ಕಿರಿಯ ನೌಕರರ ವಿರುದ್ಧ ಮೊಕದ್ದಮೆ; ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಮೇಲೆ ಆರೋಪ

ಸಂಭಲ್ (ಉತ್ತರ ಪ್ರದೇಶ) – ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಮೊಕದ್ದಮೆ ದಾಖಲಾಗಿರುವುದರ ಕುರಿತು ಪ್ರತಿಕ್ರಿಯಿಸುತ್ತಾ, ‘ಈ ಪ್ರಕರಣದಲ್ಲಿ ಕೇವಲ ಕಿರಿಯ ನೌಕರರ ಹೆಸರುಗಳನ್ನು ತೆಗೆದುಕೊಳ್ಳಲಾಗಿದೆ, ಆದರೆ ಕಳ್ಳತನಕ್ಕೆ ಕಾರಣರಾದ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ’ ಎಂದು ಆರೋಪಿಸಿದರು. ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ನಡೆಸುತ್ತಿರುವ ‘ಗೋ ಧರ್ಮ ಯಾತ್ರೆ’ ಸಂಭಲ್ ಗೆ ತಲುಪಿದಾಗ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಶಂಕರಾಚಾರ್ಯರು, ಧರ್ಮಾಚಾರ್ಯರು, ಸಂತರು, ಮಹಂತರು, ಪೂಜಾರಿಗಳನ್ನು ಟ್ರಸ್ಟ್ ದಿಂದ ದೂರವಿಡಲಾಗಿದೆ !
ಶಂಕರಾಚಾರ್ಯರು ಮಾತನಾಡಿ, ದೇಣಿಗೆ ಕಳ್ಳತನದ ಬಗ್ಗೆ ಏನು ಹೇಳುವುದು? ಶ್ರೀರಾಮ ಮಂದಿರದ ಬಗ್ಗೆ ಪ್ರಾರಂಭದಿಂದಲೂ ಮನಬಂದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶಾಸ್ತ್ರಗಳ ಪಾಲನೆಯೂ ಆಗಿಲ್ಲ, ವೇದಗಳ ಪಾಲನೆಯೂ ಆಗಿಲ್ಲ ಮತ್ತು ಧರ್ಮಗುರುಗಳ ಸಲಹೆಯನ್ನೂ ಪರಿಗಣಿಸಲಿಲ್ಲ. ರಾಜಕೀಯ ಮುಖಂಡರು ಆಯ್ಕೆ ಮಾಡಿದ ಜನರನ್ನು ಸೇರಿಸಿ ಟ್ರಸ್ಟ್ ಸ್ಥಾಪಿಸಲಾಯಿತು, ಹಾಗೆಯೇ ಸಂತರು, ಮಹಂತರು ಮತ್ತು ಪೂಜಾರಿಗಳನ್ನು ಇದರಿಂದ ದೂರವಿಡಲಾಯಿತು. ಒಂದು ವೇಳೆ ಎಲ್ಲವನ್ನೂ ಪ್ರಾಮಾಣಿಕವಾಗಿ ಮಾಡಬೇಕಾಗಿದ್ದರೆ, ಈ ಟ್ರಸ್ಟ್ ಅನ್ನು ನಾಲ್ವರು ಶಂಕರಾಚಾರ್ಯರು, ರಾಮಾನಂದಾಚಾರ್ಯರು ಮತ್ತು ಇತರ ಧರ್ಮಗುರುಗಳ ವಶಕ್ಕೆ ನೀಡಬಹುದಿತ್ತು. ಆದರೆ ತಮಗೆ ವಿಶ್ವಾಸವಿರುವ ರಾಜಕೀಯ ಸಹೋದ್ಯೋಗಿಗಳನ್ನು ನೇಮಕ ಮಾಡಲಾಯಿತು, ಇದರಿಂದ ಪ್ರಾರಂಭದಿಂದಲೇ ಅವರ ಉದ್ದೇಶವೇನೆಂಬುದು ಸ್ಪಷ್ಟವಾಗುತ್ತದೆ,’ ಎಂದು ಅವರು ಹೇಳಿದರು.
ದೊಡ್ಡ ಜನರೇ ದೊಡ್ಡ ಕಳ್ಳತನ ಮಾಡುತ್ತಾರೆ !
ದೇಣಿಗೆ ಕಳ್ಳತನದ ವಿರುದ್ಧ ಮೊಕದ್ದಮೆ ದಾಖಲಾಗಿರುವುದನ್ನು ಉಲ್ಲೇಖಿಸಿ ಶಂಕರಾಚಾರ್ಯರು, ಯಾರು ನೋಟುಗಳನ್ನು ಎಣಿಸಿದ್ದಾರೋ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ನಮಗೆ ಕೇಳಿ ಬಂದಿದೆ. ದೇಣಿಗೆ ಪೆಟ್ಟಿಗೆಯಿಂದ ತೆಗೆದ ನೋಟುಗಳನ್ನು ಸರಿಮಾಡಿದರು, ಎಣಿಸಿದರು ಮತ್ತು ಕಂತೆ ಕಟ್ಟಿದರು. ಆ ನಂತರ ನಡೆದ ದೊಡ್ಡ ಕಳ್ಳತನದ ಬಗ್ಗೆ ನಮಗೆ ವಿವರಿಸಿ. ದೊಡ್ಡ ದೊಡ್ಡ ಕಳ್ಳತನಗಳನ್ನು ದೊಡ್ಡ ಜನರೇ ಮಾಡುತ್ತಾರೆ. ಅವರ ವಿರುದ್ಧ ಯಾವುದೇ ಮೊಕದ್ದಮೆ ದಾಖಲಾಗಿಲ್ಲ. ಒಂದು ವೇಳೆ ಈ ಆರೋಪಗಳಲ್ಲಿ ಸತ್ಯಾಂಶವಿದ್ದಿದ್ದರೆ, ಮೊದಲನೇ ದಿನವೇ, ಅನಾಮಧೇಯ ವ್ಯಕ್ತಿಗಳ ವಿರುದ್ಧವಾದರೂ ಮೊಕದ್ದಮೆ ದಾಖಲಿಸಬೇಕಾಗಿತ್ತು. ಆದರೆ ತನಿಖೆಯ ನಂತರ ಮೊಕದ್ದಮೆ ದಾಖಲಾಗಿದೆ. ತನಿಖೆ ಮಾಡುವಂತಹದ್ದು ಏನೋ ಇತ್ತು ಎಂಬುದು ಇವೆಲ್ಲವೂ ತೋರಿಸುತ್ತದೆ. ವಿರೋಧ ಪಕ್ಷದವರು ಕೇವಲ ಅಕ್ರಮಗಳನ್ನು ಮುನ್ನೆಲೆಗೆ ತಂದು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ ಎಂದರು.
ಸನಾತನ ಧರ್ಮಕ್ಕಾಗಿ ಕಟಿಬದ್ಧರಾಗಿರುವ ಅಭ್ಯರ್ಥಿಗಳಿಗೆ ಜನತೆ ಬೆಂಬಲ ನೀಡಬೇಕು !
ಒಂದು ವೇಳೆ ಭಾಜಪ ಹಸುವನ್ನು ‘ರಾಜಮಾತೆ’ ಎಂದು ಘೋಷಿಸಿದರೆ, ಅದಕ್ಕೆ ಇದರ ಹೆಚ್ಚಿನ ಲಾಭ ಸಿಗಬಹುದು; ಆದರೆ ಭಾಜಪ ಹಾಗೆ ಮಾಡುತ್ತಿಲ್ಲ. ಒಂದು ವೇಳೆ ಬೇರೆ ಯಾವುದೇ ಪಕ್ಷಕ್ಕೆ ನಮ್ಮ ‘ಗೋ ಧರ್ಮ ಯಾತ್ರೆ’ಯ ರಾಜಕೀಯ ಲಾಭ ಪಡೆಯಬೇಕಾಗಿದ್ದರೆ, ನಾವು ಅವರನ್ನು ತಡೆಯುವುದಿಲ್ಲ. ಮತದಾರರು ತಮ್ಮ ಬೆಂಬಲವನ್ನು ಸನಾತನ ಧರ್ಮಕ್ಕಾಗಿ ಕಟಿಬದ್ಧರಾಗಿರುವ ‘ನಿಜವಾದ’ ಅಭ್ಯರ್ಥಿಗಳಿಗಾಗಿಯೇ ಕಾಯ್ದಿರಿಸಬೇಕು ಮತ್ತು ಇಂತಹ ದೃಷ್ಟಿಕೋನದಿಂದ ಕೊನೆಗೆ ಒಂದು ಪರ್ಯಾಯ ರಾಜಕೀಯ ನಾಯಕತ್ವ ನಿರ್ಮಾಣವಾಗಲಿದೆ ಎಂದು ಶಂಕರಾಚಾರ್ಯರು ಹೇಳಿದರು.
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!