ನಿಷೇಧ ಹೇರಿದ ಅಧಿಕಾರಿಗಳ ವಿರುದ್ಧ ಕ್ರಮ ಯಾವಾಗ? - ರಮೇಶ್ ಶಿಂದೆ
ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಹಿಂದುತ್ವನಿಷ್ಠ ಸಂಘಟನೆಗಳ ಧರ್ಮ ಹೋರಾಟಕ್ಕೆ ಸಿಕ್ಕ ಯಶಸ್ಸು!

ಪುಣೆ – ಪುಣೆಯ ಐತಿಹಾಸಿಕ ‘ಮಹಾತ್ಮ ಫುಲೆ ವಾಡಾ’ ಆವರಣದಲ್ಲಿರುವ ಆಲದ ಮರದ (ವಟವೃಕ್ಷ) ಪೂಜೆಯ ಮೇಲೆ ಹೇರಲಾಗಿದ್ದ ನಿಷೇಧವನ್ನು ಪುರಾತತ್ವ ಇಲಾಖೆಯು ಹಿಂತೆಗೆದುಕೊಂಡಿದೆ. ಹಿಂದೂ ಜನಜಾಗೃತಿ ಸಮಿತಿ, ರಾಷ್ಟ್ರಭಕ್ತ ಅಧಿವಕ್ತಾ ಸಮಿತಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ, ಸುರಾಜ್ಯ ಅಭಿಯಾನ ಮತ್ತು ರಣರಾಗಿಣಿ ಶಾಖೆಯ ನಿಯೋಗವು ಪುರಾತತ್ವ ಇಲಾಖೆ, ಪೊಲೀಸ್ ಆಡಳಿತ ಮತ್ತು ಪುಣೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿ ಈ ನಿಷೇಧವನ್ನು ತಕ್ಷಣವೇ ತೆರವುಗೊಳಿಸುವಂತೆ ಒತ್ತಾಯಿಸಿತ್ತು. ಈ ಸಂಘಟಿತ ಪ್ರಯತ್ನಗಳಿಂದಾಗಿ ದೊಡ್ಡ ಯಶಸ್ಸು ಸಿಕ್ಕಿದ್ದು, ಆಡಳಿತ ಮಂಡಳಿ ತಲೆಬಾಗಬೇಕಾಗಿ ಬಂತು.
ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರಿಂದ ಪೊಲೀಸರಿಗೆ ಪತ್ರ!
ಹಿಂದುತ್ವನಿಷ್ಠರ ಪ್ರತಿಭಟನೆ ಮತ್ತು ಬೇಡಿಕೆಗಳನ್ನು ಗಣನೆಗೆ ತೆಗೆದುಕೊಂಡು, ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಾದ ಡಾ. ವಿಲಾಸ್ ವಹಾಣೆ ಅವರು ಖಡಕ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕರಿಗೆ ಪತ್ರ ಕಳುಹಿಸಿದ್ದಾರೆ. ಮಹಾತ್ಮ ಫುಲೆ ವಾಡಾ ಸ್ಮಾರಕವನ್ನು ರಾಜ್ಯ ಸಂರಕ್ಷಿತ ಎಂದು ಘೋಷಿಸುವ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯಗಳು ಮತ್ತು ಆಚರಣೆಗಳ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂದು ಅವರು ಸೂಚಿಸಿದರು. ವಟಪೂರ್ಣಿಮೆಯ ದಿನದಂದು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದೂ ಅವರು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂದೆ ಅವರು ಮಾತನಾಡಿ,

1. ಈ ನಿಷೇಧವು ಹಿಂದೂ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಮೇಲಿನ ದಾಳಿಯಾಗಿದೆ.
2. ಈ ಆಲದ ಮರದ ಬಳಿ ನಡೆಯುತ್ತಿದ್ದ ಸಾಂಪ್ರದಾಯಿಕ ವಟಸಾವಿತ್ರಿ ವ್ರತದ ಪೂಜೆ ನಿಲ್ಲಿಸಲು ಪುರಾತತ್ವ ಇಲಾಖೆಯು ತುಘಲಕ್ ಆದೇಶ ಹೊರಡಿಸಿತ್ತು. ಹಿಂದೂ ಜನಜಾಗೃತಿ ಸಮಿತಿಯ ವಿರೋಧ ಮತ್ತು ವಕೀಲರು ನೀಡಿದ ಕಾನೂನು ನೋಟಿಸ್‌ನಿಂದಾಗಿ ಅವರಿಗೆ ಪ್ರಜಾಪ್ರಭುತ್ವದ ಅರಿವಾಗಿದ್ದು, ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ’ ಎಂಬುದನ್ನು ಒಪ್ಪಿಕೊಂಡು ತಮ್ಮ ತುಘಲಕ್ ಆದೇಶವನ್ನು ಹಿಂಪಡೆದಿದ್ದಾರೆ.
3. ಈ ನಿರ್ಣಯಕ್ಕಾಗಿ ಫಡ್ನವೀಸ್ ಸರಕಾರಕ್ಕೆ ಅಭಿನಂದನೆಗಳು; ಆದರೆ ಈ ಪ್ರಕರಣದಲ್ಲಿ ಹಿಂದೂಗಳಿಗೆ ಅನಗತ್ಯವಾಗಿ ತೊಂದರೆ ನೀಡಲು ಯತ್ನಿಸಿದ ಪುರಾತತ್ವ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಮತ್ತು ಪ್ರಸ್ತುತ ಮಹಾರಾಷ್ಟ್ರದಲ್ಲಿ ಇಂತಹ ತುಘಲಕ್ ಆಡಳಿತ ನಡೆಯುವುದಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕೆಂದು ಸರಕಾರವನ್ನು ಒತ್ತಾಯಿಸುತ್ತೇವೆ.
ಈ ಯಶಸ್ಸಿನ ನಂತರ ಸಮಿತಿಯ ಶ್ರೀ. ರಮೇಶ್ ಶಿಂದೆ ಅವರು, “ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಮಹಿಳೆಯರು ಮಹಾತ್ಮ ಫುಲೆ ವಾಡಾಕ್ಕೆ ಬಂದು ಸಡಗರದಿಂದ ವಟವೃಕ್ಷದ ಪೂಜೆ ಮಾಡಬೇಕು ಮತ್ತು ನಮ್ಮ ಧಾರ್ಮಿಕ ಸಂಪ್ರದಾಯವನ್ನು ಉಳಿಸಿ ಈ ವಿಜಯದ ಆನಂದ ಆಚರಿಸಬೇಕು,” ಎಂದು ಕರೆ ನೀಡಿದರು.
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!