
ಕರಾಕಾಸ್ (ವೆನೆಜುವೆಲಾ) – ವೆನೆಜುವೆಲಾದಲ್ಲಿ ಜೂನ್ 24ರ ರಾತ್ರಿ 7.2 ಮತ್ತು 7.5 ‘ರಿಕ್ಟರ್ ಮಾಪಕ’ದ ತೀವ್ರತೆಯ ಭೂಕಂಪಗಳು ಸಂಭವಿಸಿವೆ. ಇದರಲ್ಲಿ ಇಲ್ಲಿಯವರೆಗೆ 235 ಮಂದಿ ಮೃತಪಟ್ಟಿದ್ದು, 4,300 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ವೆನೆಜುವೆಲಾ ಸಂಸತ್ತಿನ ಅಧ್ಯಕ್ಷ ಜಾರ್ಜ್ ರಾಡ್ರಿಗಸ್ ಅವರು ಮಾತನಾಡುತ್ತಾ, ಹೆಚ್ಚಿನ ಜನರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಆರಂಭಿಕ ಭೂಕಂಪದ ನಂತರ ಸಂಭವಿಸುತ್ತಿರುವ ‘ಆಫ್ಟರ್ಶಾಕ್’ಗಳಿಂದಾಗಿ ಹಾನಿಗೊಳಗಾದ ಕಟ್ಟಡಗಳು ಕುಸಿಯುವ ಅಪಾಯ ಇನ್ನೂ ಇದೆ.
ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ವೆನೆಜುವೆಲಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದ ಸಂತ್ರಸ್ತರಾದವರ ಬಗ್ಗೆ ದುಃಖ ಮತ್ತು ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ, ಈ ವಿಪತ್ತು ದೇಶದ ಆರ್ಥಿಕತೆಯ ಮೇಲೆ ಬೀರಿದ ಪರಿಣಾಮವನ್ನು ಅರಿಯಲು ವೆನೆಜುವೆಲಾ ಸರಕಾರದೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.
ವೆನೆಜುವೆಲಾದ ವಿದೇಶಾಂಗ ಸಚಿವ ಇವಾನ್ ಗಿಲ್ ಅವರು ನೆರವು ಮತ್ತು ರಕ್ಷಣಾ ಕಾರ್ಯಗಳ ಕುರಿತು ಮಾಹಿತಿ ನೀಡುತ್ತಾ, ಅಂತರಾಷ್ಟ್ರೀಯ ನೆರವು ಮತ್ತು ಸಮನ್ವಯಕ್ಕಾಗಿ ಸರಕಾರ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !