ಕರ್ನಾಲ (ಹರಿಯಾಣ)ದಲ್ಲಿ ೪ ಖಲಿಸ್ತಾನಿ ಭಯೋತ್ಪಾದಕರನ್ನು ದೊಡ್ಡ ಶಸ್ತ್ರಸಂಗ್ರಹದೊಂದಿಗೆ ಬಂಧಿಸಲಾಯಿತು !

ದೆಹಲಿಯಲ್ಲಿ ಬಾಂಬ್‌ಸ್ಫೋಟ ನಡೆಸುವ ಷಡ್ಯಂತ್ರ ಬಯಲು !

ಕರ್ನಾಲ (ಹರಿಯಾಣಾ) – ರಾಜಧಾನಿ ದೆಹಲಿಯಲ್ಲಿ ಬಾಂಬ್‌ಸ್ಫೋಟಗಳನ್ನು ನಡೆಸುವ ದೊಡ್ಡ ಷಡ್ಯಂತ್ರವನ್ನು ಧ್ವಂಸಗೊಳಿಸಲಾಯಿತು. ಇಲ್ಲಿ ಕರ್ನಾಲ ಮತ್ತು ಪಂಜಾಬ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಗುರಪ್ರೀತ, ಅಮನದೀಪ, ಪರಮಿಂದರ ಮತ್ತು ಭೂಪಿಂದರ ಎಂಬ ೪ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ನಾಲ್ವರು ಕರ್ನಾಲದಲ್ಲಿನ ಬಸ್ತಾರಾ ಟೋಲನಾಕೆಯಿಂದ ಒಂದು ಇನೋವಾ ವಾಹನದಿಂದ ಹೋಗುತ್ತಿರುವಾಗ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಇದರಲ್ಲಿ ಆರ್‌.ಡಿ. ಎಕ್ಸ್‌ ಇರುವುದಾಗಿಯೂ ಹೇಳಲಾಗುತ್ತಿದೆ. ಈ ಮದ್ದುಗುಂಡುಗಳು ಎಷ್ಟೊಂದು ದೊಡ್ಡ ಪ್ರಮಾಣದಲ್ಲಿದ್ದವು ಅಂದರೆ ಅನೇಕ ನಗರಗಳಲ್ಲಿ ಈ ಮೂಲಕ ದೊಡ್ಡ ಸ್ಫೋಟಗಳನ್ನು ನಡೆಸಬಹುದಾಗಿತ್ತು. ಈ ಭಯೋತ್ಪಾದಕರು ನಾಂದೇಡ(ಮಹಾರಾಷ್ಟ್ರ)ಗೆ ಹೋಗುವವರಿದ್ದರು. ಅವರು ದೆಹಲಿಯಲ್ಲಿ ದೊಡ್ಡ ಸ್ಫೋಟವನ್ನು ನಡೆಸುವವರಿದ್ದರು, ಎಂದು ಪೊಲೀಸರಿಗೆ ಸಂಶಯವಿತ್ತು.

ಬಂಧಿಸಲಾದ ಖಲಿಸ್ತಾನಿ ಭಯೋತ್ಪಾದಕರು ನಿರ್ಬಂಧಿಸಲಾದ ‘ಬಬ್ಬರ ಖಾಲಸಾ ಇಂಟರನ್ಯಾಶನಲ್‌; ಎಂಬ ಸಂಘಟನೆಗೆ ಸಂಬಂಧಿಸಿದ್ದಾರೆ. ಈ ನಾಲ್ವರೂ ಪಂಜಾಬಿನವರಾಗಿದ್ದಾರೆ. ಇವರು ಹರವಿಂದರ ಸಿಂಗ ಅಲಿಯಾಸ ರಿಂಡಾ ಎಂಬ ಭಯೋತ್ಪಾದಕನೊಂದಿಗೆ ಸಂಬಂಧಿಸಿದ್ದಾರೆ. ರಿಂಡಾ ಎಂಬ ಖಲಿಸ್ತಾನಿ ಭಯೋತ್ಪಾದಕನು ಸದ್ಯ ಪಾಕಿಸ್ತಾನದಲ್ಲಿ ಅಡಗಿದ್ದಾನೆ. ರಿಂಡಾನು ಈ ಶಸ್ತ್ರಗಳನ್ನು ಪಾಕಿಸ್ತಾನದಿಂದ ಪಂಜಾಬಿನಲ್ಲಿರುವ ಫಿರೋಜಪುರದಲ್ಲಿ ಡ್ರೋನ ಮೂಲಕ ಕಳುಹಿಸಿದ್ದನು.

ಸಂಪಾದಕೀಯ ನಿಲುವು

ಪುನಃ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಖಲಿಸ್ತಾನಿ ಭಯೋತ್ಪಾದಕರ ಸಂಚಲನೆಯನ್ನು ಬಗ್ಗುಬಡಿಲು ಕೇಂದ್ರ ಸರಕಾರವು ಕಠೋರ ಕ್ರಮಗಳನ್ನು ಕೈಗೊಳ್ಳುವುದು ಆವಶ್ಯಕವಾಗಿದೆ !