ಗಂಗೆ ಎಂದಿಗೂ ಬತ್ತುವುದಿಲ್ಲ ! – ಸಂಶೋಧನೆಯ ನಿಷ್ಕರ್ಷ

ಹವಾಮಾನ ಏರುಪೇರುಗಳಿಂದ ಯಾವುದೇ ರೀತಿಯಲ್ಲಿಯೂ ಹಿಮಾಲಯದ ಮೇಲೆ ಪರಿಣಾಮವಾಗುತ್ತಿಲ್ಲ ಎಂಬ ವಿವೇಚನೆ

ನವ ದೆಹಲಿ – ಭಾರತದ ಕೋಟಿಗಟ್ಟಲೆ ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ಗಂಗಾನದಿಯು ಎಂದಿಗೂ ಒಣಗುವುದಿಲ್ಲ, ಎಂದು ಒಂದು ಸಂಶೋಧನೆಯಿಂದ ತಿಳಿದು ಬಂದಿದೆ. ‘ಕ್ಯಟೊ ಇನ್ಸ್ಟಿಟ್ಯೂಟ್’ನ ಸಂಶೋಧಕರಾದ ಸ್ವಾಮೀನಾಥನ್ ಎಸ್. ಅಯ್ಯರ ಹಾಗೂ ಗ್ಲೆಶಿಯೊಲಾಜಿಸ್ಟ ವಿಜಯ ರೈನಾರವರು ಸಂಶೋಧನೆ ನಡೆಸಿದ್ದಾರೆ. ಈ ಮೊದಲು ‘ಇಂಟರನ್ಯಾಶನಲ ಪ್ಯಾನಲ ಆನ ಕ್ಲೈಮೆಟ್ ಚೇಂಜ್’ನ ಅಭ್ಯಾಸಕ್ಕೆ ಅನುಸಾರವಾಗಿ ‘ಹವಾಮಾನ ಬದಲಾವಣೆಯಿಂದ ೨೦೩೫ರಲ್ಲಿ ಹಿಮಾಲಯದಲ್ಲಿರುವ ಮಂಜು ಕರಗಿ ಹೋಗಿ ಗಂಗಾ ನದಿಯು ಒಣಗಿ ಹೋಗುವುದು’, ಎಂದು ಹೇಳಿತ್ತು. ಆದರೆ ಈಗಿನ ಸಂಶೋಧನೆಯು ವಿರುದ್ಧವಾದ ನಿಷ್ಕರ್ಷ ತೆಗೆದಿದೆ.

ಹಿಮಾಲಯದಲ್ಲಿ ಮಂಜು ಕರಗುವ ಪ್ರಕ್ರಿಯೆಯು ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಇದೆ !

‘ಕ್ಯಟೊ ಇನ್ಸ್ಟಿಟ್ಯೂಟ್’ನ ಸಂಶೋಧಕರ ಅಭಿಪ್ರಾಯ – ಹವಾಮಾನ ಬದಲಾವಣೆಯಿಂದ ಹಿಮಾಲಯದಲ್ಲಿರುವ ಮಂಜು ಕರಗುವುದಿಲ್ಲ. ಮಂಜು ಕರಗುವ ಪ್ರಕ್ರಿಯೆಯು ಹಿಮಯುಗದ ಸಮಾಪ್ತಿಯ ಬಳಿಕ ಅಂದರೆ ಕಳೆದ ೧೧ ಸಾವಿರ ೭೦೦ ವರ್ಷಗಳಿಂದ ನಡೆಸುಯುತ್ತಲೇ ಇದೆ.

ಕರಗುವ ಮಂಜು ನೀರಿನ ಪ್ರಮಾಣವು ಗಂಗಾನದಿಯಲ್ಲಿ ಕೇವಲ ಶೇಕಡ ೧ ರಷ್ಟು ಅಷ್ಟೇ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ‘ಇಸ್ರೊ’ನ ಉಪಗ್ರಹದ ಮೂಲಕ ಮಾಡಲಾದ ಇತ್ತೀಚಿನ ಅಭ್ಯಾಸಕ್ಕೆ ಅನುಸಾರವಾಗಿ ೨೦೦೨ ರಿಂದ ೨೦೧೧ರ ಕಾಲಾವಧಿಯಲ್ಲಿ ಹಿಮಾಲಯದಲ್ಲಿನ ಬಹುತೇಕ ಪರ್ವತಗಳ ಮೇಲಿರುವ ಮಂಜು ಸ್ಥಿರವಾಗಿದೆ. ಕೆಲವು ಪರ್ವತಗಳು ಅಗಲ ಕಿರಿದಾಗಿದೆ. ಗಂಗಾನದಿಯು ಮೂಲವಾಗಿರುವ ಗಂಗೋತ್ರಿಯಲ್ಲಿರುವ ಮಂಜಿನ ಪರ್ವತವು ಮುಂದೆ ೩ ಸಾವಿರ ವರ್ಷಗಳವರೆಗೂ ಇರಲಿದೆ; ಏಕೆಂದರೆ ಅಲ್ಲಿ ಪ್ರತೀ ವರ್ಷ ಮಂಜು ಬೀಳುತ್ತಲೇ ಇರುತ್ತದೆ. ಈ ಮಂಜು ವಸಂತ ಋತುವಿನಲ್ಲಿ ಕರಗಲು ಪ್ರಾರಂಭವಾಗುತ್ತದೆ ಹಾಗೂ ಬೇಸಿಗೆಯವರೆಗೂ ಅದು ಗಂಗಾನದಿಗೆ ತಲುಪುತ್ತದೆ. ಅಂತಹ ಮಂಜಿನ ನೀರು ಗಂಗಾನದಿಯಲ್ಲಿನ ಕೇವಲ ಶೇಕಡ ೧ ರಷ್ಟು ಇದೆ. ಇಲ್ಲಿಯವರೆಗೂ ‘ಗಂಗಾನದಿಯಲ್ಲಿ ಹಿಮಾಲಯದ ಮಂಜುಗಡ್ಡೆಯಿಂದ ನೀರು ಬರುತ್ತಿತ್ತು’, ಎಂದು ಹೇಳಲಾಗುತ್ತಿತ್ತು; ಆದರೆ ಪ್ರತ್ಯಕ್ಷವಾಗಿ ಹಾಗಿಲ್ಲ ಎಂದು ಈ ಸಂಶೋಧನೆಯಲ್ಲಿ ಹೇಳಲಾಗಿದೆ. ಮಳೆಯ ನೀರು ಹಾಗೂ ಹಿಮಪಾತದಿಂದ ಕೂಡ ನದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಬರುತ್ತಿರುತ್ತದೆ. ಹವಾಮಾನ ಬದಲಾವಣೆಯಿಂದ ಉಷ್ಣತೆ ಹೆಚ್ಚಾಗುತ್ತಿದೆ. ಆದ್ದರಿಂದ ಸಮುದ್ರದಲ್ಲಿನ ನೀರು ದೊಡ್ಡ ಪ್ರಮಾಣದಲ್ಲಿ ಹಬೆಯಾಗುತ್ತಿದೆ. ಆದ್ದರಿಂದ ಮಳೆ ಕೂಡ ಚೆನ್ನಾಗಿ ಆಗುತ್ತದೆ ಹಾಗೂ ನದಿಗಳಿಗೆ ನೀರು ಬರುತ್ತದೆ.