ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗೌರವ!

ನವದೆಹಲಿ – ಏಪ್ರಿಲ್ 2025 ರಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಕೇವಲ 15 ದಿನಗಳಲ್ಲಿ, ಮೇ ತಿಂಗಳಲ್ಲಿ ಐತಿಹಾಸಿಕ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಭಾರತದ 6 ಸೈನಿಕರು ವೀರಮರಣ ಹೊಂದಿದ್ದಾರೆ ಎಂದು ಭಾರತವು ಮೊದಲ ಬಾರಿಗೆ ಬಹಿರಂಗಪಡಿಸಿದೆ. ಅವರ ಹೆಸರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ (‘ನ್ಯಾಷನಲ್ ವಾರ್ ಮೆಮೋರಿಯಲ್’) ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಭಾರತಕ್ಕಾಗಿ ಯಾವುದೇ ಯುದ್ಧ ಅಥವಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಹುತಾತ್ಮರಾದವರ ಹೆಸರುಗಳನ್ನು ಈ ವೆಬ್‌ಸೈಟ್‌ನಲ್ಲಿ ದಾಖಲಿಸಲಾಗುತ್ತದೆ.
ಈ 6 ಸೈನಿಕರು ವೀರಮರಣ ಹೊಂದಿದ್ದರು!
ಸುಬೇದಾರ್ ಮೇಜರ್ ಪವನ್ ಕುಮಾರ್ (ಮುಖ್ಯ ಕಚೇರಿ 10 ಇನ್‌ಫೆಂಟ್ರಿ ಬ್ರಿಗೇಡ್)
ರೈಫಲ್‌ಮನ್ ಸುನಿಲ್ ಕುಮಾರ್ (ವೀರ ಚಕ್ರ – 4 ಜಮ್ಮು-ಕಾಶ್ಮೀರ್ ಲೈಟ್ ಇನ್‌ಫೆಂಟ್ರಿ)
ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ (5 ಫೀಲ್ಡ್ ರೆಜಿಮೆಂಟ್)
ಏವಿಯೇಷನ್ ಟೆಕ್ನಿಷಿಯನ್ ಮೂಡ್ ಮುರಳಿ ನಾಯಕ್ (851 ಲೈಟ್ ರೆಜಿಮೆಂಟ್)
ಹವಲ್ದಾರ್ ಸುನಿಲ್ ಕುಮಾರ್ ಸಿಂಗ್ (237 ಫೀಲ್ಡ್ ವರ್ಕ್‌ಶಾಪ್ ಕಂಪನಿ)
ಸುರೇಂದ್ರ ಕುಮಾರ್ (ವಾಯುಸೇನಾ ಪದಕ – 39 ವಿಂಗ್)

ಈ ಹೆಸರುಗಳು ರಾಷ್ಟ್ರೀಯ ಯುದ್ಧ ಸ್ಮಾರಕದ ವೆಬ್‌ಸೈಟ್‌ನ ‘ರೋಲ್ ಆಫ್ ಆನರ್’ (ಗೌರವ ಸೂಚಿ) ವಿಭಾಗದಲ್ಲಿ ಕಂಡುಬರುತ್ತವೆ. ಈ ಪಟ್ಟಿಯಲ್ಲಿ ಒಟ್ಟು 26 ಸಾವಿರದ 626 ಹುತಾತ್ಮರ ಹೆಸರುಗಳಿವೆ. ಈ ಪಟ್ಟಿಯು 1947-48 ರ ಪಾಕಿಸ್ತಾನದ ವಿರುದ್ಧದ ಯುದ್ಧದಿಂದ ಹಿಡಿದು ‘ಆಪರೇಷನ್ ಸಿಂದೂರ್’ ವರೆಗೆ ಪಾಲ್ಗೊಂಡ ಎಲ್ಲಾ ಸೈನಿಕರ ಹೆಸರುಗಳನ್ನು ಒಳಗೊಂಡಿದೆ.
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!