ಶುಕ್ರ ಗ್ರಹದ ಮೇಲೆ ಆದಷ್ಟು ಬೇಗನೆ ಯಾನ ಕಳಿಸಲಿರುವ ಇಸ್ರೋ !

ನವ ದೆಹಲಿ – ಚಂದ್ರ ಮತ್ತು ಮಂಗಳ ಗ್ರಹಗಳ ಮೇಲೆ ಯಾನ ಕಳಿಸಿದ ನಂತರ ಇನ್ನೂ ಸೌರ ಮಂಡಲದ ಎಲ್ಲಕ್ಕಿಂತ ಉಷ್ಣ ಗ್ರಹ ಆಗಿರುವ ಶುಕ್ರಗ್ರಹದ ಮೇಲೆ ಅಂತರಿಕ್ಷಯಾನ ಕಳಿಸಲು ಭಾರತೀಯ ಅಂತರಿಕ್ಷ ಸಂಶೋಧನೆ ಸಂಸ್ಥೆ ಅಂದರೆ ಇಸ್ರೋ ಸಿದ್ಧತೆ ನಡೆಸುತ್ತಿದೆ. ಶುಕ್ರನ ಪೃಷ್ಠ ಭಾಗದಲ್ಲಿ ಏನು ಅಡಗಿದೆ, ಇದನ್ನು ಕಂಡು ಹಿಡಿಯುವುದಕ್ಕಾಗಿ ಅದರ ಕಕ್ಷೆಯನ್ನು ಸೇರುವುದು ಆವಶ್ಯಕವಾಗಿದೆ. ಶುಕ್ರನಿಗೆ ಸುತ್ತುವರೆದಿರುವ ಗಂಧಕದ ಆಮ್ಲಯುಕ್ತ (ಸಲ್ಫ್ಯೂರಿಕ್ ಆಸಿಡ್) ಮೋಡದ ಕೆಳಗಿನ ರಹಸ್ಯದ ಶೋಧ ನಡೆಸುವುದು ಕೂಡ ಈ ಅಭಿಯಾನದ ಉದ್ದೇಶವಾಗಿದೆ.

ಶುಕ್ರ ಅಭಿಯಾನದ ಸಂದರ್ಭದ ಆಯೋಜನೆ ಆಗಿದೆ, ಅದರ ಪ್ರಕಲ್ಪದ ವರದಿ ಸಿದ್ಧಪಡಿಸಲಾಗಿದೆ ಮತ್ತು ಅದಕ್ಕಾಗಿ ನಿಧಿ ಸಿಗುವುದು ನಿಶ್ಚಿತವಾಗಿದೆ ಎಂದು ಇಸ್ರೋದ ಅಧ್ಯಕ್ಷರು ಎಸ್.ಸೋಮನಾಥ್ ಅವರು ಹೇಳಿದರು.

ಡಿಸೆಂಬರ್ ೨೦೨೪ ರಲ್ಲಿ ಅಭಿಯಾನ ಪೂರ್ಣಗೊಳಿಸುವ ಧ್ಯೇಯ !

ಎಸ್. ಸೋಮನಾಥ ಮಾತು ಮುಂದುವರೆಸುತ್ತಾ ಈ ಅಭಿಯಾನ ಡಿಸೆಂಬರ ೨೦೨೪ ವರೆಗೆ ಪೂರ್ಣಗೊಳ್ಳುವುದು ಮತ್ತು ಅದರ ನಂತರದ ವರ್ಷದಲ್ಲಿ ಅಂತರಿಕ್ಷಯಾನ ಕಕ್ಷೆಯಲ್ಲಿ ತಿರುಗುತ್ತಿರಿಸಲು ನೀಡುವ ಉದ್ದೇಶದ ಬಗ್ಗೆ ಯೋಚಿಸಲಾಗಿದೆ. ಈ ವರ್ಷ ಪೃಥ್ವಿ ಮತ್ತು ಶುಕ್ರ ಹೇಗಿದೆ ಎಂದರೆ, ಪ್ರೋಪೆಲ್ಲಂಟ್ (ನೋದಕ ಅಂದರೆ ಒಂದು ರೀತಿಯ ಇಂಧನ) ಆದಷ್ಟು ಕಡಿಮೆ ಪ್ರಮಾಣ ಉಪಯೋಗಿಸಿ ಅಂತರಿಕ್ಷಯಾನ ಶುಕ್ರನ ಕಕ್ಷೆಯಲ್ಲಿ ಇರಿಸಲು ಸಾಧ್ಯವಾಗುವುದು, ಈ ರೀತಿಯ ಸ್ಥಿತಿ ಇದರ ನಂತರ ೨೦೩೧ಯಲ್ಲಿ ನಿರ್ಮಾಣವಾಗಬಹುದು.