ಕೆನಡಾಕ್ಕೆ ಬೆನ್ನು ಮಾಡಿದ ಭಾರತೀಯ ವಿದ್ಯಾರ್ಥಿಗಳು !

ಒಟ್ಟಾವಾ (ಕೆನಡಾ) – ಈ ವರ್ಷ ಕೆನಡಾಕ್ಕೆ ಬರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾ ೬೦ ರಷ್ಟು ಇಳಿಕೆಯಾಗಿದೆ. ಕೆನಡಾಕ್ಕೆ ಬರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಗಣನೀಯ ಕುಸಿತ ಕಂಡುಬಂದಿದೆ. ಭಾರತೀಯ ವಿದ್ಯಾರ್ಥಿಗಳು ಈಗ ಕೆನಡಾದ ಬದಲು ಇತರ ದೇಶಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಸರಕಾರದ ವಲಸೆ ನೀತಿಯಿಂದಾಗಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು, ತಮ್ಮ ಸರಕಾರವು ವಲಸೆಯನ್ನು ನಿಯಂತ್ರಿಸುವ ಜೊತೆಗೆ ಹೆಚ್ಚು ಸುಸ್ಥಿರ ಮತ್ತು ವಿಶ್ವಾಸಾರ್ಹ ವಲಸೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿಸಿದ್ದಾರೆ. ಇದು ಭವಿಷ್ಯದಲ್ಲಿ ಉತ್ತಮ ವ್ಯವಸ್ಥೆಯನ್ನು ನಿರ್ಮಿಸಲಿದೆ ಎಂದಿದ್ದಾರೆ.
೧. ೨೦೨೩ ರಲ್ಲಿ ಕೆನಡಾದಲ್ಲಿದ್ದ ಒಟ್ಟು ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತೀಯರ ಪ್ರಮಾಣ ಶೇಕಡಾ ೫೧.೬ ರಷ್ಟಿತ್ತು. ಈಗ ಕೆನಡಾದಲ್ಲಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಅವರ ಪಾಲು ಶೇಕಡಾ ೮.೧ ಕ್ಕೆ ಕುಸಿದಿದೆ.
೨. ‘ಇಮಿಗ್ರೇಷನ್, ರೆಫ್ಯೂಜಿಸ್ ಅಂಡ್ ಸಿಟಿಜನ್‌ಶಿಪ್ ಕೆನಡಾ’ (IRCC) ಸಂಸ್ಥೆಯ ವರದಿಯ ಪ್ರಕಾರ, ಜನವರಿಯಿಂದ ಅಕ್ಟೋಬರ್ ೨೦೨೫ ರ ಅವಧಿಯಲ್ಲಿ ಕೆನಡಾಕ್ಕೆ ಬರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತವಾಗಿದೆ. ಈ ಅವಧಿಯಲ್ಲಿ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ೧ ಲಕ್ಷದ ೫೦ ಸಾವಿರಕ್ಕೂ ಹೆಚ್ಚು ಇಳಿಕೆಯಾಗಿದೆ.
೩. ಕೆನಡಾದ ಹೊಸ ನಿಯಮಗಳಿಂದಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಹೆಚ್ಚು ಸ್ಪರ್ಧಾತ್ಮಕವಾಗಿದೆ. ಈ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಬೇಗನೆ ಅರ್ಜಿ ಸಲ್ಲಿಸುವುದು, ತಮ್ಮ ಸದೃಢ ಆರ್ಥಿಕ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಮತ್ತು ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಪಾಕಿಸ್ತಾನವು 1971 ರಲ್ಲಿ ಭಾರತದಿಂದ ಅನುಭವಿಸಿದ ಸೋಲನ್ನು ನೆನಪಿಸಿಕೊಳ್ಳಲಿ !
‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್ಗಳನ್ನು ಕಳುಹಿಸಿದೆ!’(ಯಂತೆ)
ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 235 ಮಂದಿ ಸಾವು!
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast