ಮೊಹರಂ ಮೆರವಣಿಗೆಯ ಮೂಲಕ ಹಿಂದೂಗಳಲ್ಲಿ ಭೀತಿ ನಿರ್ಮಿಸಲು ಯತ್ನ
‘ನೋಡಿ, ನಾವು ಮತ್ತೆ ಬಂದಿದ್ದೇವೆ’ ಎಂಬ ಸಂದೇಶವನ್ನೂ ಬರೆಯಲಾಗಿತ್ತು !

ಉಜ್ಜಯಿನಿ (ಮಧ್ಯಪ್ರದೇಶ) – ಬಡನಗರದಲ್ಲಿ ಜೂನ್ 23 ರ ರಾತ್ರಿ ಅಡಾನ್ ಗಲ್ಲಿಯಿಂದ ತೆಗೆಯಲಾದ ಮೊಹರಂ ಮೆರವಣಿಗೆಯಲ್ಲಿ ಭೂಮಿಯಿಂದ 40 ಅಡಿ ಎತ್ತರದಲ್ಲಿ ಕಾರೊಂದನ್ನು ತೂಗುಹಾಕಿ, ಉದ್ದೇಶಪೂರ್ವಕವಾಗಿ ಅದನ್ನು ಸ್ಫೋಟಿಸಿದ ಆಘಾತಕಾರಿ ಘಟನೆ ಇಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಕಾರನ್ನು ಕ್ರೇನ್ ಸಹಾಯದಿಂದ 40 ಅಡಿ ಎತ್ತರದಲ್ಲಿ ತೂಗುಹಾಕಲಾಗಿತ್ತು. ಅದರ ಮೇಲೆ ಇಬ್ಬರು ಯುವಕರು ನಿಂತು ಕೆಂಪು ಧ್ವಜಗಳನ್ನು ಹಾರಿಸುತ್ತಿದ್ದರು. ಇದರ ನಂತರ ಕಾರನ್ನು ಸ್ಫೋಟಿಸಲಾಯಿತು. ಈ ಕಾರಿನ ಮೇಲೆ ‘ಲೇ ಫಿರ್ ಆ ಗಯೇ’ (ನೋಡಿ, ನಾವು ಮತ್ತೆ ಬಂದಿದ್ದೇವೆ) ಎಂದು ಬರೆಯಲಾಗಿತ್ತು. (ಹಿಂದೂ ಬಹುಸಂಖ್ಯಾತ ಭಾರತದಲ್ಲಿ ‘ಭೀತಿ’ಯನ್ನು ಯಾರು ಹರಡುತ್ತಿದ್ದಾರೆ, ಹಿಂದೂಗಳೋ ಅಥವಾ ಮುಸಲ್ಮಾನರೋ ?, ಎಂಬುದು ಇದರಿಂದ ಬಹಿರಂಗವಾಗುತ್ತದೆ! – ಸಂಪಾದಕರು)
1. ವಿಡಿಯೋ ಪ್ರಸಾರವಾದ ನಂತರ ಹರಿದ್ವಾರದ ಸಂತ ಸ್ವಾಮಿ ಶಿವಾನಂದ ಗಿರಿ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅವರು ಸಾಮಾಜಿಕ ಮಾಧ್ಯಮದಲ್ಲಿ, ಈ ವಿಡಿಯೋದ ಮೂಲಕ ‘ನಾವು ಕಾಫಿರರ (ಇಸ್ಲಾಂ ನಂಬದವರ) ವಾಹನಗಳನ್ನು ಇದೇ ರೀತಿ ಉಡಾಯಿಸುತ್ತೇವೆ’, ಎಂಬ ಸಂದೇಶವನ್ನು ನೀಡಿದಂತಿದೆ ಎಂದು ಬರೆದಿದ್ದಾರೆ.
2. ‘ಹಿಂದೂ ಜಾಗರಣ ಮಂಚ್’ನ ರಿತೇಶ ಮಾಹೇಶ್ವರಿ ಅವರು ಮಾತನಾಡಿ, ಮೊಹರಂ ಮೆರವಣಿಗೆಯ ಸಮಯದಲ್ಲಿ ದೊಡ್ಡ ಕ್ರೇನ್ ಒಂದರ ಮೇಲೆ ಕಾರನ್ನು ತೂಗುಹಾಕಲಾಗಿತ್ತು. ಅದರ ಮೇಲೆ ಹಲವಾರು ಆಕ್ಷೇಪಾರ್ಹ ಫಲಕಗಳನ್ನು ಹಾಕಲಾಗಿತ್ತು. ಈ ಪ್ರಕರಣದ ಕುರಿತು ಜಿಲ್ಲಾಡಳಿತವು ತನಿಖೆ ನಡೆಸಬೇಕು ಎಂದು ಹೇಳಿದರು.
4 ಜನರ ವಿರುದ್ಧ ದೂರು ದಾಖಲು !ಉಜ್ಜಯಿನಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕರನದೀಪ ಸಿಂಗ್ ಅವರು ಮಾತನಾಡಿ, ಈ ಪ್ರಕರಣದಲ್ಲಿ ಮೆರವಣಿಗೆಯ ಆಯೋಜಕ ಶೋಯೆಬ್ ಖಾನ್, ಕಾರಿನ ಮೇಲೆ ಧ್ವಜ ಹಾರಿಸುತ್ತಿದ್ದ ತಾಲೀಮ್ ಖಾನ್ ಮತ್ತು ಜಾಹಿದ್ ಖಾನ್ ಹಾಗೂ ಕ್ರೇನ್ ಮಾಲೀಕನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಶೀಘ್ರದಲ್ಲೇ ನಾಲ್ವರನ್ನೂ ಬಂಧಿಸಲಾಗುವುದು ಎಂದು ತಿಳಿಸಿದರು. |
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ : Champat Rai Resignation