ಭಾಗ್ಯನಗರ (ತೆಲಂಗಾಣಾ)ದಲ್ಲಿ ಮುಸಲ್ಮಾನ ತರುಣಿಯೊಂದಿಗೆ ವಿವಾಹವಾದ ಹಿಂದೂ ತರುಣನ ಹತ್ಯೆ

ಹತ್ಯೆಯಲ್ಲಿ ತರುಣಿಯ ಕುಟುಂಬದವರ ಸಹಭಾಗ

ಭಾಗ್ಯನಗರ (ತೆಲಂಗಾಣಾ) – ಇಲ್ಲಿ ಮುಸಲ್ಮಾನ ತರುಣಿಯೊಂದಿಗೆ ವಿವಾಹವಾದದ್ದರಿಂದ ೨೫ ವರ್ಷದ ನಾಗರಾಜು ಎಂಬ ಯುವಕನ ಚಾಕೂ ಚುಚ್ಚಿ ಹತ್ಯೆ ಮಾಡಲಾಯಿತು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಅವರು ತರುಣಿಯ ಕುಟುಂಬದವರಾಗಿದ್ದಾರೆ. ನಾಗರಾಜುವು ೨೩ ವರ್ಷದ ಸಯ್ಯದ ಸುಲತಾನ ಎಂಬಾಕೆಯೊಂದಿಗೆ ೨ ತಿಂಗಳ ಹಿಂದೆ ವಿವಾಹವಾಗಿದ್ದನು. ಈ ಇಬ್ಬರ ನಡುವೆ ಮಹಾವಿದ್ಯಾಲಯದಿಂದ ಪರಿಚಯವಿತ್ತು.

ಹತ್ಯೆಯ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ತನಿಖೆ ಮಾಡಿ ! – ಸಂಸದರಾದ ಟಿ. ರಾಜಾ ಸಿಂಹ

ಭಾಗ್ಯನಗರದಲ್ಲಿನ ಭಾಜಪದ ಸಂಸದರಾದ ಟಿ. ರಾಜಾ ಸಿಂಹರವರು ಈ ಹತ್ಯೆಯ ಹಿಂದೆ ತರುಣಿಯ ಕುಟುಂಬದವರು ಸಹಭಾಗಿಯಾಗಿದ್ದಾರೆಯೇ ಅಥವಾ ಯಾವುದಾದರೂ ಧಾರ್ಮಿಕ ಸಂಘಟನೆಯಿದೆ ? ಎಂಬುದರ ಆಳವಾದ ವಿಚಾರಣೆ ನಡೆಯಬೇಕು, ಎಂದು ಮನವಿ ಮಾಡಿದ್ದಾರೆ.

ಜಾತ್ಯಾತೀತರು ಸುಮ್ಮನೆ ಕುಳಿತಿದ್ದಾರೆ ! – ಭಾಜಪ

ಭಾಜಪದ ರಾಷ್ಟ್ರೀಯ ವಕ್ತಾರರಾದ ಶಹಜಾದ ಪೂನಾವಾಲರವರು ಟ್ವೀಟ್‌ ಮಾಡಿ, ಓರ್ವ ಹಿಂದೂ ಯುವತಿಯ ಮುಸಲ್ಮಾನ ಪತಿಯನ್ನು ಯುವತಿಯ ಕುಟುಂಬದವರು ಕೊಂದಿದ್ದರೆ, ಇಲ್ಲಿಯ ವರೆಗೆ ಏನಾಗುತ್ತಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್‌, ಆಮ ಆದಮೀ ಪಕ್ಷ, ತೃಣಮೂಲ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳು ಇಸ್ಲಾಮದ್ವೇಷದ ಬಗ್ಗೆ ಆರೋಪಿಸುತ್ತ ಸಂಯುಕ್ತ ರಾಷ್ಟ್ರಗಳ ವರೆಗೆ ತಲುಪುತ್ತಿದ್ದವು; ಆದರೆ ಹಿಂದೂವು ಕೊಲ್ಲಲ್ಪಟ್ಟಿದ್ದರಿಂದ ಈ ಅಪರಾಧವು ‘ಜಾತ್ಯಾತೀತ’ವಾಗಿದೆ. ಆದುದರಿಂದಲೇ ಜಾತ್ಯಾತೀತರು ಸುಮ್ಮನೆ ಕುಳಿತಿದ್ದಾರೆ’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ತರುಣಿಯು ಮುಸಲ್ಮಾನ ತರುಣನೊಂದಿಗೆ ವಿವಾಹವಾದಾಗ ಅದು ‘ಪ್ರೇಮ’ವಾಗಿರುತ್ತದೆ ಮತ್ತು ಮುಸಲ್ಮಾನ ತರುಣಿಯು ಹಿಂದೂ ತರುಣನೊಂದಿಗೆ ವಿವಾಹವಾದರೆ ಅದು ಮತಾಂಧರ ದೃಷ್ಟಿಯಲ್ಲಿ ‘ಧರ್ಮದ್ರೋಹ’ವಾಗಿರುತ್ತದೆ ಮತ್ತು ಅದರ ಶಿಕ್ಷೆಯನ್ನು ಹಿಂದೂ ತರುಣರಿಗೆ ಈ ರೀತಿಯಲ್ಲಿ ಭೋಗಿಸಬೇಕಾಗುತ್ತದೆ !

ದೇಶದಲ್ಲಿ ಇಂತಹ ಘಟನೆಗಳು ಸತತವಾಗಿ ನಡೆಯುತ್ತಿವೆ, ಈ ಬಗ್ಗೆ ಜಾತ್ಯಾತೀತವಾದಿಗಳು ಯಾವಾಗಲೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !