ಭಿಲವಾಡಾ (ರಾಜಸ್ತಾನ) – ಇಲ್ಲಿನ ಸಾಂಗಾನೇರ ಭಾಗದಲ್ಲಿ ೨ ತರುಣರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಅವರ ದ್ವಿಚಕ್ರವನ್ನು ಸುಟ್ಟಿರುವ ಘಟನೆಯ ನಂತರ ಇಲ್ಲಿ ಒತ್ತಡದ ವಾತಾವರಣವಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವ ಮನವಿ ಮಾಡಲು ಇಲ್ಲಿ ಪ್ರತಿಭಟನೆ ಆಂದೋಲನಗಳನ್ನು ಮಾಡಲಾಗುತ್ತದೆ. ಈ ಘಟನೆಯಿಂದಾಗಿ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತನ್ನು ಇಡಲಾಗಿದೆ. ಹಾಗೆಯೇ ಇಲ್ಲಿನ ಇಂಟರನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಆಕ್ರಮಣವು ಯಾವ ಕಾರಣದಿಂದಾಗಿ ನಡೆಯಿತು, ಎಂಬುದು ಇಲ್ಲಿಯ ವರೆಗೂ ಸ್ಪಷ್ಟವಾಗಿಲ್ಲ. ಗಾಯಗೊಂಡ ತರುಣರ ಹೆಸರು ಸದ್ದಾಮ ಮತ್ತು ಆಝಾದ ಎಂದು ಇದೆ.
#Rajasthan | After Jodhpur, Bhilwara Tense Over Attack on Two Youths; Internet Suspended https://t.co/h01aQpCUYT pic.twitter.com/wgmQlfkObP
— News18.com (@news18dotcom) May 5, 2022
‘ದಂಗೆಗಳನ್ನು ನಡೆಸುವುದು ಸಂಘ ಹಾಗೂ ಭಾಜಪದ ಧೊರಣೆಯಾಗಿದೆ !’ (ಅಂತೆ) – ಮುಖ್ಯಮಂತ್ರಿ ಗೆಹಲೋತ
ಈ ಪ್ರಕರಣದಲ್ಲಿ ರಾಜಸ್ತಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳಾದ ಅಶೋಕ ಗೆಹಲೋತರವರು ಮಾತನಾಡುತ್ತ, ರಾಜ್ಯದಲ್ಲಿ ದಂಗೆಗಳನ್ನು ನಡೆಸಲು ರಾ. ಸ್ವ. ಸಂಘ ಹಾಗೂ ಭಾಜಪವು ಪ್ರಯತ್ನಿಸುತ್ತಿದೆ. ಈ ಮೂಲಕ ಅವರು ತಮ್ಮ ಧೋರಣೆಗಳನ್ನು ಸ್ಪಷ್ಟಪಡಿಸುತ್ತಿದ್ದಾರೆ. ನಾವು ರಾಜ್ಯದಲ್ಲಿ ದಂಗೆಗಳಾಗಲು ಬಿಡುವುದಿಲ್ಲ. (ಭಾರತದಾದ್ಯಂತ ಯಾರು ದಂಗೆಗಳನ್ನು ನಡೆಸುತ್ತಿದ್ದಾರೆ, ಎಂಬುದು ಜನತೆಗೆ ತಿಳಿದಿದೆ ! – ಸಂಪಾದಕರು)