ಕೇರಳದಲ್ಲಿ ಸಂಘ ಕಾರ್ಯಕರ್ತನ ಹತ್ಯೆಯ ಪ್ರಕರಣದಲ್ಲಿ ಪಿ.ಎಫ್.ಐ.ಯ ೪ ಜನರ ಬಂಧನ

ಬಂಧಸಲ್ಪಟ್ಟವರ ಸಂಖ್ಯೆ ೨೦ ಕ್ಕೆ

ಪಾಲಕ್ಕಡ (ಕೇರಳ ) – ಜಿಲ್ಲೆಯಲ್ಲಿ ಕಳೆದ ತಿಂಗಳ ನಡೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ನಾಯಕನ ಹತ್ಯೆ ಪ್ರಕರಣದಲ್ಲಿ ಇನ್ನೂ ೪ ಜನರನ್ನು ಬಂಧಿಸಲಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿಸಲಾಗಿರುವ ಒಟ್ಟು ಆರೋಪಿಗಳ ಸಂಖ್ಯೆ ೨೦ ಕೆ ತಲುಪಿದೆ, ಎಂಬ ಮಾಹಿತಿ ಹೆಚ್ಚುವರಿ ಪೊಲೀಸ್ ಮಹಾ ಸಂಚಾಲಕರು (ಕಾನೂನು ಮತ್ತು ಸುವ್ಯವಸ್ಥೆ) ವಿಜಯ ಸಾಖರೆ ಇವರು ನೀಡಿದರು.

ಈ ಪ್ರಕರಣದಲ್ಲಿ ಬಂಧಿಸಲಾಗಿರುವ ಎಲ್ಲಾ ೨೦ ಜನರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ಸಂಘಟನೆ ಅಥವಾ ಅದರ ರಾಜಕೀಯ ಪಕ್ಷ ಆಗಿರುವ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರಾಗಿದ್ದಾರೆ ಅಥವಾ ಅದಕ್ಕೆ ಸಂಬಂಧಪಟ್ಟವರಾಗಿದ್ದಾರೆ, ಎಂದು ಸಾಖರೆ ಹೇಳಿದರು. ಏಪ್ರಿಲ್ ೧೫ ರಂದು ನಡೆದಿರುವ ಪಿ.ಎಫ್.ಐ ನಾಯಕ ಜುಬೈರ ಎಂಬವನ ಹತ್ಯೆಯ ಸೇಡು ತೀರಿಸಿಕೊಳ್ಳುವುದಕ್ಕಾಗಿ ಶ್ರೀನಿವಾಸನ ಎಂಬ ಸಂಘದ ಕಾರ್ಯಕರ್ತನ ಹತ್ಯೆ ಮಾಡಲಾಯಿತೆಂದು ಸಾಖರೆ ಸ್ಪಷ್ಟಪಡಿಸಿದರು.

ಸಂಪಾದಕೀಯ ನಿಲುವು

ಕೇರಳದ ಜಾತ್ಯತೀತ ಸರಕಾರ ಎಂದಿಗೂ ಪಿ.ಎಫ್.ಐ ನಂತಹ ಉಗ್ರರ ಸಂಘಟನೆಯ ವಿರುದ್ಧ ನಿಷೇಧ ಹೇರುವ ಶಿಫಾರಸ್ಸು ಕೇಂದ್ರ ಸರಕಾರಕ್ಕೆ ಮಾಡುವುದಿಲ್ಲ. ಇದನ್ನು ಅರಿತುಕೊಂಡು ಕೇಂದ್ರ ಸರಕಾರವೇ ಸಾಕ್ಷಿಗಳನ್ನು ಸಂಗ್ರಹಿಸಿ ತಾನಾಗಿಯೇ ಅದರ ಮೇಲೆ ನಿಷೇಧ ಹೇರಬೇಕು.