕಾರ ಈಗ ಕಠಿಣ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ‘ಮ್ಯೂಸಿಕ್ ಕಾನ್ಸರ್ಟ್’ಗಳಿಗೆ ಮದ್ಯ ಮಾರಾಟ ಅಥವಾ ಸೇವನೆಗೆ ಅನುಮತಿ ನೀಡುವುದಿಲ್ಲ ಎಂಬ ನಿರ್ಣಯವನ್ನು ಗೃಹ ಇಲಾಖೆ ತೆಗೆದುಕೊಂಡಿದೆ ಎಂದು ರಾಜ್ಯದ ಗೃಹ ರಾಜ್ಯಸಚಿವ ಯೋಗೇಶ ಕದಮ್ ತಿಳಿಸಿದರು. ಇದರೊಂದಿಗೆ ವಿವಾದಿತ ‘ಸನ್‌ಬರ್ನ್ ಫೆಸ್ಟಿವಲ್’ನ ಸಂಪೂರ್ಣ ಮಾಹಿತಿ ಮತ್ತು ಇದುವರೆಗಿನ ಹಿನ್ನೆಲೆಯನ್ನು ಪರಿಶೀಲಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
‘ನಶಾ ಮುಕ್ತಿ ಅಭಿಯಾನ’ದ ಶ್ರೀ. ಸತೀಶ್ ಸೋನಾರ್ ಅವರು ಇತ್ತೀಚೆಗಷ್ಟೇ ಗೃಹ ರಾಜ್ಯಸಚಿವ ಯೋಗೇಶ ಕದಮ್ ಅವರನ್ನು ಭೇಟಿಯಾಗಿ ಈ ಗಂಭೀರ ವಿಷಯದ ಕುರಿತು ಚರ್ಚಿಸಿದರು ಮತ್ತು ದೋಷಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಭೇಟಿಯ ಸಂದರ್ಭದಲ್ಲಿ ಗೃಹ ರಾಜ್ಯಸಚಿವರು ಸರಕಾರದ ಹೊಸ ನೀತಿಯ ಬಗ್ಗೆ ಮಾಹಿತಿ ನೀಡಿದರು.
ಅಬಕಾರಿ ಇಲಾಖೆಯ ಹಳೆಯ ಅನುಮತಿಗಳಿಗೆ ಬ್ರೇಕ್; ನಿಯಮಗಳು ಕಠಿಣ
ಈ ಹಿಂದೆ ಇಂತಹ ಸಂಗೀತ ಮಹೋತ್ಸವಗಳಿಗೆ ರಾಜ್ಯ ಅಬಕಾರಿ ಇಲಾಖೆ ಮದ್ಯ ಮಾರಾಟಕ್ಕೆ ಅನುಮತಿ ನೀಡುತ್ತಿತ್ತು, ಇದರಿಂದಾಗಿ ಅಹಿತಕರ ಘಟನೆಗಳು ಸಂಭವಿಸುತ್ತಿದ್ದವು; ಆದರೆ ಇನ್ನು ಮುಂದೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗಿದ್ದು, ಇಂತಹ ಯಾವುದೇ ಕಾನ್ಸರ್ಟ್‌ಗಳಲ್ಲಿ ಮದ್ಯಕ್ಕೆ ಅನುಮತಿ ನೀಡುವುದಿಲ್ಲವೆಂದು ಗೃಹ ರಾಜ್ಯಸಚಿವ ಕದಮ್ ಸ್ಪಷ್ಟಪಡಿಸಿದರು.
ಕೇವಲ ನಿಯಮ ಬೇಡ, ಶಾಶ್ವತವಾಗಿ ನಿಷೇಧಿಸಿರಿ! – ನಶಾ ಮುಕ್ತಿ ಅಭಿಯಾನ
ಗೃಹ ರಾಜ್ಯಸಚಿವರು ನಿಯಮಗಳನ್ನು ಕಠಿಣಗೊಳಿಸುವ ಭರವಸೆ ನೀಡಿದ್ದರೂ, ನಶಾ ಮುಕ್ತಿ ಅಭಿಯಾನದ ಶ್ರೀ. ಸತೀಶ್ ಸೋನಾರ್ ಅವರು ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಗೋರೆಗಾಂವ್ ನ ‘ನೆಸ್ಕೋ’ ಮತ್ತು ವರಳಿಯ ‘ಎನ್.ಎಸ್.ಸಿ.ಐ. ಡೋಮ್’ನಲ್ಲಿ ಇತ್ತೀಚೆಗೆ ನಡೆದ ಯುವಕರ ಸಾವಿನ ಉಲ್ಲೇಖ ಮಾಡುತ್ತಾ ಶ್ರೀ. ಸೋನಾರ್ ಅವರು ಗೃಹ ರಾಜ್ಯಸಚಿವರಿಗೆ ಪ್ರತಿಕ್ರಿಯಿಸುತ್ತಾ, ‘‘ಕೇವಲ ನಿಯಮಗಳನ್ನು ಕಠಿಣಗೊಳಿಸಿದರೆ ಸಾಲದು. ಗೋವಾದಿಂದ ಮುಂಬಯಿವರೆಗೆ ಯುವಕರ ಸಾವಿಗೆ ಕಾರಣವಾಗಿರುವ ‘ಸನ್ ಬರ್ನ್’ ಇತಿಹಾಸ ತುಂಬಾ ಕರಾಳವಾಗಿದೆ. ಹಣದ ಬಲದಿಂದ ಯುವ ಪೀಳಿಗೆಯನ್ನು ವ್ಯಸನದ ಕೂಪಕ್ಕೆ ತಳ್ಳುವ ಈ ಫೆಸ್ಟಿವಲ್ ಅನ್ನು ಮಹಾರಾಷ್ಟ್ರದಲ್ಲಿ ಶಾಶ್ವತವಾಗಿ ನಿಷೇಧಿಸಬೇಕು’’ ಎಂದರು.
ಪೊಲೀಸ್ ಮಹಾನಿರ್ದೇಶಕರು ಮತ್ತು ಅಧಿಕಾರಿಗಳಿಗೆ ತನಿಖೆ ನಡೆಸಲು ಸೂಚನೆ !ಶ್ರೀ. ಸತೀಶ್ ಸೋನಾರ್ ಅವರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಗೃಹ ರಾಜ್ಯಸಚಿವ ಯೋಗೇಶ್ ಕದಮ್ ಅವರು ತಕ್ಷಣ ಕ್ರಮ ಕೈಗೊಂಡರು. ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು. ಹಾಗೆಯೇ ಉಪಸ್ಥಿತರಿದ್ದ ಗೃಹ ಇಲಾಖೆಯ ಅಧಿಕಾರಿಗಳಿಗೆ ‘ಸನ್ ಬರ್ನ್’ ಆಯೋಜಕರ ಬಗ್ಗೆ, ಇದುವರೆಗಿನ ಕಾರ್ಯಕ್ರಮಗಳ ಬಗ್ಗೆ ಮತ್ತು ಅವರ ಹಿನ್ನೆಲೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ಕಲೆಹಾಕುವಂತೆ ಆದೇಶಿಸಿದರು. |
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!