ಇಸ್ಲಾಂ ತೊರೆದ ವ್ಯಕ್ತಿಯನ್ನು ಥಳಿಸಿದ ಮತಾಂಧರ ಗುಂಪು

ಕೊಲ್ಲಮ್ (ಕೇರಳ) – ಇಲ್ಲಿ ಓರ್ವ ಮುಸಲ್ಮಾನನು ಇಸ್ಲಾಂ ತೊರೆದಿರುವುದರಿಂದ ಮತಾಂಧರ ಗುಂಪು ಅವನ ಮೇಲೆ ಹಲ್ಲೆ ನಡೆಸಿದೆ. ಆ ವ್ಯಕ್ತಿಯ ಹೆಸರು ಅಸ್ಕರ ಅಲೀ. ಹಲ್ಲೆ ಪ್ರಕರಣದಲ್ಲಿ ಪೊಲೀಸರಲ್ಲಿ ತಕರಾರನ್ನು ನೋಂದಿಸಲಾಯಿತು.

ಕೇರಳದ ಮಳಪ್ಪುರಮ್ ಜಿಲ್ಲೆಯಲ್ಲಿ ವಾಸಿಸುವ ಅಸ್ಕರ ಅಲೀ ಜಿಲ್ಲೆಯಲ್ಲಿನ ಒಂದು ಇಸ್ಲಾಮೀ ಸಂಸ್ಥೆಯಲ್ಲಿ ೧೨ ವರ್ಷಗಳ ಇಸ್ಲಾಮಿನ ಅಭ್ಯಾಸವನ್ನು ಪೂರ್ಣಗೊಳಿಸಿದನು; ಆದರೆ ನಂತರ ಅವನು ಇಸ್ಲಾಂ ತೊರೆದನು. ಅಲೀ ಮೆ ೧ರಂದು ಕೊಲ್ಲಮ್‌ಗೆ ಬಂದಿದ್ದನು. ಅಲ್ಲಿ ಅವನು ‘ಎಸೆಂಸ್ ಗ್ಲೋಬಲ್’ ಸಂಘಟನೆಯು ಆಯೋಜಿಸಿದ ಕಾರ್ಯಕ್ರಮದಲ್ಲಿ ತನ್ನ ಧಾರ್ಮಿಕ ಶಿಕ್ಷಣದ ಸಮಯದಲ್ಲಿ ಅವನಿಗೆ ಆದ ಅನುಭವದ ಮೇಲೆ ಮಾತನಾಡುವವನಿದ್ದನು. ಆಗ ಕೆಲವರು ಅವನನ್ನು ಅಪಹರಿಸಲು ಪ್ರಯತ್ನಿಸಿದರು. ಆಗ ಅವನ ಮೇಲೆ ಹಲ್ಲೆ ನಡೆಸಿದರು. ಅವನ ಮೊಬೈಲನ್ನು ಕೂಡ ಒಡೆದು ಹಾಕಿದರು. ಬಟ್ಟೆ ಹರಿದು ಹಾಕಿದರು. ಸ್ಥಳೀಯರು ಅದನ್ನು ನೋಡಿ ಕೂಗಾಡಿದರು. ಅನಂತರ ಪೊಲೀಸರು ಅಲೀಯನ್ನು ಬಿಡುಗಡೆ ಮಾಡಿಸಿದರು.

ಇಸ್ಲಾಮೀ ಸಂಸ್ಥೆಯಲ್ಲಿ ಲೈಂಗಿಕ ಕಿರುಕುಳ ! – ಅಲೀ

ಆನಂತರ ಅಲೀ ಪೊಲೀಸರ ಸಂರಕ್ಷಣೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದನು. ಆಗ ಶಿಕ್ಷಣ ಪಡೆದುಕೊಳ್ಳುವಾಗ ನನಗೆ ಲೈಂಗಿಕ ಕಿರುಕುಳ ನೀಡಲಾಯಿತು. ನಾನು ಇಸ್ಲಾಂ ಅನ್ನು ಬಿಡುವ ತೀರ್ಮಾನ ನನ್ನ ಕುಟುಂಬದವರಿಗೆ ಇಷ್ಟವಾಗಲಿಲ್ಲ. ಆದ್ದರಿಂದ ನಾನು ಅವರೊಂದಿಗೆ ವಾಸಿಸುತ್ತಿಲ್ಲ ಎಂದು ಹೇಳಿದನು.

ಸಂಪಾದಕೀಯ ನಿಲುವು

ಲಕ್ಷಗಟ್ಟಲೆ ಹಿಂದೂಗಳು ಇಲ್ಲಿಯವರೆಗೂ ಧರ್ಮವನ್ನು ತ್ಯಜಿಸಿ ಕ್ರೈಸ್ತ ಮತ ಅಥವಾ ಬೇರೆ ಮತವನ್ನು ಸ್ವೀಕರಿಸಿದರು; ಆದರೆ ಹಿಂದೂಗಳು ಎಂದಿಗೂ ಅವರ ಮೇಲೆ ಹಲ್ಲೆ ನಡೆಸಿರುವುದು ಕೇಳಲು ಸಿಕ್ಕಿಲ್ಲ; ಆದರೆ ಇಸ್ಲಾಂ ತೊರೆದರೆ ಥಳಿಸುತ್ತಾರೆ! ಈ ವಿಷಯದಲ್ಲಿ ಜಾತ್ಯಾತೀತರು ಮಾತನಾಡಬೇಕು !