‘ನನ್ನ ಕಾಳಿ ಮಾತೆಯು ಹಿಂದುತ್ವವನ್ನು ಧ್ವಂಸಗೊಳಿಸುತ್ತಾಳೆ !’

ಲೀನಾ ಮಣೀಮೇಕಲಯಿಯವರ ಶ್ರೀ ಮಹಾಕಾಳಿ ಮಾತೆಯ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌

ನವದೆಹಲಿ – ‘ಕಾಲೀ’ ಮಾಹಿತಿ ಚಿತ್ರದ ನಿರ್ಮಾಪಕರಾದ ಲೀನಾ ಮಣೀಮೇಕಲಯಿಯವರು ಹೊಸ ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ ಅವರು ‘ನನ್ನ ಕಾಲಿಯು ’ಕ್ವೀರ; (ವಿಚಿತ್ರ) ಇದ್ದಾಳೆ. ಆಕೆಯು ಒಂದು ಮುಕ್ತ ಆತ್ಮವಾಗಿದ್ದಾಳೆ. ಅದು ಪುರುಷಪ್ರಾಧಾನ್ಯತೆಯ ಮೇಲೆ ಉಗುಳುತ್ತಾಳೆ. ಅವಳು ಹಿಂದುತ್ವವನ್ನು ಧ್ವಂಸಗೊಳಿಸುತ್ತಾಳೆ. ಅವಳು ಬಂಡವಾಳಶಾಹಿಯ ನಾಶ ಮಾಡುತ್ತಾಳೆ ಹಾಗೂ ತನ್ನ ಸಾವಿರಾರು ಕೈಗಳಿಂದ ಎಲ್ಲರನ್ನೂ ಆಲಂಗಿಸುತ್ತಾಳೆ’ ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಸತತವಾಗಿ ಹಿಂದೂಗಳ ದೇವತೆ ಹಾಗೂ ಹಿಂದೂಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಲೀನಾ ಮಣೀಮೇಕಲಯಿರವರ ಮೇಲೆ ಕಾರ್ಯಾಚರಣೆ ಮಾಡುವಂತೆ ಭಾರತ ಸರಕಾರವು ಈಗ ಕೆನಡಾ ಸರಕಾರದ ಮೇಲೆ ಒತ್ತಡ ಹೇರಬೇಕಿದೆ !