ಮಧ್ಯಪ್ರದೇಶದ ಭಾಜಪ ಸರಕಾರವು ದೇವಸ್ಥಾನಗಳ ಭೂಮಿರಹಿತ ಅರ್ಚಕರಿಗೆ ಪ್ರತಿತಿಂಗಳು ೫ ಸಾವಿರ ರೂಪಾಯಿಗಳ ಮಾನಧನ ನೀಡಲಿದೆ !

ಭೋಪಾಲ (ಮಧ್ಯಪ್ರದೇಶ) – ಭೂಮಿರಹಿತ ದೇವಸ್ಥಾನಗಳ ಅರ್ಚಕರಿಗೆ ಪ್ರತಿತಿಂಗಳು ೫ ಸಾವಿರ ರೂಪಾಯಿಗಳ ಮಾನಧನವನ್ನು ನೀಡುವ ಘೋಷಣೆಯನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶಿವರಾಜ ಸಿಂಹ ಚೌಹಾನರವರು ಮಾಡಿದ್ದಾರೆ. ಇಲ್ಲಿನ ಗುಫಾ ಮಂದಿರ ಪರಿಸರದಲ್ಲಿ ‘ಅಕ್ಷಯ ಉತ್ಸವ’ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಭಗವಾನ ಶ್ರೀ ಪರಶುರಾಮರ ೨೧ ಅಡಿ ಎತ್ತರದ ಮೂರ್ತಿಯನ್ನು ಅವರ ಕೈಗಳಿಂದ ಅನಾವರಣಗೊಳಿಸಲಾಯಿತು. ಅವರು ಈ ಸಮಯದಲ್ಲಿ ಮಾತನಾಡುತ್ತಿದ್ದರು. ‘ಶಾಲೆಯ ಪಠ್ಯಕ್ರಮದಲ್ಲಿ ಭಗವಾನ ಶ್ರೀ ಪರಶುರಾಮರಿಗೆ ಸಂಬಂಧಿಸಿದ ಪಾಠಗಳನ್ನು ಸೇರಿಸಲಾಗುವುದು ಎಂದು ಅವರು ಈ ಸಮಯದಲ್ಲಿ ಹೇಳಿದರು.

ದೇವಸ್ಥಾನಗಳ ವ್ಯವಸ್ಥಾಪನೆಯು ಪೂಜಾರಿಗಳ ಬಳಿಯೇ ಇರಬೇಕು !

ಮುಖ್ಯಮಂತ್ರಿ ಚೌಹಾನರವರು ಮಾತನಾಡುತ್ತ, ದೇವಸ್ಥಾನಗಳ ಸಂಪೂರ್ಣ ವ್ಯವಸ್ಥಾಪನೆಯು ಅರ್ಚಕರ ಕೈಯಲ್ಲಿಯೇ ಇರಬೇಕಿದೆ. ಇದರಲ್ಲಿ ಸರಕಾರವು ಯಾವುದೇ ಹಸ್ತಕ್ಷೇಪವನ್ನು ಮಾಡುವುದಿಲ್ಲ. ದೇವಸ್ಥಾನಗಳ ಭೂಮಿಯನ್ನು ಯಾವಾಗಲೂ ಮಾರಲಾಗುವುದಿಲ್ಲ. ಸರಕಾರವು ಎಂದಿಗೂ ದೇವಸ್ಥಾನಗಳ ಭೂಮಿಯನ್ನು ಹರಾಜು ಮಾಡುವುದಿಲ್ಲ. ಹಾಗೇನಾದರೂ ಮಾಡಬೇಕಾಗಿದ್ದರೆ ಅರ್ಚಕರೇ ಇದನ್ನು ಮಾಡುವರು. ಇದಕ್ಕಾಗಿ ಸಮಿತಿಯನ್ನು ಸ್ಥಾಪಿಸಲಾಗುವುದು. ಕೆಲವು ಕಡೆಗಳಲ್ಲಿ ಭೂಮಿಯನ್ನು ಮಾರಿರುವ ಮತ್ತು ಅಲ್ಲಿ ಗೊಂದಲ ನಿರ್ಮಾಣವಾಗಿರುವ ಮಾಹಿತಿ ದೊರೆತಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಮಧ್ಯಪ್ರದೇಶ ಸರಕಾರದ ಅಭಿನಂದನಾರ್ಹ ನಿರ್ಣಯ ! ಪ್ರತಿಯೊಂದು ರಾಜ್ಯ ಸರಕಾರವು ಇಂತಹ ನಿರ್ಣಯವನ್ನು ತೆಗೆದುಕೊಳ್ಳಬೇಕಿದೆ !