ಪ್ರಧಾನಿಮಂತ್ರಿ ಮೋದಿ ‘ಅಹಮದಾಬಾದ’ನ್ನು ‘ಕರ್ಣಾವತಿ’ಯಾಗಿಸಲು ಏಕೆ ಒಪ್ಪುತ್ತಿಲ್ಲ ? – ಡಾ. ಸುಬ್ರಹ್ಮಣ್ಯಮ್‌ ಸ್ವಾಮಿ

ನಿನ್ನೆ ನಾನು ಸಂಪೂರ್ಣ ದಿನವನ್ನು ಅಹಮದಾಬಾದಿನಲ್ಲಿ ಕಳೆದೆನು. (ಇದರ ಹೆಸರೂ ಇಂದಿಗೂ ಕರ್ಣಾವತಿ ಆಗಲಿಲ್ಲ.) ಪ್ರಧಾನಿ ಮೊದಿಯವರು ಈ ಹೆಸರಿನ ಬದಲಾವಣೆಯ ಕಾರ್ಯಾಚರಣೆಯನ್ನು ಮಾಡಲು ನಿರಾಕರಿಸುತ್ತಿದ್ದಾರೆ, ಅವರೇ ೨೦೧೩ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಕೇಂದ್ರಕ್ಕೆ ‘ಕರ್ಣಾವತಿ’ ಎಂಬ ಹೆಸರು ನೀಡಲು ಸೂಚಿಸಿದ್ದರು

ಉತ್ತರಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ ಮಾಡಿ ಸಾಮೂಹಿಕ ಬಲಾತ್ಕಾರ

ಇಲ್ಲಿನ ಓರ್ವ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಅಪಹರಿಸಿ ಆಕೆಯನ್ನು ಭೋಪಾಲಕ್ಕೆ ಒಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಯಿತು. ಅನಂತರ ಸಂತ್ರಸ್ತೆಯು ಈ ಬಗ್ಗೆ ದೂರ ನೀಡಲು ಪೊಲೀಸ ಠಾಣೆಗೆ ಹೋದಾಗ ಆಕೆಯ ಮೇಲೆ ಪೊಲೀಸ ಅಧಿಕಾರಿಯೂ ಬಲಾತ್ಕಾರ ಮಾಡಿದನು.

ಉತ್ತರಪ್ರದೇಶದಲ್ಲಿನ ಧಾರ್ಮಿಕ ಸ್ಥಳಗಳಲ್ಲಿರುವ ೧ ಲಕ್ಷ ಭೋಂಗಾಗಳನ್ನು ಇಳಿಸಲಾಯಿತು ! – ಯೋಗಿ ಆದಿತ್ಯನಾಥ

ಉತ್ತರಪ್ರದೇಶ ರಾಜ್ಯದಲ್ಲಿನ ಧಾರ್ಮಿಕ ಸ್ಥಳಗಳಲ್ಲಿದ್ದ ೧ ಲಕ್ಷ ಭೋಂಗಾಗಳನ್ನು ತೆರವುಗೊಳಿಸಲಾಗಿದೆ, ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ನೀಡಿದ್ದಾರೆ. ‘ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭೋಂಗಾಗಳನ್ನು ತೆರವುಗೊಳಿಸಿದ್ದರಿಂದ ರಾಜ್ಯದಲ್ಲಿನ ಗದ್ದಲವು ಕಡಿಮೆಯಾಗಿದೆ.

ತಮ್ಮ ಮೇಲಿನ ಅಪರಾಧದ ಮಾಹಿತಿಯನ್ನು ಮುಚ್ಚಿಟ್ಟ ಕಾರಣದಿಂದ ಯಾರನ್ನೂ ನೌಕರಿಯಿಂದ ತೆಗೆಯಲು ಸಾಧ್ಯವಿಲ್ಲ !- ಸರ್ವೋಚ್ಚ ನ್ಯಾಯಾಲಯ

ತಮ್ಮ ಮೇಲಿನ ಅಪರಾಧದ ಮಾಹಿತಿಯನ್ನು ಮುಚ್ಚಿಟ್ಟ ಕಾರಣದಿಂದ ಯಾರನ್ನೂ ಹಿಂದೆಮುಂದೆ ಯೋಚಿಸದೇ ನೌಕರಿಯಿಂದ ತೆಗೆದು ಹಾಕುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಖಂಡಪೀಠವು ತೀರ್ಪು ನೀಡಿದೆ. ಈ ಸಂದರ್ಭದಲ್ಲಿ ದೆಹಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಪಡಿಸಿದೆ.

ನನ್ನ ಬಂಧನವು ಮುಖ್ಯಮಂತ್ರಿ ವಿಜಯನ್ ಇವರಿಂದ ಜಿಹಾದಿಗಳಿಗೆ ನೀಡಿರುವ ರಮಝಾನ ಉಡುಗೊರೆ – ಮಾಜಿ ಶಾಸಕ ಪಿ.ಸಿ. ಜಾರ್ಜ

ನನ್ನ ಬಂಧನವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಮಝಾನ ನಿಮಿತ್ತ ಭಯೋತ್ಪಾದಕ ಮುಸಲ್ಮಾನರಿಗೆ ನೀಡಿರುವ ಉಡುಗೊರೆಯಾಗಿದೆಯೆಂದು ಮಾಜಿ ಶಾಸಕ ಮತ್ತು ಕಾಂಗ್ರೆಸ್ಸಿನ ಮಾಜಿ ಮುಖಂಡ ಪಿ.ಸಿ. ಜಾರ್ಜ ಟೀಕಿಸಿದ್ದಾರೆ.

ಮಹಾರಾಷ್ಟ್ರದ ಅನೇಕ ಸ್ಥಳಗಳಲ್ಲಿ ಮಸೀದಿ ಎದುರು ಮಹಾರಾಷ್ಟ್ರ ನವನಿರ್ಮಾಣ ಸೇನೆ ವತಿಯಿಂದ ಹನುಮಾನ ಚಾಲಿಸ ಪಠಣ !

ಮೆ ೩ ರ ನಂತರ ಮಹಾರಾಷ್ಟ್ರದ ಮಸೀದಿಗಳ ಮೇಲಿನ ಭೋಂಗಾ ತೆರವುಗೊಳಿಸದೇ ಇದ್ದರೆ ಮೆ ೪ ರಿಂದ ಮಸೀದಿ ಎದುರು ಧ್ವನಿವರ್ಧಕಗಳಲ್ಲಿ ದುಪ್ಪಟ್ಟು ಧ್ವನಿಯಲ್ಲಿ ಹನುಮಾನ್ ಚಾಲೀಸಾ ಹಾಕಲಾಗುವುದು ಎಂಬ ಎಚ್ಚರಿಕೆ ಮನಸೆ ಅಧ್ಯಕ್ಷ ರಾಜ ಠಾಕರೆ ಇವರು ಇಂದು ಇಲ್ಲಿಯ ಸಭೆಯಲ್ಲಿ ನೀಡಿದ್ದರು.

ಸನಾತನ ಪ್ರಭಾತ ನಿಯತಕಾಲಿಕೆಗಳ ಇ-ಪೇಪರ್ ಆಳಂದಿ (ಮಹಾರಾಷ್ಟ್ರ) ಯಲ್ಲಿ ಲೋಕಾರ್ಪಣೆ !

ದೇಶದಲ್ಲಿ ನಡೆಯುತ್ತಿರುವ ಪರಿವರ್ತನೆಯಲ್ಲಿ ಸನಾತನ ಪ್ರಭಾತ ದೊಡ್ಡ ಪ್ರಮಾಣದ ಯೋಗದಾನವಿದೆ – ಪರಮಪೂಜ್ಯ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ

ದೇಶದಲ್ಲಿ ಭಾಜಪ ’ಸಣ್ಣ ಪಾಕಿಸ್ತಾನ’ ಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಯಂತೆ ಮೆಹಬೂಬಾ ಮುಫ್ತಿ ಪ್ರಕಾರ !

ಭಾರತದಲ್ಲಿ ಯಾರು ಸಣ್ಣ ಪಾಕಿಸ್ತಾನಗಳನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಎಲ್ಲರಿಗೂ ತಿಳಿದಿದೆ. ಅದರಿಂದ ಮುಫ್ತಿಯವರ ಹೇಳಿಕೆಯಿಂದ ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಎಂಬ ಗಾದೆ ನೆನಪಾಗುತ್ತದೆ!

ಮುಸಲ್ಮಾನ ಪುರುಷರಿಗೆ ಬಹುಪತ್ನಿತ್ವದ ಅನುಮತಿ ನೀಡಬಾರದು !- ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಮುಸಲ್ಮಾನ ಪುರುಷರಿಗೆ ಅವರ ಮೊದಲ ಪತ್ನಿಯ ಅನುಮತಿಯಿಲ್ಲದೇ ಎರಡನೇ ಅಥವಾ ಬಹುವಿವಾಹ ಮಾಡಿಕೊಳ್ಳಲು ಅನುಮತಿಯನ್ನು ನೀಡಬಾರದು ಎಂದು ಕೋರಿ, ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ರೇಶ್ಮಾ ಹೆಸರಿನ 28 ವರ್ಷದ ಮುಸಲ್ಮಾನ ಮಹಿಳೆಯು ದಾಖಲಿಸಿದ್ದಾಳೆ.

ರಾಜ ಠಾಕರೆಯವರ ವಿರುದ್ಧ ಪ್ರಥಮವರ್ಗ ನ್ಯಾಯಾಲಯದಿಂದ ಬಂಧನದ ವ್ಯಾರಂಟ !

ಮನಸೆಯ ಅಧ್ಯಕ್ಷರಾದ ರಾಜ ಠಾಕರೆಯವರ ವಿರುದ್ಧ ಸಾಂಗಲೀಯ ಶಿರಾಳಾ ಪ್ರಥಮವರ್ಗ ನ್ಯಾಯಾಲಯವು ಅಜಾಮೀನುಪಾತ್ರ ಬಂಧನ ವ್ಯಾರಂಟ ನೀಡಿದೆ. ಏಪ್ರಿಲ ೬ರಂದು ಈ ವ್ಯಾರಂಟ ಅನ್ನು ಜಾರಿಗೊಳಿಸಲಾಗಿದ್ದು ; ಆದರೆ ಅದರ ಮೇಲೆ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.