೯೫ ದೇವಸ್ಥಾನಗಳು ಧ್ವಂಸ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಫೆಬ್ರವರಿ ೧೨, ೨೦೨೬ ರಂದು ನಡೆದ ಸಾರ್ವತ್ರಿಕ ಚುನಾವಣೆಗಳ ನಂತರ ಅಲ್ಪಸಂಖ್ಯಾತರ ವಿರುದ್ಧ ಇಲ್ಲಿಯವರೆಗೆ ೬೪೫ ಘಟನೆಗಳು ನಡೆದಿರುವುದು ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಸಮಾಜ ಮತ್ತು ಇಸ್ಕಾನ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ವಿಷಯಗಳನ್ನು ಹರಡಲಾಗುತ್ತಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳಾದ ‘ಎ.ಎಸ್.ಕೆ.’, ಬಾಂಗ್ಲಾದೇಶ ಹಿಂದೂ-ಬೌದ್ಧ-ಕ್ರಿಶ್ಚಿಯನ್ ಐಕ್ಯ ಪರಿಷತ್ ಮತ್ತು ಎಚ್.ಆರ್.ಸಿ.ಬಿ.ಎಮ್. ನೀಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
೧. ಮುಸಲ್ಮಾನರ ಸ್ಥಳೀಯ ಸಭೆಗಳಲ್ಲಿ ಅಲ್ಪಸಂಖ್ಯಾತರ ಸಾಮಾಜಿಕ ಬಹಿಷ್ಕಾರದ ಮತ್ತು ಅವರ ಸಂಘಟನೆಗಳ ನಿರ್ಬಂಧದ ಬೇಡಿಕೆಗಳು ಕೇಳಿ ಬರುತ್ತಿವೆ. ಹಲವು ಕಡೆಗಳಲ್ಲಿ ಹಿಂದೂಗಳಿಗೆ ಬೆದರಿಕೆಗಳನ್ನೂ ಹಾಕಲಾಗಿದೆ.
೨. ಮಾನವಾಧಿಕಾರ ಸಂಘಟನೆಗಳ ಮಾಹಿತಿಯ ಅನುಸಾರ, ಹಿಂದೂಗಳ ಭೂಮಿಯನ್ನು ಕಬಳಿಸಿದ ೧೩೨ ಘಟನೆಗಳು ಬೆಳಕಿಗೆ ಬಂದಿವೆ. ಹಲವು ಕುಟುಂಬಗಳು ತಮ್ಮನ್ನು ಮನೆಗಳಿಂದ ಹೊರಹಾಕುವ ಬೆದರಿಕೆ ಬಂದಿರುವ ಬಗ್ಗೆ ಮತ್ತು ಮನೆಗಳನ್ನು ಧ್ವಂಸಗೊಳಿಸಿರುವ ಬಗ್ಗೆ ದೂರುಗಳನ್ನು ದಾಖಲಿಸಿವೆ. ೯೫ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಅಪವಿತ್ರಗೊಳಿಸಲಾಗಿದೆ.
೩. ಕುಮಿಲ್ಲಾದ ನಿವಾಸಿಯಾದ ನಂದಿತ ಕುಮಾರ ರವರ ಅನುಸಾರ, ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂ ವಿರೋಧಿ ವಾತಾವರಣವು ಅತ್ಯಧಿಕ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಸಂಚು ರೂಪಿಸಿರುವ ಬಗ್ಗೆ ಸಂದೇಹ ಹುಟ್ಟಿಸುವ ಸಂದೇಶಗಳನ್ನು ಸತತವಾಗಿ ಹರಡಲಾಗುತ್ತಿದೆ. ಇಂತಹ ವಿಷಯಗಳ ಮೇಲೆ ತಕ್ಷಣವೇ ನಿಯಂತ್ರಣ ಹೇರದಿದ್ದರೆ ಪರಿಸ್ಥಿತಿ ಯಾವಾಗ ಬೇಕಾದರೂ ಹದಗೆಡಬಹುದು. ಗಾಯಿಬಾಂಧಾದಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿರುವುದು, ದೊಡ್ಡ ರಾಜಕೀಯ ಸಂಚಿನ ಭಾಗವಾಗಿದೆ ಎಂದು ಆರೋಪಿಸಲಾಗಿದೆ.
೪. ಬಾಂಗ್ಲಾದೇಶ ಹಿಂದೂ – ಬೌದ್ಧ – ಕ್ರಿಶ್ಚಿಯನ್ ಐಕ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಮೋನಿಂದ್ರ ಕುಮಾರ ನಾಥ ರವರ ಅನುಸಾರ, ಯಾವುದೇ ಸಮುದಾಯಕ್ಕೆ ಕೇವಲ ನೇರ ಹಿಂಸಾಚಾರ ಮಾತ್ರವಲ್ಲದೆ, ಸತತವಾಗಿ ಬರುವ ಬೆದರಿಕೆಗಳೂ ಕೂಡ ಭಯಕ್ಕೆ ಕಾರಣವಾಗುತ್ತವೆ. ಬಹಿರಂಗವಾಗಿ ಬೆದರಿಕೆ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಜನರಿಗೆ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ.
ಆಡಳಿತದ ನಿಷ್ಕ್ರಿಯತೆ
ಆಡಳಿತ ಮಂಡಳಿಯು ಆರೋಪಿಗಳ ವಿರುದ್ಧ ಸೂಕ್ತ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದರಿಂದ, ಅಲ್ಪಸಂಖ್ಯಾತ ಸಮುದಾಯದಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚಾಗುತ್ತಿದ್ದು, ಅವರ ನಂಬಿಕೆಯೂ ಕುಸಿಯುತ್ತಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia