(ಎನ್‌ಸಿಇಆರ್‌ಟಿ ಎಂದರೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ )

ನವದೆಹಲಿ – ‘ಎನ್‌ಸಿಇಆರ್‌ಟಿ’ ಮೊದಲ ಬಾರಿಗೆ 9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ 1975-77ರ ಅವಧಿಯ ತುರ್ತು ಪರಿಸ್ಥಿತಿಯ ಮಾಹಿತಿಯನ್ನು ಸೇರಿಸಿದೆ. ಮಂಡಳಿಯ ಅಧಿಕಾರಿಯೊಬ್ಬರು ಇದನ್ನು ಖಚಿತಪಡಿಸಿದ್ದಾರೆ. ‘ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಆಂಡ್ ಬಿಯಾಂಡ್’ ಎಂಬ ಹೊಸ ಪುಸ್ತಕದಲ್ಲಿ ಇದನ್ನು ಸೇರಿಸಲಾಗಿದೆ. ಇದರಲ್ಲಿ ತುರ್ತು ಪರಿಸ್ಥಿತಿಯನ್ನು ‘ಭಾರತೀಯ ಪ್ರಜಾಪ್ರಭುತ್ವ ಎದುರಿಸಿದ ಅತಿ ದೊಡ್ಡ ಸವಾಲುಗಳಲ್ಲಿ ಒಂದು’ ಎಂದು ಬಣ್ಣಿಸಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಒತ್ತಡ ಹೆಚ್ಚಾಯಿತು ಮತ್ತು ಜನರ ಸ್ವಾತಂತ್ರ್ಯ ಸೀಮಿತವಾಯಿತು!
ಈ ಪುಸ್ತಕದಲ್ಲಿ, 1970ರ ದಶಕದ ಆರಂಭದಲ್ಲಿ ಇಂದಿರಾ ಗಾಂಧಿ ಸರಕಾರದ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗುತ್ತಿತ್ತು ಎಂದು ಬರೆಯಲಾಗಿದೆ. ನಿರುದ್ಯೋಗ, ಹಣದುಬ್ಬರ ಮತ್ತು ದುರಾಡಳಿತದ ಆರೋಪಗಳಿಂದಾಗಿ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆದವು. ತದನಂತರ ಜೂನ್ 1975 ರಲ್ಲಿ ಆಂತರಿಕ ಅಶಾಂತಿಯ ಆಧಾರದ ಮೇಲೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ಈ ಅವಧಿಯಲ್ಲಿ ಬಹುತೇಕ ಮೂಲಭೂತ ಹಕ್ಕುಗಳನ್ನು ರದ್ದುಗೊಳಿಸಲಾಯಿತು, ಪತ್ರಿಕೆಗಳ ಮೇಲೆ ನಿರ್ಬಂಧಗಳನ್ನು ಹೇರಲಾಯಿತು ಮತ್ತು ಅನೇಕ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಲಾಯಿತು. ಈ ಅವಧಿಯಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಒತ್ತಡ ಹೆಚ್ಚಾಯಿತು ಮತ್ತು ಜನರ ಸ್ವಾತಂತ್ರ್ಯ ಸೀಮಿತವಾಯಿತು.
ಜಯಪ್ರಕಾಶ ನಾರಾಯಣ್ ಅವರ ಆಂದೋಲನದ ಉಲ್ಲೇಖವೂ ಇದೆ!
ಪುಸ್ತಕದಲ್ಲಿ ಜನನಾಯಕ ಜಯಪ್ರಕಾಶ್ ನಾರಾಯಣ್ ಅವರ ಕುರಿತು, ಅವರು ವಿದ್ಯಾರ್ಥಿಗಳನ್ನು ಮತ್ತು ಸಾಮಾನ್ಯ ಜನರನ್ನು ಸಂಘಟಿಸಿದರು ಹಾಗೂ ಬಿಹಾರ್ ಮತ್ತು ಗುಜರಾತ್ ರಾಜ್ಯಗಳಲ್ಲಿ ದೊಡ್ಡ ಆಂದೋಲನವನ್ನು ರೂಪಿಸಿದರು ಎಂದು ಹೇಳಲಾಗಿದೆ. 1977 ರಲ್ಲಿ ತುರ್ತು ಪರಿಸ್ಥಿತಿ ಮುಗಿದ ನಂತರ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲಾಯಿತು. ಜನರು ಮತದಾನದ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಮತ್ತು ಆಗಿನ ಆಡಳಿತಾರೂಢ ಸರಕಾರವು ಚುನಾವಣೆಯಲ್ಲಿ ಸೋತಿತು.
ಪ್ರಜಾಪ್ರಭುತ್ವದ ಮುಂದಿರುವ ಇತರ ಸವಾಲುಗಳೂ ಸೇರ್ಪಡೆ!
ತುರ್ತು ಪರಿಸ್ಥಿತಿಯ ಹೊರತಾಗಿ, ಪುಸ್ತಕದಲ್ಲಿ ಪ್ರಜಾಪ್ರಭುತ್ವ ಎದುರಿಸುತ್ತಿರುವ ಇತರ ಸವಾಲುಗಳ ಬಗ್ಗೆಯೂ ಚರ್ಚಿಸಲಾಗಿದೆ. ಇದರಲ್ಲಿ ‘ಫೇಕ್ ನ್ಯೂಸ್’ (ಸುಳ್ಳು ಸುದ್ದಿ), ತಪ್ಪು ಮಾಹಿತಿ, ಸಾರ್ವಜನಿಕ ಆಸ್ತಿಪಾಸ್ತಿ ನಾಶ, ನಿಯಮಗಳ ಉಲ್ಲಂಘನೆ, ಬಡತನ, ಪ್ರಾದೇಶಿಕತೆ, ಸಾಮಾಜಿಕ ತಾರತಮ್ಯ ಮತ್ತು ಲಿಂಗ ಅಸಮಾನತೆ ಸೇರಿವೆ.
‘ಎನ್‌ಸಿಇಆರ್‌ಟಿ’ ಮೊದಲ ಬಾರಿಗೆ ‘ಡೆಮಾಕ್ರಸಿ ಆಂಡ್ ಯು’ (ಪ್ರಜಾಪ್ರಭುತ್ವ ಮತ್ತು ನೀವು) ಎಂಬ ಹೊಸ ವಿಭಾಗವನ್ನೂ ಸೇರಿಸಿದೆ. ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅವರ ಪಾತ್ರವನ್ನು ಅರ್ಥಮಾಡಿಸುವುದು ಇದರ ಉದ್ದೇಶವಾಗಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”